ಬಿಜೆಪಿಗೆ 365 ಪ್ಲಸ್ ಗುರಿ, ನಮೋ ಭಾರತ್ ಪಡೆ ಅಸ್ತಿತ್ವಕ್ಕೆ

By Web DeskFirst Published Sep 5, 2018, 6:45 PM IST
Highlights

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಕತೆ ಗೊತ್ತೆ ಇದೆ.  ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಜನರನ್ನು ತಲುಪಿದ ರೀತಿ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಬಿಜೆಪಿಗೆ ಅಧಿಕಾರ ತಂದುಕೊಡುವಲ್ಲಿ ನೆರವಾಗಿದ್ದನ್ನು ಒಪ್ಪಿಕೊಳ್ಳಲೇಬೇಕು.  ಈಗ ಮತ್ತೆ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಲೋಕಸಭಾ ಚುನಾವಣೆ ತಿಂಗಳುಗಳೂ ಇರುವಾಗಲೆ ಬಿಜೆಪಿ ಟೊಂಕ ಕಟ್ಟಿದೆ. ‘ನಮೋ ಭಾರತ್‘ ಹೆಸರಿನ ವೆಬ್ ತಾಣದ ಮೂಲಕ ಅಪಾರ ಜನರನ್ನು ಏಕಕಾಲಕ್ಕೆ ತಲುಪಲು ಮುಂದಾಗಿದೆ.

ಬೆಂಗಳೂರು[ಸೆ.5]  ಇದೊಂದು ಹೊಸ ವೆಬ್ ತಾಣ. ‘ನಮೋ ಭಾರತ್’  ಹೆಸರಿನ ತಾಣದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರತಿದಿನದ ಬೆಳವಣಿಗೆಯ ಸಕಲ ಮಾಹಿತಿ ಸಿಗುತ್ತದೆ.  ಹಿಂದೆ ನಮೋ ಬ್ರಿಗೇಡ್ ಮೂಲಕ ನರೇಂದ್ರ ಮೋದಿ ಸಾಧನೆಯನ್ನು ಜನರಿಗೆ ತಲುಪಿಸುವ ವ್ಯವಸ್ಥೆಯಾಯಿತು. ಮುಂದೆ ಅದು ದೇಶದ ಚುನಾವಣಾ ಇತಿಹಾಸದಲ್ಲಿ ಬೇರೆ ಬದಲಾವಣೆಗೆ ಕಾರಣವಾಯಿತು.

ಈ ಬಾರಿ ಬಿಜೆಪಿ 365 ಪ್ಲಸ್ ಎನ್ನುವ ಕಲ್ಪನೆಯೊಂದಿಗೆ ಹೊರಟಿದೆ. ಅದಕ್ಕಾಗಿ ಪಡೆಯೊಂದನ್ನು ಸಿದ್ಧಮಾಡಿದೆ. ಆ ಪಡೆಗೆ ಜನರನ್ನು, ಅಭಿಮಾನಿಗಳನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಸಂಪೂರ್ಣ ವಿವರಗಳನ್ನು ನಮೋ ಭಾರತದಲ್ಲಿ ವೀಕ್ಷಣೆ ಮಾಡಹುದು. 

ಸೋಶಿಯಲ್ ಮೀಡಿಯಾದಲ್ಲಿ ಸದಾ ಹೇಗೆ ಸಂಪರ್ಕದಲ್ಲಿರಬೇಕು? ವಾಟ್ಸಪ್ ಗ್ರೂಪ್ ಗಳ ಮೂಲಕ ಯಾವ ಬದಲಾಣೆ ತರಬಹದು? ಸ್ವಯಂ ಸೇವಕರಾಗಿ ನೋಂದಾವಣೆ ಮಾಡಿಕೊಳ್ಳುವುದು ಹೇಗೆ? ಎಂಬ ಎಲ್ಲ ವಿವರಗಳು ಇಲ್ಲಿ  ಲಭ್ಯವಿದೆ.

ವಿವರಗಳಿಗೆ ಈ ನಮೋ ಭಾರತ್ ಪೇಜ್ ಗೆ ಭೇಟಿ ನೀಡಬಹುದು

 

click me!