ಹೈಕಮಾಂಡ್ ಬುಲಾವ್ : ದಿನೇಶ್ ಗುಂಡೂರಾವ್ ದೌಡು

By Web DeskFirst Published Sep 5, 2018, 5:42 PM IST
Highlights

ಮೈತ್ರಿ ಸರ್ಕಾರಕ್ಕೆ ಬೆದರಿಕೆಯೊಡ್ಡಿರುವ ರಮೇಶ್ ಜಾರಕಿಹೊಳಿ ನೇತೃತ್ವದ 12 ಶಾಸಕರು ಸಿದ್ದರಾಮಯ್ಯ ಬಣದ ಶಾಸಕರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಡಿಕೆಶಿ ಹೈಕಮಾಂಡಿಗೆ ದೂರಿದ್ದಾರೆ.

ಬೆಂಗಳೂರು[ಸೆ.05]: ರಾಜ್ಯ ಕಾಂಗ್ರೆಸಿನಲ್ಲಿ ಗರಿಗೆದರಿದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಹೈಕಮಾಂಡ್  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದೆ.

ಈ ಹಿನ್ನಲೆಯಲ್ಲಿ  ನಾಳೆ ದಿನೇಶ್ ಗುಂಡೂರಾವ್ ನವದೆಹಲಿಗೆ ಭೇಟಿ ನೀಡಲಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್ ಜೊತೆ ಸಭೆ ನಡೆಸಲಿದ್ದಾರೆ. ಇಂದು ರಾಜ್ಯ ಮೈತ್ರಿ ಸರ್ಕಾರದಲ್ಲಾಗುತ್ತಿರುವ ಬೆಳವಣಿಗೆ ಹಾಗೂ ಕಾಂಗ್ರೆಸ್ ಭಿನ್ನಚಟುವಟಿಗೆಗಳ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.  ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಆಗಿರುವ ಬಗ್ಗೆಯೂ ಹೈಕಮಾಂಡಿಗೆ ಡಿಕೆಶಿ ಮಾಹಿತಿ ರವಾನಿಸಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಬೆದರಿಕೆಯೊಡ್ಡಿರುವ ರಮೇಶ್ ಜಾರಕಿಹೊಳಿ ನೇತೃತ್ವದ 12 ಶಾಸಕರು ಸಿದ್ದರಾಮಯ್ಯ ಬಣದ ಶಾಸಕರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಡಿಕೆಶಿ ಹೈಕಮಾಂಡಿಗೆ ದೂರಿದ್ದಾರೆ. ಇವೆಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಗುಂಡೂರಾವ್ ಅವರನ್ನು ಆಹ್ವಾನಿಸಿದ್ದು ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣಾ ತಯಾರಿ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.    

click me!