'ನಮ್ಮ ಮೆಟ್ರೋ'ಗೆ ಓಲಾ, ಉಬರ್ ಕ್ಯಾಬ್ ಕನೆಕ್ಟ್: ಮೆಟ್ರೋದೊಂದಿಗೆ ಕ್ಯಾಬ್ ಒಪ್ಪಂದ ದೇಶದಲ್ಲೇ ಮೊದಲು

By Suvarna Web Desk  |  First Published Feb 23, 2017, 5:56 AM IST

ನಮ್ಮ ಮೆಟ್ರೋ'ದಲ್ಲಿ ಸಂಚರಿಸುವವರು ಮೆಟ್ರೋ ಇಳಿದು ಹೇಗೆ ಮುಂದೆ ಹೋಗುವುದು ಎಂಬ ಚಿಂತೆ ಬಿಟ್ಟು ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲೇ ಕ್ಯಾಬ್‌ ಬುಕ್‌ ಮಾಡಿ ಮುಂದಿನ ಪ್ರಯಾಣ ಕೈಗೊಳ್ಳಬಹುದು.
ಮಾಚ್ ‌ರ್‍ನಿಂದ ಮೆಟ್ರೋ ನಿಲ್ದಾಣಗಳಲ್ಲಿ ಓಲಾ ಅಥವಾ ಉಬರ್‌ ಕ್ಯಾಬ್‌ ಬುಕ್ಕಿಂಗ್‌ಗೆ ಅವಕಾಶವಾಗಲಿದ್ದು ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲು ನಿಗಮವು ಓಲಾ ಮತ್ತು ಉಬರ್‌ನೊಂದಿಗೆ ಬುಧವಾರ ಒಡಂಬಡಿಕೆಗೆ ಸಹಿ ಹಾಕಿವೆ. ಮೆಟ್ರೋದೊಂದಿಗೆ ಕ್ಯಾಬ್‌ ಸಂಸ್ಥೆ ಒಪ್ಪಂದ ದೇಶದಲ್ಲಿ ಇದೇ ಮೊದಲನೆಯದಾಗಿದೆ.


ಬೆಂಗಳೂರು(ಫೆ.23): ‘ನಮ್ಮ ಮೆಟ್ರೋ'ದಲ್ಲಿ ಸಂಚರಿಸುವವರು ಮೆಟ್ರೋ ಇಳಿದು ಹೇಗೆ ಮುಂದೆ ಹೋಗುವುದು ಎಂಬ ಚಿಂತೆ ಬಿಟ್ಟು ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲೇ ಕ್ಯಾಬ್‌ ಬುಕ್‌ ಮಾಡಿ ಮುಂದಿನ ಪ್ರಯಾಣ ಕೈಗೊಳ್ಳಬಹುದು.
ಮಾಚ್‌ರ್‍ನಿಂದ ಮೆಟ್ರೋ ನಿಲ್ದಾಣಗಳಲ್ಲಿ ಓಲಾ ಅಥವಾ ಉಬರ್‌ ಕ್ಯಾಬ್‌ ಬುಕ್ಕಿಂಗ್‌ಗೆ ಅವಕಾಶವಾಗಲಿದ್ದು ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲು ನಿಗಮವು ಓಲಾ ಮತ್ತು ಉಬರ್‌ನೊಂದಿಗೆ ಬುಧವಾರ ಒಡಂಬಡಿಕೆಗೆ ಸಹಿ ಹಾಕಿವೆ. ಮೆಟ್ರೋದೊಂದಿಗೆ ಕ್ಯಾಬ್‌ ಸಂಸ್ಥೆ ಒಪ್ಪಂದ ದೇಶದಲ್ಲಿ ಇದೇ ಮೊದಲನೆಯದಾಗಿದೆ.

ಮೆಟ್ರೋ ಇಳಿಯುತ್ತಿದ್ದಂತೆ ಮುಂದಿನ ಪ್ರಯಾಣಕ್ಕಾಗಿ ಬಿಎಂಟಿಸಿ ಅಥವಾ ಕ್ಯಾಬ್‌ಗಳನ್ನು ನೆಚ್ಚಿಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಪ್ರಯಾಣಿಕರು ಮೆಟ್ರೋ ರೈಲು ಇಳಿದ ಬಳಿಕ ಕ್ಯಾಬ್‌ಗಾಗಿ ಬುಕ್‌ ಮಾಡಿ ಬಳಿಕವಷ್ಟೇ ಪ್ರಯಾಣ ಮುಂದುವರಿಸ​ಬೇಕಾಗಿತ್ತು. ಮಾತ್ರವಲ್ಲ ಸ್ಮಾರ್ಟ್‌ ಫೋನ್‌ ಇಲ್ಲದವರು ಕ್ಯಾಬ್‌ ಬುಕ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ.

Latest Videos

undefined

ಆದರೆ, ಇನ್ನು ಮುಂದೆ ಮೆಟ್ರೋ ನಿಲ್ದಾಣಗಳಲ್ಲೇ ಓಲಾ, ಉಬರ್‌ ಕಿಯಾಸ್ಕ್‌ಗಳು ಇರುವುದರಿಂದ ಪ್ರಯಾ​ಣಿಕರು ಮೆಟ್ರೋದಿಂದ ಇಳಿದು ಪ್ರಿ ಪೇಯ್ಡ್‌ ಟ್ಯಾಕ್ಸಿ, ಪ್ರಿಪೇಯ್ಡ್‌ ಆಟೋದಂತೆ ಕಿಯಾಸ್ಕ್‌ಗಳಲ್ಲಿ ಕ್ಯಾಬ್‌ ಬುಕ್‌ ಮಾಡಬಹುದು. ಈ ಮೂಲಕ ಮೆಟ್ರೋ ಸೇವೆ ಗ್ರಾಹಕರ ಮನೆ ಬಾಗಿಲು ತಲುಪುವಂತಾಗುತ್ತದೆ ಎಂದು ಓಲಾ ಸಂಸ್ಥೆ ಹೇಳಿದೆ. ಮೊದಲ ಹಂತದಲ್ಲಿ ಒಟ್ಟು 7 ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ.

ಪಾರ್ಕಿಂಗ್‌ ಸಮಸ್ಯೆ: ಓಲಾ, ಉಬರ್‌ ಸಂಸ್ಥೆಯ ಪ್ರತಿನಿಧಿ​ಗಳು ಕೂಡ ಕಿಯೋಸ್ಕ್‌ಗಳಲ್ಲಿ ಲಭ್ಯರಿದ್ದು ಕ್ಯಾಬ್‌ ಬುಕ್ಕಿಂಗ್‌ ಮಾಡುತ್ತಾರೆ. ಪ್ರಯಾಣಿಕರು ಅತಿ ಹತ್ತಿರ​ದಲ್ಲಿ​ರುವ ಕ್ಯಾಬ್‌ ಮೂಲಕ ಅಥವಾ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿ​ಂಗ್‌ ಸಮಸ್ಯೆ ಇಲ್ಲದೇ ಹೋದಲ್ಲಿ ಅಲ್ಲೇ ಪಾರ್ಕ್ ಮಾಡಿ​ರುವ ಕ್ಯಾಬ್‌ಗಳಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.

ಮಾಚ್‌ರ್‍ನಿಂದ ಮೆಟ್ರೋದ ಟ್ರಿನಿಟಿ, ಕಬ್ಬನ್‌ಪಾರ್ಕ್, ಸಿಟಿ ರೈಲು ನಿಲ್ದಾಣ, ಪೀಣ್ಯ, ಗೊರಗುಂಟೆ​ಪಾಳ್ಯ, ಯಶ​ವಂತ​ಪುರ ಹಾಗೂ ಮಹಾಲಕ್ಷ್ಮೇ ಮೆಟ್ರೋ ನಿಲ್ದಾಣ​ಗಳಲ್ಲಿ ಓಲಾ ಸೌಲಭ್ಯ ಸಿಗಲಿದೆ. ಉಬರ್‌ ಕಂಪನಿಯು ಕೆಂಪೇ​ಗೌಡ ಬಸ್‌ ನಿಲ್ದಾಣ, ನಗರ ಕೇಂದ್ರ ರೈಲು ನಿಲ್ದಾಣ, ಇಂದಿರಾನಗರ, ಭೈಯ್ಯಪ್ಪನಹಳ್ಳಿ, ಎಂಜಿ ರಸ್ತೆ, ಮೈಸೂರು ರಸ್ತೆ, ವಿಜಯನಗರ, ಮಂತ್ರಿ ಮಾಲ್‌, ಒರಾಯನ್‌ ಮಾಲ್‌(ಸೋಪ್‌ ಫ್ಯಾಕ್ಟರಿ ಬಳಿ), ಸರ್‌.ಎಂ.ವಿ.​ನಿಲ್ದಾಣ ಸೆಂಟ್ರಲ್‌ ಕಾಲೇಜು, ಜಾಲಹಳ್ಳಿ, ದಾಸರ​ಹಳ್ಳಿ, ಹೊಸಹಳ್ಳಿ ಮೊದಲಾದ ಕಡೆಗಳಲ್ಲಿ ಮಾಚ್‌ರ್‍ ಅಂತ್ಯದಲ್ಲಿ ಕಿಯಾಸ್ಕ್‌ ಆರಂಭಿಸಲಿದೆ ಎಂದು ಉಬರ್‌ ಪ್ರಕಟಿಸಿದೆ.

ರಿಯಲನ್ಸ್‌ ಜಿಯೋ ಜತೆಗೂ ಒಪ್ಪಂದ: ಮೆಟ್ರೋದಲ್ಲೂ ಇನ್ನು ಮುಂದೆ ಕ್ಯಾಶ್‌ಲೆಸ್‌ ವ್ಯವಹಾರ ಆರಂಭಗೊಳ್ಳಲಿದೆ. ಜಿಯೋ ಮನಿ ಬಳಕೆಗೆ ಮೆಟ್ರೋ ಸಿದ್ಧವಾಗಿದ್ದು ಜಿಯೋ ಗ್ರಾಹಕರಿಗೆ ಇದು ಉತ್ತಮ ಅವಕಾಶ ಒದಗಿಸಲಿದೆ. ಬುಧವಾರ ರಿಲಯನ್ಸ್‌ ಜಿಯೊ ಮತ್ತು ಉಬರ್‌ ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದು ಮೆಟ್ರೋ ನಿಲ್ದಾಣಗಳಲ್ಲಿ ಉಬರ್‌ ಟ್ಯಾಕ್ಸಿ ಬಳಕೆಗೆ ಜಿಯೋ ಮನಿ ನೀಡಬಹುದಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಕ್ಯಾಶ್‌ಲೆಸ್‌ ಅಭಿಯಾನವನ್ನೂ ಉತ್ತೇಜಿಸಿದಂತಾಗಿದೆ ಎಂದು ಜಿಯೋ ಹೇಳಿದೆ.

click me!