ಅಯೋಧ್ಯೆ ರಾಮಮಂದಿರದಲ್ಲೂ ನಮಾಜ್'ಗೆ ನಿರ್ಧರಿಸಿತ್ತು: ಪೇಜಾವರ

By Suvarna Web DeskFirst Published Jun 30, 2017, 9:29 AM IST
Highlights

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ದಶಕಗಳ ಹಿಂದೆ ಸಂಧಾನ ನಡೆದಿತ್ತು. ಆಗ, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ಒಪ್ಪಿದ್ದರು. ವಾರದಲ್ಲಿ ಒಂದು ದಿನ ರಾಮಮಂದಿರದಲ್ಲಿ ನಮಾಜ್‌ ನಡೆಸುವ ಕುರಿತು ಒಮ್ಮತ ಮೂಡಿತ್ತು. ಅದು ತಪ್ಪಲ್ಲ ಎಂದಾದರೆ ಈಗ ಉಡುಪಿಯಲ್ಲಿ ನಡೆದ ಇಫ್ತಾರ್‌ ಕೂಟ ಹಾಗೂ ನಮಾಜ್‌ ಕುರಿತು ನನಗ್ಯಾಕೆ ವಿರೋಧ ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಉಡುಪಿ(ಜೂ.30): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ದಶಕಗಳ ಹಿಂದೆ ಸಂಧಾನ ನಡೆದಿತ್ತು. ಆಗ, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ಒಪ್ಪಿದ್ದರು. ವಾರದಲ್ಲಿ ಒಂದು ದಿನ ರಾಮಮಂದಿರದಲ್ಲಿ ನಮಾಜ್‌ ನಡೆಸುವ ಕುರಿತು ಒಮ್ಮತ ಮೂಡಿತ್ತು. ಅದು ತಪ್ಪಲ್ಲ ಎಂದಾದರೆ ಈಗ ಉಡುಪಿಯಲ್ಲಿ ನಡೆದ ಇಫ್ತಾರ್‌ ಕೂಟ ಹಾಗೂ ನಮಾಜ್‌ ಕುರಿತು ನನಗ್ಯಾಕೆ ವಿರೋಧ ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ವಿಚಾರದಲ್ಲಿ ಸಂಧಾನದ ನನ್ನ ಪ್ರಯತ್ನಗಳು ವಿಫಲವಾಗಿವೆ ಎಂದರು.

ನಾನು ಇಫ್ತಾರ್‌ ಕೂಟವನ್ನು ಕೃಷ್ಣಮಠದ ಹೊರ ಆವರಣದಲ್ಲಿ ಆಯೋಜಿಸಿದ್ದೆ. ಅಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡಿದರೆ ಹಿಂದೂ ನಿಂದನೆಯಾಗುತ್ತದೆಯೇ ಎಂದು ಪ್ರಶ್ನಿಸಿದರು. ಈ ವಿವಾದದಲ್ಲಿ ಶ್ರೀರಾಮ ಸೇನೆ ಪ್ರಮುಖ ಮುತಾಲಿಕ್‌ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ವಿಶ್ವೇಶ ತೀರ್ಥರು, ಹಿಂದೂ ಗಳಲ್ಲೂ ಕೆಲವರು ಗೋಮಾಂಸ ಭಕ್ಷಣೆ ಮಾಡ್ತಾರೆ, ಈ ಬಗ್ಗೆ ಅರಿವಿದ್ದೇ ಹೇಳಿ ದ್ದೇನೆ. ಆದರೆ ಯಾರು ಮಾಡುತ್ತಾರೆ ಅಂತ ಹೇಳಲಾರೆ ಎಂದರು.

ಸಂಬಂಧಕ್ಕೆ ಭಂಗವಿಲ್ಲ: ಇಫ್ತಾರ್‌ ವಿಚಾರದಿಂದ ವಿಶ್ವ ಹಿಂದೂ ಪರಿಷತ್‌ ಹಾಗೂ ನನ್ನ ಸಂಬಂಧಕ್ಕೆ ಭಂಗವಿಲ್ಲ. ಸಂಘ ಪರಿವಾರದವರೂ ನನ್ನನ್ನು ಸಂಪರ್ಕ ಮಾಡಿದ್ದಾರೆ. ಅವರಿಗೆ ಈ ವಿಚಾರದಲ್ಲಿ ಸಮಾಧಾನವೂ ಇಲ್ಲ, ವಿರೋಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೇಜಾವರ ಶ್ರೀ ಗೋಮಾಂಸ ಹೇಳಿಕೆ ವಾಪಸ್‌ ಪಡೆಯಲಿ

ಹಿಂದೂಗಳು ಸಹ ಗೋ ಮಾಂಸ ಸೇವನೆ ಮಾಡುತ್ತಾರೆ ಎಂಬ ಹೇಳಿಕೆಯನ್ನು ಪೇಜಾವರ ಶ್ರೀಗಳು ಹಿಂಪಡೆಯಬೇಕು. ಸಮಾಜವನ್ನು ತಿದ್ದಬೇಕಿದ್ದ ಶ್ರೀಗಳೇ ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಇಂಥ ಹೇಳಿಕೆ ಯಿಂದ ಗೋ ಹತ್ಯೆ ನಿಷೇಧ ಕಾಯ್ದೆಗೆ ಬಿಗಿ ಇಲ್ಲದಂತಾ ಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

click me!