
ನವದೆಹಲಿ(ಜೂ.30): ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ಹೋಗಬೇಕೋ ಬೇಡವೋ? ಎಂಬ ಹಲವು ಗೊಂದಲ ವಿಪಕ್ಷಗಳಲ್ಲಿ ಶುರುವಾಗಿದ್ದರೆ, ಕಾಂಗ್ರೆಸ್ ಅಧಿವೇಶನ ಬಹಿಷ್ಕರಿಸಲು ಮುಂದಾಗಿದೆ.
ದೇಶದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಜಿಎಎಸ್ ಟಿ ಜಾರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಜಿಎಸ್ಟಿ ಬಿಲ್ ಕುರಿತು ಚರ್ಚೆ ಮಾಡಲು ಇಂದು ಮಧ್ಯರಾತ್ರಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನಕ್ಕೆ ಹಾಜರಾಗುವಂತೆ ಎಲ್ಲಾ ಪಕ್ಷಗಳಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿತ್ತು. ಆದ್ರೆ, ಕೇಂದ್ರ ಸರ್ಕಾರದ ಆಹ್ವಾನವನ್ನು ಸರಾಸಗಟಾಗಿ ತಳ್ಳಿ ಹಾಕಿರುವ ವಿಪಕ್ಷಗಳು ಇವತ್ತು ಮಧ್ಯರಾತ್ರಿ ನಡೆಯುವ ವಿಶೇಷ ಅಧಿವೇಶನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ವಿಶೇಷ ಅಧಿವೇಶನಕ್ಕೆ ಯಾಱರು ಗೈರು?
ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಜಿಎಸ್ಟಿ ಬಿಲ್ ವಿಚಾರವಾಗಿ ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ನ ನಾಯಕರು ಗೈರು ಆಗಲಿದ್ದಾರೆ. ಅಷ್ಟೇ ಅಲ್ಲದೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬಾನರ್ಜಿ , ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ , ಸಿಪಿಐ ರಾಜ್ಯಸಭೆ ಸದಸ್ಯ ಡಿ. ರಾಜ, ಸಮಾಜವಾದಿ ಪಕ್ಷದ ನಾಯಕರು, ಬಿಎಸ್ಪಿ ಮುಖಂಡರಾದ ಮಾಯವತಿ, ಡಿಎಂಕೆ ಸಂಸದರು, ಆರ್ಜೆಡಿ ನಾಯಕರು ಸೇರಿದಂತೆ ಇತರೆ ಯುಪಿಎನ ಹಲವು ಮಿತ್ರ ಪಕ್ಷಗಳು ನಾಳೆ ನಡೆಯುವ ಅಧಿವೇಶನಕ್ಕೆ ಗೈರು ಆಗಲು ನಿರ್ಧರಿಸಿವೆ.
ಇನ್ನು ವಿಪಕ್ಷ ಕಾಂಗ್ರೆಸ್ ಬೆಂಬಲಿತ ಹಲವು ಪಕ್ಷಗಳು ಗೈರು ಆಗುವುದಾಗಿ ಪ್ರಕಟಿಸಿದರೆ, ಇತ್ತ ಇತರೆ ಪಕ್ಷಗಳು ಮಧ್ಯರಾತ್ರಿ ನಡೆಯುವ ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಅಂತ ಹೇಳಿಕೊಂಡಿವೆ.
ವಿಶೇಷ ಅಧಿವೇಶನಕ್ಕೆ ಯಾರ್ಯಾರು ಹಾಜರ್?
ಜಿಎಸ್ಟಿ ಜಾರಿಗೆ ತರಲು ಆಡಳಿತಾರೂಢ ಎನ್ಡಿಎ ಸರ್ವಸಿದ್ಧತೆ ಮಾಡಿಕೊಂಡಿದೆ. ಗಮನಾರ್ಹವೆಂದರೆ ವಿಪಕ್ಷಗಳು ವಿಶೇಷ ಅಧಿವೇಶನ ಬಹಿಷ್ಕಾರ ಮಾಡಲು ಮುಂದಾಗಿವೆ. ಆದ್ರೆ ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಜೆಡಿಯು ಮುಖಂಡರಾದ ಬಿಹಾರದ ಸಿಎಂ ನಿತೀಶ್ಕುಮಾರ್ ಸೇರಿದಂತೆ ಇತರೆ ಎನ್ಡಿಎ ಬೆಂಬಲಿತ ಪಕ್ಷಗಳ ನಾಯಕರು ಅಧಿವೇಶನದಲ್ಲಿ ಭಾಗವಹಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಮಧ್ಯರಾತ್ರಿ ಕರೆಯಲಾಗಿರುವ ಅಧಿವೇಶನವು ಜಂಟಿ ಅಧಿವೇಶನವಾಗಿದ್ದು, ವಿಪಕ್ಷದ ಕೆಲ ನಾಯಕರು ಹೊರತುಪಡಿಸಿ ಲೋಕಸಭೆ ಹಾಗೂ ರಾಜ್ಯ ಸಭೆಗಳ ಸದಸ್ಯರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.