ನಮ್ಮ ಪೂನಂ ಪಾಂಡೆಯಂತೆ ಬ್ರೀಸಾ ಕೂಡ ಸೋಷಿಯಲ್ ಮೀಡಿಯಾ ಮೂಲಕವೇ ಜಗತ್ತಿಗೆ ಚಿರಪರಿಚಿತಳಾಗಿದ್ದಾಳೆ. ಇನ್ಸ್'ಟಾಗ್ರಾಂನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿರುವ ಈಕೆ ತರಹಾವೇರಿ ಪೋಸ್'ಗಳ ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಾಳೆ.
ಫ್ಲೋರಿಡಾ, ಅಮೆರಿಕ(ಜುಲೈ 20): ಇನ್ಸ್'ಟಾಗ್ರಾಮ್'ನ ಹೊಸ ಸೆನ್ಸೇಶನ್ ಆಗಿರುವ ಬ್ರೀಸಾ ಡಾಮಿಂಗೆಜ್ ಗಾರ್ಷಿಯಾ(Brissa Dominguez Garcia) ಎಂಬ ಮಾಡೆಲ್ ಮತ್ತು ಸುಂದರಿಯು ಮೈಮೇಲಿನ ಬಟ್ಟೆ ಕಳಚಿ ಬಹಿರಂಗವಾಗಿಯೇ ಸುತ್ತಾಡಿದ ಘಟನೆ ವರದಿಯಾಗಿದೆ. ಈಕೆಯನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ಈಕೆ ಹಲ್ಲೆ ನಡೆಸಿದ್ದಾಳೆ. ಈಕೆಯ ಮಾನ ಉಳಿಸಲು ಟವಲ್ ನೀಡಲು ಹೋದ ಪೊಲೀಸಪ್ಪನಿಗೆ ಈಕೆಯ ಎಂಜಲಿನ ಭಾಗ್ಯ ಸಿಕ್ಕಿದೆ. ಇಂಥದ್ದೊಂದು ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಎಡ್ಜ್ ಹೋಟೆಲ್'ನ ಹೊರಗೆ ಮುಂಜಾವು 4 ಗಂಟೆಯ ಚುಮುಚುಮು ಛಳಿಯಲ್ಲಿ ಈಕೆ ಬೆತ್ತಲೆಯಾಗಿ ಸುತ್ತಾಡುತ್ತಿದ್ದ ಈ ಸುಂದರಿಯನ್ನು ಅರೆಸ್ಟ್ ಮಾಡುವಷ್ಟರಲ್ಲಿ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಒಬ್ಬ ಪಾಪದ ಪೊಲೀಸ್ ಅಧಿಕಾರಿಯು ಈಕೆಯ ಮಾನ ಮುಚ್ಚಲು ಟವಲ್ ನೀಡಿದರೆ, ಈಕೆ ಆತನ ಮೇಲೆಯೇ ಕೈಮಾಡಿ ಮುಖಕ್ಕೆ ಎಂಜಲು ಉಗಿದಿದ್ದಾಳೆ. ಬಂಧಿಸಲು ಬಂದ ಮೂವರು ಪೊಲೀಸರ ಮರ್ಮಾಂಗಕ್ಕೆ ಒದ್ದು ಘಾಸಿಗೊಳಿಸಲು ಯತ್ನಿಸಿದ್ದಾಳೆ.
ಕುಡಿತದ ನಶೆಯಲ್ಲಿ ಹೀಗೆಲ್ಲಾ ಮಾಡಿರುವ 25 ವರ್ಷದ ಬ್ರೀಸಾಳನ್ನು ಬಂಧಿಸಿ 10 ಸಾವಿರ ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ.
ನಮ್ಮ ಪೂನಂ ಪಾಂಡೆಯಂತೆ ಬ್ರೀಸಾ ಕೂಡ ಸೋಷಿಯಲ್ ಮೀಡಿಯಾ ಮೂಲಕವೇ ಜಗತ್ತಿಗೆ ಚಿರಪರಿಚಿತಳಾಗಿದ್ದಾಳೆ. ಇನ್ಸ್'ಟಾಗ್ರಾಂನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿರುವ ಈಕೆ ತರಹಾವೇರಿ ಪೋಸ್'ಗಳ ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಾಳೆ. ಮಾಡೆಲಿಂಗ್ ಶಾಟ್'ಗಳಿರುವ ಫೋಟೋಗಳನ್ನು ಹಾಕುತ್ತಾಳೆ. ಈಗ ಬೆತ್ತಲೆ ಪ್ರಕರಣವಾದ ಬಳಿಕ ಈಕೆಯ ಪಾಪ್ಯುಲಾರಿಟಿ ಇನ್ನೂ ಹೆಚ್ಚಾಗಿದೆ. ಇನ್ಸ್'ಟಾಗ್ರಾಮ್'ನಲ್ಲಿ ಫಾಲೋಯರ್ಸ್'ಗಳ ಸಂಖ್ಯೆ ಗಂಟೆ ಲೆಕ್ಕದಲ್ಲಿ ಹೆಚ್ಚಾಗುತ್ತಿದೆ.