ಸೇನೆ ಹಿಂತೆಗೆದುಕೊಳ್ಳದಿದ್ದರೆ ಸೆರೆಯಾಗುತ್ತೀರಿ ಇಲ್ಲವೆ ಸಾಯುತ್ತೀರಿ

By Suvarna Web DeskFirst Published Jul 20, 2017, 6:52 PM IST
Highlights

ಮುಂಬೈ'ನಲ್ಲಿ ಚೀನಾದ ಕಾನ್ಸು'ಲೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿ ಲಿಯು ಯುಫಾ, ಈ ರೀತಿಯ ಎಚ್ಚರಿಕೆ ನೀಡಿದ್ದು ' ಭಾರತಿಯ ಸೈನಿಕರು ಅತಿಕ್ರಮವಾಗಿ ಪ್ರವೇಶ ಮಾಡಿದ್ದು, ಚೀನೀ ಯೋಧರು ಇದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ದರಿದ್ದಾರೆ.' ಅಂತರಾಷ್ಟ್ರೀಯ ಕಾನೂನನ್ನು ನಾನು ಅರ್ಥ ಮಾಡಿಕೊಂಡಂತೆ, ಬೇರೆ ದೇಶದ ಭೂಭಾಗವನ್ನು ಯಾವ ದೇಶದವರೆ ಪ್ರವೇಶಿಸಿದರೂ ಮೂರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಬೀಜಿಂಗ್(ಜು.20): ದೋಕ್ಲಾಮ್ ಪ್ರದೇಶದಿಂದ ನಿಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಿ ಇಲ್ಲದಿದ್ದರೆ ನಿಮ್ಮ ಸೈನಿಕರು ಸೆರೆಯಾಗುತ್ತೀರಿ ಅಥವಾ ಸಾಯುತ್ತೀರಿ' ಎಂದು  ಭಾರತದಲ್ಲಿ ಕಾರ್ಯನಿರ್ವಹಿಸಿದ ಮಾಜಿ ಚೀನಾ ರಾಯಭಾರಿಯೊಬ್ಬರು ನೇರ ಎಚ್ಚರಿಕೆ ನೀಡಿದ್ದಾರೆ.

ಮುಂಬೈ'ನಲ್ಲಿ ಚೀನಾದ ಕಾನ್ಸು'ಲೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿ ಲಿಯು ಯುಫಾ, ಈ ರೀತಿಯ ಎಚ್ಚರಿಕೆ ನೀಡಿದ್ದು ' ಭಾರತಿಯ ಸೈನಿಕರು  ಅತಿಕ್ರಮವಾಗಿ ಪ್ರವೇಶ ಮಾಡಿದ್ದು, ಚೀನೀ ಯೋಧರು ಇದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ದರಿದ್ದಾರೆ.' ಅಂತರಾಷ್ಟ್ರೀಯ ಕಾನೂನನ್ನು ನಾನು ಅರ್ಥ ಮಾಡಿಕೊಂಡಂತೆ, ಬೇರೆ ದೇಶದ ಭೂಭಾಗವನ್ನು ಯಾವ ದೇಶದವರೆ ಪ್ರವೇಶಿಸಿದರೂ ಮೂರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಮೊದಲನೆಯದಾಗಿ ಗಡಿಯೊಳಕ್ಕೆ ಕಾಲಿಟ್ಟ ಯೋಧರು ಸ್ವಯಂಪ್ರೇರಿತವಾಗಿ ವಾಪಸ್ ಹೋಗಬೇಕು. ಇಲ್ಲದಿದ್ದರೆ ಅವರನ್ನು ಸೆರೆ ಹಿಡಿಯಬಹುದು. ಒಂದು ವೇಳೆ ಗಡಿ ವಿವಾದ ತೀವ್ರಗೊಂಡರೆ ಅವರನ್ನು ಹತ್ಯೆ ಮಾಡಲೂಬಹುದು ಲಿಯು ಯೂಫಾ ಅವರು ಚೀನಾ ಸರ್ಕಾರಿ ಸ್ವಾಮ್ಯದ ಆಂಗ್ಲ ವಾಹಿನಿ ಸಿಸಿಟೀವಿ  ತಿಳಿಸಿದ್ದಾರೆ. ಗಡಿಯಲ್ಲಿ ಭಾರತೀಯ ಯೋಧರು ಅತಿಕ್ರಮಣ ಮಾಡಿದ್ದಾರೆ. ಚೀನಾ ಇಲ್ಲಿವರೆಗೂ ತಾಳ್ಮೆಯಿಂದ ವರ್ತಿಸುತ್ತಿದೆ. ಗಡಿಯಲ್ಲಿ ನಿಯೋಜನೆಗೊಂಡಿರುವ ಚೀನಾ ಯೋಧರು ಭಾರತೀಯ ಪಡೆಗಳು ಸೂಕ್ಷ್ಮ ಆಯ್ಕೆಗಳನ್ನು ಮಾಡಿಕೊಳ್ಳಲಿ ಎಂದು ಕಾಯುತ್ತಿರಬಹುದು ಎಂದು ತಮ್ಮ ತಿಳಿಸಿದ್ದಾರೆ.

ಡೋಕ್ಲಾಮ್ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಹೀಗಾಗಿ ತನ್ನ ಗಡಿಯೊಳಕ್ಕೆ ಭಾರತೀಯ ಯೋಧರು ಕಾಲಿಟ್ಟಿದ್ದಾರೆ ಎಂಬ ಅಭಿಪ್ರಾಯ ಆ ದೇಶದವರಲ್ಲಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಚೀನಾದ ಮಾಜಿ ರಾಯಭಾರಿ ಈ ರೀತಿ ಹೇಳಿದ್ದಾರೆ. ಆದರೆ ಭಾರತದ ಪ್ರಕಾರ, ಡೋಕ್ಲಾಮ್ ಪ್ರದೇಶ ಮೂರು ದೇಶಗಳ ಸಂಗಮದಲ್ಲಿ ಸೇರಲಿದ್ದು ಆ ಕಾರಣದಿಂದ ಅದರ ಹಕ್ಕು ಭಾರತದ ಮಿತ್ರ ದೇಶ ಭೂತಾನ್‌'ದ್ದಾಗಿದೆ.

click me!