ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಬಾಲಾಪರಾಧಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಂಬ್ ದಾಳಿ ಮಾಡಿ ಅಮಾಯಕರ ಸಾವಿಗೆ ಕಾರಣವಾಗಿದ್ದ ಐಸಿಸ್ ಕೆ ಮೇಲೆ ಅಮೆರಿಕ ದಾಳಿ ನಡೆಸಿದೆ. ಬಸವರಾಜ್ ಬೊಮ್ಮಾಯಿ ಸರ್ಕಾರ ಒಂದು ತಿಂಗಳು ಪೂರೈಸಿದೆ. ಕಂಗನಾ ಟ್ಯಾಟೂ ಸೀಕ್ರೆಟ್ ಬಹಿರಂಗ, ಸೇಡು ತೀರಿಸಿದ ಅಮೆರಿಕ ಸೇರಿದಂತೆ ಆಗಸ್ಟ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮೈಸೂರು ಗ್ಯಾಂಗ್‌ರೇಪ್: ಬಾಲಾಪರಾಧಿ ಸೇರಿ 5 ಮಂದಿ ಅರೆಸ್ಟ್, ಹಣ ಸಿಗದಾಗ ಅತ್ಯಾಚಾರ!
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಐವರಲ್ಲಿ ಓರ್ವ ಬಾಲಾಪರಾಧಿಯಾಗಿದ್ದು, ಇವರ ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಡಿಜಿ ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ
36 ಗಂಟೆಯಲ್ಲಿ ಸೇಡು ತೀರಿಸಿದ ಅಮೆರಿಕ: ಐಸಿಸ್ ಕೆ ಮೇಲೆ ಏರ್‌ಸ್ಟ್ರೈಕ್!
: ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದ ಬಾಂಬ್ ದಾಳಿಯಲ್ಲಿ ತನ್ನ 13 ಸೈನಿಕರನ್ನು ಕಳೆದುಕೊಂಡಿದ್ದ ಅಮೆರಿಕ, ಇದರ ಪ್ರತೀಕಾರವಾಗಿ ಸ್ಪೋಟ ನಡೆದ 36 ಗಂಟೆಗಳಲ್ಲಿ ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಇನ್ನು 170 ಮಂದಿಯನ್ನು ಸ್ಫೋಟ ನಡೆಸಿ ಬಲಿ ಪಡೆದಿದ್ದ ಐಸಿಸ್ ಖೊರಾಸಾನ್ (ಐಸಿಸ್-ಕೆ) ಉಗ್ರರ ವಿರುದ್ಧ ಗುಡುಗಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ‘ನಿಮ್ಮನ್ನು ಬೇಟೆಯಾಡಿ, ಬೆಲೆ ತೆರುವಂತೆ ಮಾಡದೇ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದರೆಂಬುವುದು ಉಲ್ಲೇಖನೀಯ.
Ind vs Eng ಲೀಡ್ಸ್ ಟೆಸ್ಟ್: ಶತಕದ ಹೊಸ್ತಿಲಲ್ಲಿ ಎಡವಿದ ಚೇತೇಶ್ವರ್ ಪೂಜಾರ
ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ರನ್ ಬರ ಅನುಭವಿಸುತ್ತಿದ್ದ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನಾಲ್ಕನೇ ದಿನದಾಟದ ಆರಂಭದಲ್ಲೇ ತನ್ನ ಖಾತೆಗೆ ಒಂದೂ ರನ್ ಸೇರಿಸದೇ ವಿಕೆಟ್ ಒಪ್ಪಿಸಿದ್ದಾರೆ. 91 ರನ್ ಗಳಿಸಿದ್ದ ಚೇತೇಶ್ವರ್ ಪೂಜಾರ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ವೇಗಿ ಓಲಿ ರಾಬಿನ್‌ಸನ್ ಯಶಸ್ವಿಯಾಗಿದ್ದಾರೆ.
ಸ್ಟೈಲಿಷ್ ಡ್ರೆಸ್‌ನಲ್ಲಿ ಕಂಗನಾ: ಕಾಲಿನಲ್ಲಿರೋ ಟ್ಯಾಟೂ ಏನದು ?
ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳೋ ಬಾಲಿವುಡ್ ನಟಿ ಕಂಗನಾ ರಣಾವತ್ ಸ್ಟೈಲಿಷ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಯ ಲುಕ್ ಈಗ ವೈರಲ್ ಆಗಿದೆ.
ಕಾಬೂಲ್‌ನಲ್ಲೀಗ ವಿಮಾನಗಳದ್ದೇ ಭಾರೀ ಸದ್ದು: ತೆರವು ಕಾರ್ಯಾಚರಣೆಗೆ ಹೈಸ್ಪೀಡ್!
ಗುರುವಾರದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಂಡಿದ್ದ ನಾಗರಿಕರ ತೆರವು ಕಾರ್ಯಾಚರಣೆ ಶುಕ್ರವಾರ ಮತ್ತಷ್ಟುವೇಗದಿಂದ ಪುನಾರಂಭಗೊಂಡಿದೆ. ದೇಶ ತೊರೆಯಲು ತಾಲಿಬಾನ್ ನೀಡಿರುವ ಆ.31ರ ಗಡುವು ಸಮೀಪಿಸಲು ಕೇವಲ 4 ದಿನ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಹಲವು ದೇಶಗಳು ಸಾಕಷ್ಟುಸಂಖ್ಯೆಯಲ್ಲಿ ವಿಮಾನಗಳ ಹಾರಾಟ ನಡೆಸುವ ಮೂಲಕ ಎಲ್ಲಾ ಅರ್ಹರ ತೆರವಿಗೆ ಹರಸಾಹಸ ನಡೆಸುತ್ತಿವೆ.
85 ಗಂಟೆಗಳ ಕಾರ್ಯಾಚರಣೆ: ಕಾಮುಕರು ಖಾಕಿ ಬಲೆಗೆ ಬಿದ್ದಿದ್ದು ಹೀಗೆ!
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಐವರು ಆರೋಪಿಗಳನ್ನು ಕೊನೆಗೂ ಬಂಧಿಸಲಾಗಿದೆ. ಅಷ್ಟಗಪರಾರಕ್ಕೂ ಆ ಐವರು ಕಾಮುಕರು ಖಾಕಿ ಬಲೆಗೆ ಬಿದ್ದಿದ್ದು ಹೇಗೆ? ಬಂಧಿತ ಆರೋಪಿಗಳು ಎಲ್ಲಿಯವರು? ತಮಿಳುನಾಡು ಮೂಲದವರಾ? ಅಥವಾ ಅಲ್ಲಿಗೆ ಪರಾರಿಯಾದವರಾ?
ಸಿಎಂ ಬೊಮ್ಮಾಯಿ ಸರ್ಕಾರಕ್ಕೆ 1 ತಿಂಗಳು: ವಿಪಕ್ಷಗಳಿಂದಲೂ ಮೆಚ್ಚುಗೆ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇಂದಿಗೆ(ಶನಿವಾರ) ಮೊದಲ ಒಂದು ತಿಂಗಳು ಪೂರೈಸಲಿದ್ದು, ಹಂತ ಹಂತವಾಗಿ ರಾಜಕೀಯ ಅನಿಶ್ಚಿತತೆಯಿಂದ ಹೊರಬಂದು ಭರವಸೆಯತ್ತ ಹೆಜ್ಜೆ ಇರಿಸಿದ್ದಾರೆ.
ನರೇಂದ್ರ ಮೋದಿ ಪಾತ್ರದಲ್ಲಿ ರಾಜಮೌಳಿ ತಂದೆ ವಿಜಯೇಂದ್ರ?
ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಕೆಲವು ಸಿನಿ ರಸಿಕರ ಪ್ರಕಾರ ಇವರು ನೋಡಲು ಸೇಮ್ ನರೇಂದ್ರ ಮೋದಿ ಅವರಂತೆ ಇರುವ ಕಾರಣ ಮೋದಿ ಅವರ ಬಗ್ಗೆ ಯುವನಿರ್ದೇಶಕ ಮಾಡುತ್ತಿರುವ ಕಿರುಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ ಎನ್ನಲಾಗಿದೆ.