
ಉತ್ತರ ಪ್ರದೇಶ (ಮಾ.31): ಮುಜಫ್ಫರ್ ನಗರದ ರೆಸಿಡೆಂಶಿಯಲ್ ಶಾಲೆಯ ವಾರ್ಡ್ ನ್ ಒಬ್ಬರು ಸುಮಾರು 70 ಜನ ಹುಡುಗಿಯರನ್ನು ಬೆತ್ತಲೆಯಾಗಿ ನಿಲ್ಲಿಸಿ ಋತುಸ್ರಾವದ ರಕ್ತವನ್ನು ಪರೀಕ್ಷಿಸಲು ಮುಂದಾಗಿರುವ ವಿಲಕ್ಷಣ ಘಟನೆ ನಡೆದಿದ್ದು. ಅವನನ್ನು ಅಮಾನತುಗೊಳಿಸಲಾಗಿದೆ.
ನಮಗೆ ಬೆತ್ತಲೆಯಾಗಿ ನಿಲ್ಲುವಂತೆ ನಮ್ಮ ವಾರ್ಡನ್ ಹೇಳಿದ್ದಾರೆ. ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಹಾಸ್ಟೆಲ್ ಬಾತ್ ರೂಮ್ ನಲ್ಲಿ ರಕ್ತದ ತುಣುಕುಗಳನ್ನು ನೋಡಿ ಕೋಪಗೊಂಡು ಅದು ಯಾರದ್ದು ಎಂದು ಪರೀಕ್ಷಿಸಲು ಹುಡುಗಿಯರಿಗೆ ಬೆತ್ತಲೆಯಾಗಿ ಕೂರಿಸಿ ಅಮಾನವೀಯವಾಗಿ ವರ್ತಿಸಿದ್ದಾಳೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ತರಗತಿಯಲ್ಲಿ ಶಿಕ್ಷಕರು ಇರಲಿಲ್ಲ. ನಮ್ಮ ವಾರ್ಡನ್ ನಮಗೆ ಹಾಸ್ಟೆಲ್ ನ ಕೆಳಮಹಡಿಗೆ ಬರಲು ಹೇಳಿ ನಮ್ಮ ಬಟ್ಟೆಗಳನ್ನು ತೆಗೆಯಲು ಹೇಳಿದರು. ನಾವು ತೆಗೆಯದೇ ಇದ್ದರೆ ಹೊಡೆಯುವದಾಗಿ ಹೆದರಿಸಿದರು. ನಾವಿನ್ನೂ ಮಕ್ಕಳು. ಏನು ಮಾಡಲು ಸಾಧ್ಯ? ಅವರು ಹೇಳಿದಂತೆ ಕೇಳದಿದ್ದರೆ ನಮಗೆ ಹೊಡೆಯುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬಳು ಅಲವತ್ತುಕೊಂಡಿದ್ದಾಳೆ.
ವಿದ್ಯಾರ್ಥಿಗಳ ಪೋಷಕರು ವಾರ್ಡನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆ ವಾರ್ಡನ್ ಆಗಾಗ ವಿದ್ಯಾರ್ಥಿಗಳಿಗೆ ಹೊಡೆಯುವುದು, ಬ್ಲಾಕ್ ಮೇಲ್ ಮಾಡುವುದು ಮಾಡುತ್ತಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತನಿಖೆ ನಡೆಸುತ್ತಿದೆ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.