
ಬೆಂಗಳೂರು (ಮಾ.31): ಇಂದು ಬೈಕ್ ಖರೀದಿದಾರರಿಗೆ ಲಕ್ಕಿ ಡೇ ಆಗಿತ್ತು. ಯಾವ ಹಬ್ಬಕ್ಕೂ ನೀಡದ ಬೈಕ್ ಆಫರ್ಗಳನ್ನು ಇಂದು ಬೈಕ್ ಶೋ ರೂಂ ಮಾಲೀಕರು ನೀಡಿದ್ದರು. ಅದಕ್ಕಾಗಿಯೇ ಶೋ ರೂಂ ಮುಂದೆ ಜನ ಸಾಗರವೇ ಹರಿದು ಬಂದಿತ್ತು.
ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆ ದ್ವಿಚಕ್ರ ವಾಹನ ಸಂಸ್ಥೆಗಳಾದ ಹೀರೋ ಹಾಗೂ ಹೋಂಡಾ ಮೋಟಾರ್ ಸೇರಿದಂತೆ ಹಲವು ಬೈಕ್ ಕಂಪನಿಗಳು ಭಾರಿ ರಿಯಾತಿಯನ್ನ ನೀಡಿದ್ವು. ಹೀಗಾಗಿ ಜನ ಬೈಕ್ ಖರೀದಿ ಡಲು ಮುಗಿಬಿದ್ದಿದ್ದರು. ಒಂದೆ ದಿನ ಮಾರುಕಟ್ಟೆಯಲ್ಲಿ ಸರಿಸುಮಾರು 8 ಲಕ್ಷ ಬಿಎಸ್ 3 ವಾಹನಗಳು ಮಾರಾಟವಾಗಿವೆ. 70 ಸಾವಿರ ರೂಪಾಯಿ ಬೆಲೆ ಬಾಳುವ ಬೈಕ್ ಇಂದು ಕೇವಲ 55 ಸಾವಿರಕ್ಕೆ ಮಾರಾಟವಾಯಿತು.
ಇನ್ನೂ ಈ ಸೇಲ್ ನಿನ್ನೆ ರಾತ್ರಿಯಿಂದ ಪ್ರಾರಂಭವಾಗಿದರಿಂದ ಬಹುತೇಕ ಶೋ ರೂಂ ಗಳಲ್ಲಿ ಬಿಎಸ್ 3 ಬೈಕ್ಗಳು ಸ್ಟಾಕ್ ಇರಲ್ಲಿಲ, ಇದರಿಂದ ವಾಹನ ಖರೀದಿ ಮಾಡಲು ಶೋ ರೂಂಗೆ ಬಂದಿದ್ದ ಗ್ರಾಹಕರು ಸಪ್ಪೆ ಮುಖ ಮಾಡಿ ಮರಳಿದರು. ಇನ್ನೂ ಕೇಲವರು ಶೋ ರೂಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅಷ್ಟೇ ಅಲ್ಲಾ ಇಂದು ಖರೀದಿ ಮಾಡಿದ ವಾಹನಗಳ ನೋಂದಣಿ ಮಾಡಿಸಲು ಇಂದೇ ಕೊನೆಯ ದಿನವಾಗಿತ್ತು. ಅದೇನೆ ಇರಲಿ ಭಾರಿ ಆಫರ್ ಮೂಲಕ ಎಲ್ಲರ ಗಮನ ಸೆಳೆದಿರುವ ಬೈಕ್ ಶೋ ರೂಂಗಳು, ಮುಂದೆ ಯಾವ ಆಫರ್ಗಳ ನೀಡುತ್ತೆ ಎಂಬುವುದನ್ನ ಕಾದು ನೋಡಬೇಕಿದೆ.
ಬಿಎಸ್-3 ವಾಹನ ಖರೀದಿಸಿದಿರಾ? ಈ ಕುರಿತು ಯೋಚಿಸಿದ್ರಾ?
ಬೈಕ್ ಖರೀದಿಸಿ, ರಿಜಿಸ್ಟ್ರೇಷನ್ ಮಾಡಿಸಿಕೊಂಡಿರಬಹುದು. ನೋ ಪ್ರಾಬ್ಲಂ. ನಾಳೆ ಖರೀದಿ ಮಾಡಿದರೆ, ರಿಜಿಸ್ಟ್ರೇಷನ್ ಆಗುವುದಿಲ್ಲ. ಬಿಎಸ್-3 ಬೈಕ್ಗಳಿಗೆ, ಬಿಎಸ್-4 ಕ್ಷಮತೆಯ ಇಂಧನವನ್ನೂ ಬಳಸಬಹುದು. ಬಿಎಸ್-3 ವಾಹನಗಳಿಗೆ ಇಂಧನ ಬಳಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ,
2020ಕ್ಕೆ ಬಿಎಸ್-4 ಕಾಲ ಮುಗಿದು, ಬಿಎಸ್-5 ವಾಹನಗಳ ಯುಗ ಆರಂಭವಾಗುತ್ತೆ. ಮುಂದಿನ ಕೆಲ ವರ್ಷಗಳಲ್ಲಿ ಬಿಎಸ್-3 ಬೈಕ್'ಗಳು ಸಂಪೂರ್ಣ ನಿಷೇಧವಾಗುವ ಸಾಧ್ಯತೆ ಇದೆ. ಬಿಎಸ್-3 ವಾಹನಗಳಿಗೆ ರೀ-ಸೇಲ್ ಮೌಲ್ಯವೂ ಇರುವುದಿಲ್ಲ.
ವರದಿ: ಮುತ್ತಪ್ಪ ಲಮಾಣಿ, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.