
ಉಡುಪಿ : ಗೌರಿ ಹತ್ಯೆ ಆರೋಪಿಗಳು ಎಂದು ಯಾರನ್ನೋ ಹಿಡಿದು ಶಿಕ್ಷೆ ನೀಡಲಾಗುತ್ತಿದೆ ಇದು ರಾಜ್ಯ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕಲಬುರಗಿ ಹಂತಕರನ್ನೂ ಕೂಡ ಇದುವರೆಗೂ ಹಿಡಿದಿಲ್ಲ ಎಂದು ಉಡುಪಿಯಲ್ಲಿ ಹೇಳಿದ್ದಾರೆ.
ಹಿಂದುತ್ವವನ್ನು ಸವಾರಿ ಮಾಡಿ ಅಧಿಕಾರ ತೆಗೆದುಕೊಳ್ಳುವ ಗುರಿ ಇದ್ದು, 5 ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋ ಹತ್ಯೆ ನಿಷೇಧ ಮಾಡಿಲ್ಲ. ಇವರದ್ದು ಯಾವ ರೀತಿಯ ಹಿಂದುತ್ವ ಎಂದಿದ್ದಾರೆ. ನನ್ನ ಮೇಲೆಯೇ 7 ಕೇಸು ಹಾಕಿ ಜೈಲಿಗೆ ಕಳಿಸಿದ್ದರು. ದರ್ಗಾ ಮಸೀದಿಗೆ ಹೋದರೆ ಸಾಲದು ದೇವಾಲಯಗಳಿಗೂ ಹೋಗಬೇಕು ಎನ್ನುವುದು ಕಾಂಗ್ರೆಸ್’ಗೆ ಗೊತ್ತಾಗಿದೆ. ಈಗ ಅವರದ್ದು ನಾಟಕವೇ ಹೊರತು ನಿಜ ನಡೆಯಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.
ರಾಜ್ಯದಲ್ಲಿ ಶ್ರೀ ರಾಮಸೇನೆ ಶಿವಸೇನೆ ಜೊತೆ ಕೈ ಜೋಡಿಸಲಿದೆ. ಈ ಬಗ್ಗೆ ಕಮಿಟಿಯನ್ನು ರಚನೆ ಮಾಡಲಾಗಿದೆ. 52 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಲಾಗಿದೆ. ನಾನು ಶೃಂಗೇರಿಯಲ್ಲಿ ಅಥವಾ ತೆರದಾಳುವಿನಲ್ಲಿ ಸ್ಪರ್ಧೆ ಮಾಡುತ್ತೇನೆ.
ಬಿಜೆಪಿಯೂ ಕೂಡ ಡೋಂಗಿ ರಾಜಕಾರಣ ಮಾಡುತ್ತಿದೆ. ಹಿಂದುತ್ವಕ್ಕಾಗಿ ದುಡಿದ ಮುತಾಲಿಕ್ ಬೇಡವಾಗಿದ್ದಾರೆ. ಆದರೆ ಎಸ್.ಎಂ ಕೃಷ್ಣ ಇವರಿಗೆ ಬೇಕಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಸೊಕ್ಕಿಗೆ ಶ್ರೀ ರಾಮ ಸೇನೆ ಉತ್ತರ ನೀಡಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.