
ಮೈಸೂರು(ನ. 10): ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ ನಡೆದಿದ್ದು, ಮುಸ್ತಾಫಾ ಎಂಬ ವಿಚಾರಾಣಾಧೀನ ಕೈದಿಯ ಕೊಲೆಯಾಗಿದೆ. ಮತ್ತೊಬ್ಬ ವಿಚಾರಣಾಧೀನ ಕೈದಿ ಕಿರಣ್ ಶೆಟ್ಟಿ ಎಂಬಾತ ಮುಸ್ತಾಫಾನನ್ನು ಚಾಕುವಿನಿಂದ ಇರಿದು ಕೊಲೆ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕೊಲೆಯಾದ ಮುಸ್ತಾಫಾ ಕಳೆದ ವರ್ಷ ಸಂಭವಿಸಿದ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನೆನ್ನಲಾಗಿದೆ. ಕೊಲೆ ಮಾಡಿದ ಕಿರಣ್ ಶೆಟ್ಟಿಯು ಪ್ರವೀಣ್ ಪೂಜಾರಿಯ ಸಹಚರನಾಗಿರುವ ಹಿನ್ನೆಲೆಯಲ್ಲಿ ಇದು ಪ್ರತೀಕಾರದ ಕೊಲೆಯಾಗಿರಬಹುದೆಂದ ಶಂಕಿಸಲಾಗಿದೆ.
ಮುಸ್ತಾಫಾ ಹಾಗೂ ಪ್ರವೀಣ್ ಪೂಜಾರಿ ಇಬ್ಬರೂ ಬದ್ಧವೈರಿಗಳಾಗಿದ್ದು, ಹಲವು ವರ್ಷಗಳಿಂದ ಇಬ್ಬರ ಗುಂಪುಗಳ ನಡುವೆ ಹಗೆತನ ಬೆಳೆದುಬಂದಿತ್ತು. ಕರಾವಳಿಯಲ್ಲಿ ಅಕ್ರಮ ಗೋಸಾಗಣೆ ಮಾಡುವ ಜನರನ್ನು ಹಿಡಿದು ಒಪ್ಪಿಸುವ ಕೆಲಸವನ್ನು ಪ್ರವೀಣ್ ಪೂಜಾರಿ ಮತ್ತವನ ಸಹಚರರು ಮಾಡುತ್ತಿದ್ದರು. ಕಿರಣ್ ಶೆಟ್ಟಿ ಕೂಡ ಈ ಗ್ಯಾಂಗ್'ನ ಸದಸ್ಯನಾಗಿರುತ್ತಾನೆ. 2015ರ ಅ.9ರಂದು ಮೂಡಬಿದರೆಯಲ್ಲಿ ಪ್ರಶಾಂತ್ ಪೂಜಾರಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಆ ಕೊಲೆಯಲ್ಲಿ ಮುಸ್ತಾಫಾ ಕೂಡ ಒಬ್ಬ ಆರೋಪಿಯಾಗಿರುತ್ತಾನೆ. ಮೈಸೂರಿನ ಸೆಂಟ್ರಲ್ ಜೈಲಲ್ಲಿ ಮುಸ್ತಾಫಾನನ್ನು ಇರಿಸಲಾಗಿತ್ತು.
ಕಿರಣ್ ಶೆಟ್ಟಿ ಆ ಜೈಲಿಗೆ ಹೋಗಿದ್ದು ಯಾಕೆ?
ಮುಸ್ತಾಫಾ ಇದ್ದ ಜೈಲಿಗೇ ಕಿರಣ್ ಶೆಟ್ಟಿ ಹೋಗಲು ಏನು ಕಾರಣ.? ಮುಸ್ತಾಫಾನನ್ನ ಕೊಲ್ಲಲೆಂದೇ ಅಲ್ಲಿಗೆ ಹೋದನಾ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸುಲಿಗೆ ಪ್ರಕರಣವೊಂದರಲ್ಲಿ ಕಿರಣ್ ಶೆಟ್ಟಿ ಬಂಧಿಯಾಗಿ ಆ ಜೈಲು ಸೇರಿರುತ್ತಾನೆ. ಆತನ ಜೊತೆ ಪ್ರವೀಣ್ ಪೂಜಾರಿಯ ಇನ್ನಿಬ್ಬರು ಸಹಚರರೂ ಜೈಲಿನಲ್ಲಿದ್ದಾರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.