
ಬೆಂಗಳೂರು(ನ.10): ಹೊಸದಾಗಿ ಬರುತ್ತಿರುವ 2000 ರೂ. ಹೇಗಿದೆ ಗೊತ್ತಾ..? ನೋಟಿನ ಬಣ್ಣ ಪಿಂಕ್. ಕೆನ್ನೇರಳೆ ಬಣ್ಣದಲ್ಲಿದೆ. ನೋಟಿಗೆ ಎಲೆಕ್ಟ್ರೋಟೈಪ್ ವಾಟರ್ ಮಾರ್ಕ್ ಇದೆ.
ನೋಟಿನ ಅಳತೆ 66 ಮಿಲಿಮೀಟರ್ ಉದ್ದ 166 ಮಿಲಿ ಮೀಟರ್ ಅಗಲ್ಲ. ಒಂದು ಭಾಗದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರವಿದೆ. ಮತ್ತೊಂದು ಭಾಗದಲ್ಲಿ ದೇಶದ ಹೆಮ್ಮೆ ಮಂಗಳಯಾನ ಉಪಗ್ರಹದ ಚಿತ್ರವಿದೆ.
ಹೊಸ ನೋಟಿನಲ್ಲಿ ‘RBI' ‘Bharat' ‘2000' ಎಂದು ಮೈಕ್ರೋ ಪದಗಳಲ್ಲಿ ಮುದ್ರಿಸಲಾಗಿದೆ. ಇಡೀ ನೋಟು ಹಸಿರು ಮತ್ತು ನೀಲಿ ಬಣ್ಣದಲ್ಲಿದೆ. 2000 ರೂ.ನ ಹೆಸರನ್ನ ಇಂಗ್ಲಿಷ್ ಮತ್ತು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.
ನೋಟಿನ ಹಿಂಭಾಗದ ಎಡಭಾಗದಲ್ಲಿ ನೋಟು ಪ್ರಿಂಟ್ ಆದ ವರ್ಷ, ಸ್ವಚ್ಛ ಭಾರತ್ ಅಭಿಯಾನದ ಸಂದೇಶ, ದೇಶದ ಅಷ್ಟೂ ಭಾಷೆಗಲ ಪಟ್ಟಿ ಮಂಗಳಯಾನದ ಚಿತ್ರ ಹಾಗೂ ದೇವನಾಗರಿ ಲಿಪಿಯಲ್ಲಿರುವ 2000 ನಂಬರ್ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.