
ದೆಹಲಿ(ನ.10): 500, 1000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮಾಧ್ಯಮಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಮನೆಯಲ್ಲಿ ಹಣ ಸಂಗ್ರಹ ಮಾಡಿದ್ದವರಿಗೆ ದೊಡ್ಡ ಪೆಟ್ಟನ್ನು ನೀಡಿದ್ದಾರೆ.
ಒಂದು ದಿನಕ್ಕೆ ಬ್ಯಾಂಕಿಗೆ ಹಣ ಹೂಡುವ ಮಿತಿಯನ್ನು 2.5 ಲಕ್ಷಕ್ಕೆ ನಿಗದಿಪಡಿಸಿದ್ದು ಅದಕ್ಕಿಂತ ಹೆಚ್ಚಿನ ಮೊತ್ತ ಕಟ್ಟುವವರಿಗೆ ಅದರ ಎರಡರಷ್ಟು ಮೊತ್ತವನ್ನು ದಂಡವನ್ನಾಗಿ ಕಟ್ಟುವಂತೆ ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ. ಇದರಿಂದ ಸಣ್ಣ ಹೂಡಿಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಸ್ಪಷ್ಟಪಡಿಸಿರುವ ಜೇಟ್ಲಿ ಅಗತ್ಯ ಬಿದ್ದಲ್ಲಿ ಬ್ಯಾಂಕ್ ನೌಕರರೆ ಸಹಾಯ ಮಾಡಲಿದ್ದಾರೆ. ಬ್ಯಾಂಕುಗಳು ಹೆಚ್ಚುವರಿ ಸಮಯ ಕೆಲಸ ಮಾಡಲಿವೆ, ಆರ್ಬಿಐ ಮೂಲಕವೇ ಬ್ಯಾಂಕುಗಳಿಗೆ ಈ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಎರಡುವರೆ ಲಕ್ಷಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡುವವರ ಹಿನ್ನೆಲೆಯನ್ನು ಪರಿಶೀಲನೆ ಮಾಡಲಾಗುವುದು ಎಂದು ಸಹ ಹೇಳಿದ್ದು ತೆರಿಗೆ ಪಾವತಿಸದೆ ವಂಚಿಸುತ್ತಿರುವವರು ಹಾಗೂ ಲೆಕ್ಕಕ್ಕಿಲ್ಲದಷ್ಟು ನಗದು ಇಟ್ಟುಕೊಂಡವರ ವಿರುದ್ಧ ಕಾನೂನು ಕ್ರಮ ತಗೆದು ಕೊಳ್ಳುವುದಾಗಿಯೂ ತಿಳಿಸಿದ್ದಾರೆ.
ಮಿತಿಗಿಂತ ಹೆಚ್ಚು ಹೂಡಿಕೆ ಮಾಡಿದವರಿಗೆ ಶೇ. 200ರಷ್ಟು ದಂಡ ವಿಧಿಸಲು ಚಿಂತನೆ ನಡೆಸಲಾಗಿದೆ, ಉದಾಃ 1 ಕೋಟಿ ಡೆಪಾಸಿಟ್ ಮಾಡಿದರೆ, 2 ಕೋಟಿ ದಂಡ ಕಟ್ಟಬೇಕು ಎಂದಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ 1000 ರೂ.ನ ಹೊಸ ನೋಟು ಕೂಡಾ ಬರಲಿದೆ ಅದುವೇ ಹೊಸ ವಿನ್ಯಾಸ ಮತ್ತು ಹೊಸ ಬಣ್ಣದಲ್ಲಿ .
ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಯಾವ ಆತಂಕವೂ ಇಲ್ಲ, ಉತ್ತರದಾಯಿತ್ವ ಇಲ್ಲದ ಹಣದ ವಿರುದ್ಧ ಕಠಿಣ ಕ್ರಮ ಸರಿಯಾದ ಆರ್ಥಿಕ ಮೂಲ ತೋರಿಸಿದವರಿಗೆ ಸಮಸ್ಯೆ ಇಲ್ಲ ಎಂದಿರುವ ಅವರು, ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಲೆಕ್ಕಕ್ಕಿಲ್ಲದಷ್ಟು ನಗದು ಇಟ್ಟುಕೊಂಡವರ ವಿರುದ್ಧ ಕಠಿಣ ಕ್ರಮ, ತೆರಿಗೆ ಕಟ್ಟದೆ ತಪ್ಪಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.