ಹೈ-ಕ ಇನ್ನು ಕಲ್ಯಾಣ ಕರ್ನಾಟಕ| ಹೆಸರು ಬದಲಿಸಲು ಸಚಿವ ಸಂಪುಟ ಸಭೆ ನಿರ್ಧಾರ| ಈಡೇರಿದ ಹೈ-ಕ ಜನರ ಬಹುವರ್ಷಗಳ ಬೇಡಿಕೆ| ಮುಂಬೈ ಕರ್ನಾಟಕ ಕಿತ್ತೂರು ಕರ್ನಾಟಕ?
ಬೆಂಗಳೂರು[ಸೆ.07]: ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಮುಂಬೈ-ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.
ಮುಂದಿನ ಸಚಿವ ಸಂಪುಟದಲ್ಲಿ ಮುಂಬೈ-ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಬದಲಿಸುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯವರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಸಚಿವ ಸಂಪುಟ ಸಭೆಯಲ್ಲಿ ಹೈದ್ರಾಬಾದ್-ಕರ್ನಾಟಕದ ಹೆಸರು ಬದಲಿಸಿದಂತೆ ಮುಂಬೈ-ಕರ್ನಾಟಕದ ಹೆಸರು ಬದಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
undefined
ನೆನಪಿರಲಿ: ಹೈದರಾಬಾದ್ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ಮಾಡಿದ ರಾಜ್ಯ ಸರ್ಕಾರ
ಮುಂಬೈ-ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ಹೆಸರು ಬದಲಿಸುವ ಬೇಡಿಕೆಯು ಹಲವು ದಶಕಗಳಿಂದ ಇದೆ. ಹೈದರಾಬಾದ್-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಪ್ರದೇಶಗಳ ಹೆಸರನ್ನು ಒಟ್ಟಿಗೆ ಬದಲಿಸಬೇಕು ಎಂಬ ಕೂಗು ಇತ್ತು. ಆದರೆ, ಇದೀಗ ಕೇವಲ ಹೈದರಾಬಾದ್-ಕರ್ನಾಟಕ ಪ್ರದೇಶದ ಹೆಸರು ಮಾತ್ರ ಬದಲಿಸಲಾಗಿದ್ದು, ಮುಂದಿನ ದಿನದಲ್ಲಿ ಮುಂಬೈ-ಕರ್ನಾಟಕ ಪ್ರದೇಶದ ಹೆಸರು ಸಹ ಬದಲಾಗುವ ನಿರೀಕ್ಷೆ ಇದೆ.