ಹೈದ್ರಾಬಾದ್‌, ಮುಂಬೈ ನಗರಕ್ಕೆ ಯುನೆಸ್ಕೋ ಸೃಜನಶೀಲ ಕಿರೀಟ

By Kannadaprabha NewsFirst Published Nov 1, 2019, 3:39 PM IST
Highlights

ವಾಣಿಜ್ಯ ನಗರಿ ಮುಂಬೈ ಹಾಗೂ ಮುತ್ತಿನ ನಗರ ಎಂದೇ ಹೆಸರುವಾಸಿಯಾದ ಹೈದರಾಬಾದ್‌ ನಗರಗಳಿಗೆ ಇದೀಗ ಯುನೆಸ್ಕೋದಿಂದ ಇದೀಗ ‘ಕ್ರಿಯೇಟಿವ್‌ ಸಿಟೀಸ್‌’ ಎಂಬ ಕೀರಿಟ ಪ್ರಾಪ್ತವಾಗಿದೆ. 

ಹೈದರಾಬಾದ್‌ [ನ.01] : ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಮುತ್ತಿನ ನಗರ ಅಥವಾ ಬಿರಿಯಾನಿ ನಗರವೆಂದೇ ಹೆಸರುವಾಸಿಯಾದ ಹೈದರಾಬಾದ್‌ ನಗರಗಳಿಗೆ ಇದೀಗ ಯುನೆಸ್ಕೋದಿಂದ ಇದೀಗ ‘ಕ್ರಿಯೇಟಿವ್‌ ಸಿಟೀಸ್‌’(ಸೃಜನಶೀಲ ನಗರಗಳು) ಎಂಬ ಕೀರಿಟ ಪ್ರಾಪ್ತವಾಗಿದೆ. 2019ರ ವಿಶ್ವದ ನಗರಗಳ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದ ಅಂಗವಾಗಿ ಭಾರತದ ಎರಡು ನಗರಗಳನ್ನು ಸೃಜನಶೀಲ ನಗರಗಳು ಎಂದು ಘೋಷಿಸಲಾಗಿದೆ.

ಈ ಪ್ರಕಾರ ಚಿತ್ರೋದ್ಯಮ ವಿಭಾಗದಲ್ಲಿ ಮುಂಬೈ ಹಾಗೂ ಭೋಜನ ಶಾಸ್ತ್ರ ವಿಭಾಗದಲ್ಲಿ ಹೈದರಾಬಾದ್‌ ಅನ್ನು ಸೃಜನಶೀಲ ನಗರಗಳು ಎಂದು ಹೆಸರಿಸಲಾಗಿದೆ. ಈಗಾಗಲೇ ಚೆನ್ನೈ ಮತ್ತು ವಾರಾಣಸಿಯನ್ನು ಈಗಾಗಲೇ ಸಂಗೀತ ನಗರಿ, ಜೈಪುರ ನಗರವನ್ನು ಜಾನಪದ ಕಲೆಗಳು ಹಾಗೂ ಕರಕುಶಲ ವಸ್ತುಗಳ ನಗರವೆಂದು ಹೆಸರಿಸಲಾಗಿದೆ. 

ಶ್ರೀರಂಗಪಟ್ಟಣ ಸೇರಿ ಇನ್ನಷ್ಟು ಸ್ಮಾರಕಕ್ಕೆ ಯುನೆಸ್ಕೋ ಮಾನ್ಯತೆಗೆ ಅರ್ಜಿ...

ಇಂಥ ಘೋಷಣೆಗೆ ಒಳಗಾದ ಬಳಿಕ ನಗರಗಳು ಸಾರ್ವಜನಿಕ ಮತ್ತು ಖಾಸಗಿ ವಲಯ ಸಹಭಾಗಿತ್ವದ ಮೂಲಕ ಸಾಂಸ್ಕೃತಿಕ ಕಲೆಗಳು, ಸರಕು ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆಯಲ್ಲಿ ಸಕ್ರಿಯರಾಗುವುದಾಗಿ ಈ ನಗರಗಳು ಪ್ರಮಾಣ ಮಾಡಲಿವೆ ಎಂದು ಯುನೆಸ್ಕೋ ಹೇಳಿದೆ.

ಡಾರ್ಜಿಲಿಂಗ್‌ ಟಾಯ್‌ಟ್ರೈನ್‌ಗೆ ಯುನೆಸ್ಕೋ ಪಾರಂಪರಿಕ ಪಟ್ಟ ಕಳೆದುಕೊಳ್ಳುವ ಭೀತಿ!...

ಕರ ಕುಶಲ ಕಲೆಗಳು, ಮಾಧ್ಯಮ ಕಲೆಗಳು, ಸಿನಿಮಾ, ವಿನ್ಯಾಸ, ಭೋಜನ ಶಾಸ್ತ್ರ, ಸಾಹಿತ್ಯ ಮತ್ತು ಸಂಗೀತ ಎಂಬ 7 ವಿಭಾಗದಲ್ಲಿ ಸೃಜನಶೀಲ ನಗರಗಳನ್ನು ಘೋಷಿಸಲಾಗಿದೆ.

 



66 cities join the Network.

Wanna know which ones are these?

Find out here 👉https://t.co/oSFM0Vms2F

🌆 pic.twitter.com/wvklyox2UL

— UNESCO (@UNESCO)
click me!