ಮೂರು ಬಾರಿ ಸೊತವರಿಗೆ ಮಂತ್ರಿ ಭಾಗ್ಯ : ಮುಂದುವರೆದ 2 ದಶಕಗಳ ಇತಿಹಾಸ

Published : Sep 01, 2017, 11:48 PM ISTUpdated : Apr 11, 2018, 12:41 PM IST
ಮೂರು ಬಾರಿ ಸೊತವರಿಗೆ ಮಂತ್ರಿ ಭಾಗ್ಯ : ಮುಂದುವರೆದ 2 ದಶಕಗಳ ಇತಿಹಾಸ

ಸಾರಾಂಶ

ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಯಾದರೆ  ಸಾಕು ಆಯಾ ಕ್ಷೇತ್ರದ ಶಾಸಕರು, ಅವರ ಬೆಂಬಲಿಗರು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರದಲ್ಲಿ ಸಚಿವ ಸಂಪುಟ ಸೇರ್ಪಡೆಗೆ ಕಸರತ್ತು ನಡೆಸುವುದು ಕಾಮನ್​ ಆದರೆ ಇಲ್ಲೊಂದು ಕ್ಷೇತ್ರವಿದೆ, ಈ ಕ್ಷೇತ್ರದಲ್ಲಿ ಯಾರೇ ಆಯ್ಕೆಯಾಗಿ ಬಂದರೂ ಅವರಿಗೆ ಮಂತ್ರಿಗಿರಿ ಮಾತ್ರ ತಪ್ಪೋದಿಲ್ಲ.

ಬೀದರ್(ಸೆ.1): ಕಳೆದ 2 ದಶಕಗಳಿಂದ ಅದೃಷ್ಟದ ಮುಧೋಳಕ್ಕೆ ನಿಲ್ಲದ ಮಂತ್ರಿ ಭಾಗ್ಯ. ಈಗಲೂ ತಪ್ಪಲಿಲ್ಲ ಮುಧೋಳಕ್ಕೆ ಸಚಿವ ಸ್ಥಾನ. ರಾಜ್ಯದಲ್ಲಿ ಬಿಜೆಪಿ ಬರಲಿ, ಕಾಂಗ್ರೆಸ್​ ಬರಲಿ ಯಾರೇ ಅಧಿಕಾರಕ್ಕೆ ಬಂದರೂ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಫಿಕ್ಸ್​. ತಿಮ್ಮಾಪೂರ ಸಂಪುಟ ಸೇರ್ಪಡೆ ಬೆನ್ನಲ್ಲೆ ಮತ್ತೆ ಅಜರಾಮರವಾಗಿ ಉಳಿಯಿತು ಮುಧೋಳ ಮತಕ್ಷೇತ್ರದ ಇತಿಹಾಸ.

ಬಾಗಲಕೋಟೆ ಜಿಲ್ಲೆಯ ಮೀಸಲು ಕ್ಷೇತ್ರವಾಗಿರೋ ಮುಧೋಳ ವಿಧಾನಸಭಾ ಮತಕ್ಷೇತ್ರ. 3 ಬಾರಿ ಸೋತರೂ ವಿಧಾನ ಪರಿಷತ್ ಸ್ಥಾನದಲ್ಲಿ ಆಯ್ಕೆಯಾಗಿ ಸಚಿವರಾದ ಆರ್.ಬಿ.ತಿಮ್ಮಾಪೂರ. ಈ ಹಿಂದಿನ 2 ಬಾರಿ ಗೆದ್ದು ಈ ಕ್ಷೇತ್ರದಲ್ಲಿ ಸಚಿವರಾಗಿದ್ದ ಬಿಜೆಪಿಯ ಗೋವಿಂದ ಕಾರಜೋಳ.

ಆ ಕ್ಷೇತ್ರದ ಜನರ ಅದೃಷ್ಟವೋ ಅಥವಾ ಆ ಕ್ಷೇತ್ರದ ಜನಪ್ರತಿನಿಧಿಗಳ ಭಾಗ್ಯವೋ ಗೊತ್ತಿಲ್ಲ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಕ್ಷೇತ್ರಕ್ಕೆ ಮಾತ್ರ ಮಂತ್ರಿಭಾಗ್ಯ ತಪ್ಪೋದಿಲ್ಲ. ಆದರೆ ಈ ಬಾರಿ ಈ ಕ್ಷೇತ್ರದ ಜನತೆಗೆ ಅದೃಷ್ಟ ಕೈ ಕೊಟ್ಟಿತು ಅನ್ನುವಷ್ಟರಲ್ಲಿ ಸಿಎಂ ಸಿದ್ದರಾಮಯ್ಯನವರ ಸಚಿವ ಸಂಪುಟಕ್ಕೆ ತಿಮ್ಮಾಪೂರ ಅವರನ್ನು ಸೇರ್ಪಡೆಯಾಗಿಸುವುದರ  ಮೂಲಕ ಕಳೆದ 2 ದಶಕಗಳ ಇತಿಹಾಸ ಮತ್ತೆ ಮುಂದುವರಿಸಿದ್ದಾರೆ.

ಇಬ್ಬರು ಮಂತ್ರಿಗಳು

ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಯಾದರೆ  ಸಾಕು ಆಯಾ ಕ್ಷೇತ್ರದ ಶಾಸಕರು, ಅವರ ಬೆಂಬಲಿಗರು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರದಲ್ಲಿ ಸಚಿವ ಸಂಪುಟ ಸೇರ್ಪಡೆಗೆ ಕಸರತ್ತು ನಡೆಸುವುದು ಕಾಮನ್​ ಆದರೆ ಇಲ್ಲೊಂದು ಕ್ಷೇತ್ರವಿದೆ, ಈ ಕ್ಷೇತ್ರದಲ್ಲಿ ಯಾರೇ ಆಯ್ಕೆಯಾಗಿ ಬಂದರೂ ಅವರಿಗೆ ಮಂತ್ರಿಗಿರಿ ಮಾತ್ರ ತಪ್ಪೋದಿಲ್ಲ. ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನ ಸಭಾ ಮತಕ್ಷೇತ್ರ. ಮೀಸಲು ವಿಧಾನಸಭಾ ಮತಕ್ಷೇತ್ರವಾಗಿರೋ ಮುಧೋಳಕ್ಕೆ ಕಳೆದ 2 ದಶಕಗಳಿಂದಈ ಕ್ಷೇತ್ರದ ಜನಪ್ರತಿನಿಧಿಗಳಿಗೆ ಆಯಾ ಸರ್ಕಾರದಲ್ಲಿ ಮಂತ್ರಿಗಿರಿ ಭಾಗ್ಯ ಮಾತ್ರ ತಪ್ಪಿಲ್ಲ.

ಬಿಜೆಪಿಯಿಂದ ಗೋವಿಂದ ಕಾರಜೋಳ ಸಚಿವರಾಗುತ್ತ ಬಂದಿದ್ದರೆ, ಇತ್ತ ಕಾಂಗ್ರೆಸ್​ನಿಂದ ಆರ್.ಬಿ.ತಿಮ್ಮಾಪೂರ ಮಂತ್ರಿಭಾಗ್ಯ ಅನುಭವಿಸುತ್ತಿದ್ದಾರೆ. ಮೊದಲು ತಿಮ್ಮಾಪೂರ ಮಂತ್ರಿಯಾಗಿದ್ದರೆ ನಂತರ ಕಳೆದ ಅವಧಿಗೆ ಕಾರಜೋಳ ಆಯ್ಕೆಯಾಗಿ ಮಂತ್ರಿಯಾಗಿದ್ದರು. ಈ ಬಾರಿ ಕಾರಜೋಳ ಆಯ್ಕೆಯಾಗಿದ್ದರೂ ಸರ್ಕಾರ ಕಾಂಗ್ರೆಸ್​ ಆಗಿದ್ದರಿಂದ ಮಂತ್ರಿ ಪದವಿ ತಪ್ಪಿತ್ತು. ಆದರೆ ಮರಳಿ ಆರ್.ಬಿ.ತಿಮ್ಮಾಪೂರ ವಿಧಾನಪರಿಷತ್​ಗೆ ಆಯ್ಕೆಯಾಗಿ ಮತ್ತೇ ಸಿದ್ದರಾಮಯ್ಯನವರ ಸಂಪುಟಕ್ಕೆ ಸೇರ್ಪಡೆಯಾಗಿದ್ದರಿಂದ ಮುಧೋಳದ ಇತಿಹಾಸ ಮುಂದುವರೆದಂತಾಗಿದೆ.

ವರದಿ: ಮಲ್ಲಿಕಾರ್ಜುನ ಹೊಸಮನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ