ತಾನು ಹೆತ್ತ ಮಗು ತನಗೇ ಬೇಡವಾಯ್ತಾ?: ಹಸುಳೆಯನ್ನು ಬಾಳೆ ತೋಟದಲ್ಲಿ ಬಿಟ್ಟು ಹೋದ ತಾಯಿ

Published : Mar 29, 2017, 06:13 AM ISTUpdated : Apr 11, 2018, 12:41 PM IST
ತಾನು ಹೆತ್ತ ಮಗು ತನಗೇ ಬೇಡವಾಯ್ತಾ?: ಹಸುಳೆಯನ್ನು ಬಾಳೆ ತೋಟದಲ್ಲಿ ಬಿಟ್ಟು ಹೋದ ತಾಯಿ

ಸಾರಾಂಶ

ನಿನ್ನೆ ತಾನೇ ಜನಿಸಿದ, ಹೆಣ್ಣು ಹಸುಗೂಸನ್ನು ತಾಯಿಯೊಬ್ಬಳು ಬಾಳೆ ತೋಟದಲ್ಲಿ ಬಿಟ್ಟು ಹೋಗಿದ್ದು, ಅದನ್ನು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.

ಬಳ್ಳಾರಿ(ಮಾ.29): ನಿನ್ನೆ ತಾನೇ ಜನಿಸಿದ, ಹೆಣ್ಣು ಹಸುಗೂಸನ್ನು ತಾಯಿಯೊಬ್ಬಳು ಬಾಳೆ ತೋಟದಲ್ಲಿ ಬಿಟ್ಟು ಹೋಗಿದ್ದು, ಅದನ್ನು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಂಪ್ಲಿಯ ಜೋಗಿ ಕಾಲುವೆಯ ಎಲ್ಲಮ್ಮನ ಗುಡಿ ಬಳಿಯ ತಮ್ಮ ಬಾಳೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಕಾರ್ಮಿಕರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಸ್ವಲ್ಪ ಹೊತ್ತಿನ ಮುಂದೆ ಜನಿಸಿದ ಹೆಣ್ಣು ಶಿಶುವೊಂದು  ಅಳುತ್ತಿತ್ತು. ಇದನ್ನು ನೋಡಿದ ಕಾರ್ಮಿಕರು ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಅವರು ಮಕ್ಕಳನ್ನು ರಕ್ಷಣೆ ಮಾಡುವ ಡಾನ್ ಬಾಸ್ಕೋ ಸಂಸ್ಥೆಯ ಕಲಾವತಿ ಅವರಿಗೆ ಪೋನ್ ಮಾಡಿ ಮಗುವನ್ನು ರಕ್ಷಣೆ ಮಾಡಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಗುವನ್ನು ಪರೀಕ್ಷಿಸಿದ ವೈದ್ಯ ಚಂದ್ರಮೋಹನ್ ಚಿಕಿತ್ಸೆ ನೀಡಿದ್ದು,  ಮಗು 2.6 ಕಿಲೋ ತೂಕ ಇದ್ದು ಆರೋಗ್ಯವಂತವಾಗಿದೆ ಎಂದು ಹೇಳಿದರು. ನಂತರ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!