
ನವದೆಹಲಿ (ಮಾ.29): ಕೊನೆಗೂ ಮಹತ್ವಕಾಂಕ್ಷೆಯ ಜಿಎಸ್'ಟಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ‘ಒಂದು ದೇಶ, ಒಂದು ತೆರಿಗೆ’ ಸಂಬಂಧ ಮಹತ್ವ ಹೆಜ್ಜೆ ಇಟ್ಟಿದ್ದು, ಏಕಕಾಲದಲ್ಲಿ 4 ಮಸೂದೆಗಳು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಮತದಾನದ ಮೂಲಕ ಜಿಎಸ್ಟಿ ಮಸೂದೆ ಅಂಗೀಕಾರವಾಗಿದ್ದು ಜುಲೈ 1ರಿಂದಲೇ ದೇಶಾದ್ಯಂತ ಏಕರೂಪ ತೆರಿಗೆ ಜಾರಿಯಾಗುವ ಸಾಧ್ಯತೆಯಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಜಿಎಸ್'ಟಿ ಕುರಿತ 4 ತಿದ್ದುಪಡಿ ಮಸೂದೆಗಳನ್ನು ಮಂಡಿಸಿದರು. ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ 2017ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಜಿಎಸ್ ಟಿ ಜಾರಿಯ (ಜುಲೈ 1 ರಿಂದ) ಒಳಗಾಗಿ ಈ ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ.
ಮಸೂದೆ ಜಾರಿ ಬಳಿಕ ಕೇಂದ್ರ, ರಾಜ್ಯಗಳು ಹೇರುವ ವಿವಿಧ ಪ್ರತ್ಯೇಕ ತೆರಿಗೆ ರದ್ದು
ಪಾರದರ್ಶಕ, ಭ್ರಷ್ಟಾಚಾರ ರಹಿತ, ಊಹಿಸಬಹುದಾದ ತೆರಿಗೆ ವ್ಯವಸ್ಥೆ ಜಾರಿಗೆ
ತೆರಿಗೆ ಜಾಲ ವಿಸ್ತರಣೆ, ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ, ಸರಳೀಕೃತ ವ್ಯವಸ್ಥೆ
ಮೊದಲ ಹಂತದಲ್ಲಿ ತೆರಿಗೆ ವ್ಯವಸ್ಥೆ ಬದಲಿಗೆ ಗಮ್ಯ ಸ್ಥಾನದಲ್ಲಿ ತೆರಿಗೆ ವ್ಯವಸ್ಥೆ ಜಾರಿ
ಕೇಂದ್ರ, ರಾಜ್ಯಗಳ ಮಧ್ಯೆ ಉದ್ಬವಿಸಬಹುದಾದ ತೆರಿಗೆ ವಿವಾದ ಇತ್ಯರ್ಥಕ್ಕೆ ವ್ಯಾಜ್ಯ ಮಂಡಳಿ ರಚನೆ
ಎಲ್ಲ ಸರಕು, ಸೇವೆಗಳಿಗೆ ಒಂದೇ ಒಂದು ತೆರಿಗೆ ಅನ್ವಯ
ವ್ಯಾಟ್, ಸೇಲ್ಸ್, ಎಕ್ಸೈಸ್, ಕಸ್ಟಮ್ಸ್, ಸೇವಾ ತೆರಿಗೆ, ಮನರಂಜನಾ ತೆರಿಗೆ ಇರುವುದಿಲ್ಲ
ಪ್ರತ್ಯಕ್ಷ, ಪರೋಕ್ಷ ಇರುವ ಎಲ್ಲ ಪ್ರತ್ಯೇಕ ತೆರಿಗೆಗಳೂ ರದ್ದಾಗುತ್ತವೆ
ಉದ್ಯಮಗಳ ತೆರಿಗೆ ಪಾವತಿ ಸರಳೀಕೃತವಾಗಿ, ತೆರಿಗೆ ಬದ್ಧತೆ ಹೆಚ್ಚಳ
ಸ್ವಯಂ ಪ್ರೇರಿತ ತೆರಿಗೆ ಪಾವತಿಗೆ ಉತ್ತೇಜನ ಸಿಗುವ ನಿರೀಕ್ಷೆ
ದೇಶಾದ್ಯಂತ ಒಂದೇ ರೀತಿಯ ತೆರಿಗೆ ಪದ್ಧತಿ ಜಾರಿಗೆ ಬರುವುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.