ಕುಮಾರಸ್ವಾಮಿ ಇಡೀ ರಾಜ್ಯಕ್ಕೆ ಸಿಎಂ ಅಲ್ಲ
ಸಂಸದೆ ಶೋಭಾ ಕರಂದ್ಲಾಜೆ ಆರೋಪ
ಹಳೆ ಮೈಸೂರು ಭಾಗಕ್ಕಷ್ಟೇ ಕುಮಾರಣ್ಣ ಸಿಎಂ
ಕರಾವಳಿ, ಉತ್ತರಕರ್ನಾಟಕದ ಬವಣೆ ಕೇಳೋರಿಲ್ಲ
ಚಿಕ್ಕಮಗಳೂರು(ಜು.13): ಕುಮಾರಸ್ವಾಮಿ ನಾಟ್ ಮೈ ಸಿಎಂ ಅನ್ನೋದು ಕೇವಲ ಕರಾವಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅನ್ನಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಲ ಮನ್ನಾ ಮಾಡ್ತೀನಿ, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಲವನ್ನೂ ಮನ್ನಾ ಮಾಡ್ತೇನೆ ಎಂದು ಹೇಳಿದ್ದ ಸಿಎಂ, ಇವತ್ತು ಸಾಲ ಮನ್ನಾದ ಬಗ್ಗೆ ಸ್ಪಷ್ಟತೆ ಇಲ್ಲದಂತ ನಿಲುವು ಪಡೆದಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರಿಂದ ರಾಜ್ಯದ ಜನಕ್ಕೆ ಮೋಸ ಆಗಿದ್ದು, ಇದಕ್ಕೆ ಸಿಎಂ ಪಶ್ಚಾತಾಪ ಪಡಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು.
ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಮಳೆಗೆ ಸಾವು-ನೋವುಗಳಾಗಿವೆ, ಮನೆ-ತೋಟ ಹಾಳಾಗಿದೆ. ಆದ್ರೆ, ಅವರಿಗೆ ಪರಿಹಾರ ಕೊಡಬೇಕು ಎಂದು ಸಿಎಂ ಗೆ ಅನ್ನಿಸಿಲ್ಲ. ಕೆಟ್ಟ ರಾಜನೀತಿಯನ್ನ ಮಾಡ್ತಾ ಅವರು ಗೆದ್ದಂತ ರಾಮನಗರ, ಮಂಡ್ಯ, ಹಾಸನ, ಮೈಸೂರು ಇಷ್ಟೆ ಜಿಲ್ಲೆಗಳಿಗೆ ಅವರು ಮುಖ್ಯಮಂತ್ರಿ ಅವರು ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಶೋಭಾ ಗುಡುಗಿದರು.