MP ಹನಿಟ್ರ್ಯಾಪ್ ಸೆಕ್ಸ್ ಸ್ಕ್ಯಾಂಡಲ್ ಸ್ಫೋಟ, ಸರ್ಕಾರಕ್ಕೆ ಕುತ್ತು ತರುತ್ತಾ?

By Web DeskFirst Published Oct 21, 2019, 7:47 PM IST
Highlights

ಮಧ್ಯಪ್ರದೇಶದ ಹನಿಟ್ರ್ಯಾಪ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್/ ವಿಶೇಷ ತನಿಖಾ ದಳದ ಅಧಿಕಾರಿಗಳನ್ನು ಬದಲಾಯಿಸಿದ ಸರ್ಕಾರಕ್ಕೆ ಚಾಟಿ ಬೀಸಿದ ಕೋರ್ಟ್/ ಪ್ರಕರಣದ ವಿಚಾರಣೆಯ ಎಲ್ಲ ಮಾಹಿತಿಯನ್ನು ನ್ಯಾಯಾಲಯ ಪಡೆದುಕೊಳ್ಳಲಿದೆ.

ಭೋಪಾಲ್[ಅ. 21]  ಮಧ್ಯಪ್ರದೇಶದ ಹನಿಟ್ರ್ಯಾಪ್ ಪ್ರಕರಣ ಬಗೆದಷ್ಟು ಆಳ-ಅಗಲಕ್ಕೆ ಹೋಗುತ್ತಿದೆ. ಇದೀಗ ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಆದೇಶ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕ ತರಲಿದೆಯಾ? ಎಂಬ ಪ್ರಶ್ನೆ ಮೂಡಿದೆ.

ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಇದ್ದಾರೆ ಎನ್ನಲಾದ ಮಧ್ಯಪ್ರದೇಶದ ಅತಿದೊಡ್ಡ ಸೆಕ್ಸ್ ಸ್ಕ್ಯಾಂಡಲ್ ವಿಚಾರಣೆಯ ಹಂತಗಳನ್ನು ಮಾನಿಟರ್ ಮಾಡುವುದಾಗಿ ಹೇಳಿದೆ.

ಪ್ರಕರಣದ ವಿಚಾರಣೆಗೆಂದು ಎಂಟು ದಿನಗಳ ಹಿಂದೆ ನೇಮಕವಾಗಿದ್ದ ವಿಶೇಷ ತನಿಖಾ ದಳದ ಇಬ್ಬರು ಪ್ರಮುಖ ಅಧಿಕಾರಿಗಳನ್ನು ಮಧ್ಯಪ್ರದೇಶ ಸರ್ಕಾರ ಬದಲು ಮಾಡಿದ ನಂತರದಲ್ಲಿ ಈ ಆದೇಶವನ್ನು ನ್ಯಾಯಾಲಯ ನೀಡಿದೆ. ಅಲ್ಲದೇ ಇನ್ನು ಮುಂದೆ ತನಿಖಾಧಿಕಾರಿಯನ್ನು ಹೇಳದೇ ಕೇಳದೇ ಬದಲು ಮಾಡುವಂತಿಲ್ಲ. ಒಂದು ವೇಳೆ ಬದಲು ಮಾಡುವ ಸಂದರ್ಭ ಎದುರಾದರೆ ನಮ್ಮ ಗಮನಕ್ಕೆ ತರಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.

ವಿವಿಐಪಿಗಳ ಬೆತ್ತಲೆ ಫೈಲ್ ಸಂಖ್ಯೆಯೇ 5000!

ಸೆ. 17 ರಂದು ಉಗ್ರ ನಿಗರಹ ದಳ ಮತ್ತು ಅಪರಾಧ ವಿಭಾಗದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 5 ಜನ ಮಹಿಳೆಯರು, ಒಬ್ಬ ಪುರುಷನನ್ನು ಬಂಧನ ಮಾಡಿದ್ದರು. ಇಂದೋರ್ ಮುನ್ಸಿಪ್ ಕಾರ್ಪೋರೇಶನ್ ಅಧಿಕಾರಿಯೊಬ್ಬರು ಅಶ್ಲೀಲ ವಿಡಿಯೋ ಆಧಾರದಲ್ಲಿ ನನ್ನನ್ನು ಬ್ಲಾಕ್ ಮೇಲ್ ಮಾಡಲಾಗುತ್ತದೆ ಎಂದು ನೀಡಿದ್ದ ದೂರಿನ ನಂತರ ದಾಳಿ ಮಾಡಿದಾಗ ದೊಡ್ಡ ಹಗರಣ ಬೆಳಕಿಗೆ ಬಂದಿತ್ತು.

ನವೆಂಬರ್ 2ಕ್ಕೆ ಹಿಯರಿಂಗ್ ಇದ್ದು ಅಷ್ಟರೊಳಗೆ ಇಲ್ಲಿಯವರೆಗೆ ನಡೆದ ವಿಚಾರಣೆಗೆಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದಲ್ಲಿ ಒಂದು ಕಡೆ ವಿವಿಧ ಪಕ್ಷದ ನಾಯಕರು ಇದ್ದಾರೆ. ಅನೇಕ ನಾಯಕರು ಮತ್ತು ಅಧಿಕಾರಿಗಳ ಅಶ್ಲೀಲ ಚಿತ್ರಗಳಿವೆ ಎಂಬುದು ಒಂದು ಕಡೆಯ ಆತಂಕವಾದರೆ ಇನ್ನೊಂದು ಕಡೆ ಪ್ರಕರಣ ಆರೋಪಿಗಳ ಸಾಲಿನಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳು ಕೇಳಿ ಬರುತ್ತಿವೆ.

click me!
Last Updated Oct 21, 2019, 7:49 PM IST
click me!