
ನವದೆಹಲಿ(ಅ.21): ಸದಾ ಬಿಜೆಪಿ ಮತ್ತು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಬಾರಿ ಬಿಜೆಪಿ ಅತ್ಯಂತ ಪ್ರಾಮಾಣಿಕ ನಾಯಕ ಯಾರು ಎಂಬುದನ್ನು ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಕಾರ ಬಿಜೆಪಿ ಅತ್ಯಂತ ನಿಷ್ಠಾವಂತ ಮತ್ತು ಪ್ರಾಮಾಣಿಕ ನಾಯಕ ಎಂದರೆ ಶಾಸಕ ಬಕ್ಷೀಶ್ ಸಿಂಗ್ ವರ್ಕ್ ಅಂತೆ. ಇದಕ್ಕೆ ಕಾರಣವನ್ನೂ ರಾಹುಲ್ ಗಾಂಧಿ ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ಮತದಾನ: ಮತಗಟ್ಟೆಯ ಸರತಿ ಸಾಲಿನಲ್ಲಿ ಪ್ರತಿಷ್ಠಿತರು!
ಮತದಾರ ಯಾರಿಗೇ ಮತದಾನ ಮಾಡಿದರೂ ಅವರ ಮತ ಬಿಜೆಪಿಗೆ ಬೀಳಲಿದೆ ಎಂದು ಚುನಾವಣಾ ಪ್ರಚಾರ ವೇಳೆ ಬಕ್ಷೀಶ್ ಸಿಂಗ್ ವರ್ಕ್ ಹೇಳಿದ್ದರು. ಇವಿಎಂ ಯಂತ್ರಗಳನ್ನು ಬಿಜೆಪಿಗೆ ಮತ ಬೀಳುವಂತೆ ಮಾರ್ಪಡಿಸಲಾಗಿದೆ ಎಂದು ವರ್ಕ್ ನುಡಿದಿದ್ದರು.
ಪ್ರಧಾನಿ ಮೋದಿ ಹಾಗೂ ಸಿಎಂ ಮನೋಹರ್‌ಲಾಲ್ ಖಟ್ಟರ್ ಬಹಳ ಚಾಣಾಕ್ಷರಾಗಿದ್ದು, ಎಲ್ಲ ಮತಗಳೂ ಬಿಜೆಪಿಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ನೀವು ಯಾರಿಗೆ ಮತ ಹಾಕುತ್ತೀರಿ ಎಂಬುದು ಕೂಡ ಮೋದಿ ಅವರಗೆ ಗೊತ್ತಾಗಲಿದೆ ಎಂದು ವರ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ವರ್ಕ್ ಅವರ ಈ ಹೇಳಿಕೆಯನ್ನು ಸ್ವಾಗತಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಹೇಗೆ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿ ಅತ್ಯಂತ ಪ್ರಾಮಾಣಿಕ ನಾಯಕ ಬಕ್ಷೀಶ್ ಸಿಂಗ್ ವರ್ಕ್ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದೊಳ್ಳೆ ತಲೆನೋವು! ವಿದೇಶಕ್ಕೆ ಹೋದ್ರೂ ರಾಹುಲ್ ಎಸ್‌ಪಿಜಿ ಸಿಬ್ಬಂದಿ ಕರೆದೊಯ್ಯಲ್ಲ!
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಜನರಿಗೆ ಸತ್ಯ ತಿಳಿಸಿರುವ ವರ್ಕ್ ನಿಜಕ್ಕೂ ಅಭಿನಂದನಾರ್ಹರು ಎಂದು ಕುಹುಕವಾಡಿದ್ದಾರೆ. ಇನ್ನು ತಮ್ಮ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ಬಕ್ಷೀಶ್ ಸಿಂಗ್ ವರ್ಕ್ ಅವರಿಗೆ ಈಗಾಗಲೇ ನೊಟೀಸ್ ಜಾರಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.