ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮಾಯಾವತಿಗೆ ಬಿಜೆಪಿ ಮುಖಂಡ ಮೌರ್ಯ ಸಲಹೆ

Published : Mar 16, 2017, 06:17 AM ISTUpdated : Apr 11, 2018, 01:09 PM IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮಾಯಾವತಿಗೆ ಬಿಜೆಪಿ ಮುಖಂಡ ಮೌರ್ಯ ಸಲಹೆ

ಸಾರಾಂಶ

ಮಾಯಾವತಿ ಕೋರ್ಟ್’ಗೆ ಮೊರೆ ಹೋಗುವುದನ್ನು ಲೆಕ್ಕಿಸುವುದಿಲ್ಲ, ಆದರೆ ಕೋರ್ಟ್’ಗೆ ಹೋಗುವ ಮುಂಚೆ ಅವರೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಅವರಿಗೆ ನಿದ್ರೆ ಹಾಗೂ ವಿರಾಮದ ಅಗತ್ಯವಿದೆ, ಎಂದು ಮೌರ್ಯ  ಹೇಳಿದ್ದಾರೆ.

ನವದೆಹಲಿ (ಮಾ.16):  ವಿದ್ಯುನ್ಮಾನ ಮತಯಂತ್ರ (ಇವಿಎಂ) ವಂಚನೆ ವಿಚಾರವು ದಿನದಿಂದ ದಿನಕ್ಕೆ ರಾಜಕೀಯ ಕಾವು ಪಡೆದುಕೊಳುತ್ತಿದೆ. ಈ ಬಗ್ಗೆ ಬಿಎಸ್ಪಿ ವರಿಷ್ಠೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ, ಕೆಲದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

ಮಾಯಾವತಿ ಕೋರ್ಟ್’ಗೆ ಮೊರೆ ಹೋಗುವುದನ್ನು ಲೆಕ್ಕಿಸುವುದಿಲ್ಲ, ಆದರೆ ಕೋರ್ಟ್’ಗೆ ಹೋಗುವ ಮುಂಚೆ ಅವರೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಅವರಿಗೆ ನಿದ್ರೆ ಹಾಗೂ ವಿರಾಮದ ಅಗತ್ಯವಿದೆ, ಎಂದು ಮೌರ್ಯ ಏಎನ್’ಐ’ಗೆ ಹೇಳಿದ್ದಾರೆ.

ಮಾಯಾವತಿ ಆರೋಪಗಳಲ್ಲಿ ತೊಡಗದೇ, ಪ್ರಾಮಾಣಿಕವಾಗಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕೆಂದು ಮೌರ್ಯ ಹೇಳಿದ್ದಾರೆ.

2007ರಲ್ಲಿ ಜನಾದೇಶ ಅವರ ಪರವಾಗಿ ಬಂದಾಗ ಅದನ್ನು  ಅವರು ಆಕ್ಷೇಪಿಸಿರಲಿಲ್ಲ, ಆದರೆ ಈಗ ಮತಯಂತ್ರದಲ್ಲಿ ಅವರಿಗೆ ದೋಷ ಕಂಡುಬರುತ್ತಿದೆಯೆಂದು, ಮೌರ್ಯ ಚಾಟಿ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?