
ಬೆಂಗಳೂರು: ಸುಹಾನಾ ಸಯ್ಯದ್... ಕನ್ನಡದ ಖಾಸಗಿ ಚಾನೆಲ್ ವೊಂದರ ರಿಯಾಲಿಟಿ ಶೋನಲ್ಲಿ, ಹಿಂದೂ ದೇವರ ಹಾಡು ಹಾಡಿದ್ದಕ್ಕೆ ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿತ್ತು. ಇದೀಗ ರಾಜ್ಯದಲ್ಲಿ ಸುಹಾನಾ ಎದುರಿಸುತ್ತಿರುವ ಸಮಸ್ಯೆಯನ್ನೇ ಅಸ್ಸಾಂನ ಉದಯನ್ಮುಖ ಗಾಯಕಿ ನಹೀದ್ ಅಫ್ರಿನ್ ಎದುರಿಸುತ್ತಿದ್ದಾಳೆ.
ಸಾರ್ವಜನಿಕವಾಗಿ ಹಾಡದಂತೆ ಫತ್ವಾ
ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಹಾಡುಗಳನ್ನು ಹಾಡುತ್ತಿದ್ದ 16 ವರ್ಷದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. ಖಾಸಗಿ ಟಿವಿ ಚಾನೆಲ್'ವೊಂದು 2015ರಲ್ಲಿ ನಡೆಸಿದ್ದ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿದ್ದ ನಹೀದ್ ಅಫ್ರಿನ್, ಇತ್ತೀಚೆಗಷ್ಟೆ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಉಗ್ರವಾದದ ವಿರುದ್ಧದ ಗೀತೆಗಳನ್ನು ಹಾಡಿದ್ದರು. ಇದರಿಂದ ಕೆಂಡಾಮಂಡಲವಾಗಿರುವ ಅಸ್ಸಾಮಿನ 46 ಮೌಲ್ವಿಗಳು, ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮ ನೀಡದಂತೆ ಫತ್ವಾ ಹೊರಡಿಸಿದ್ದಾರೆ.
ಅಸ್ಸಾಂನ ಉದಲಿ ಸೋನಾಯ್ ಬೀಬಿ ಕಾಲೇಜಿನಲ್ಲಿ ಮಾರ್ಚ್ 25ರಂದು ನಹೀದ್ ಗಾಯನ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮ ಶರಿಯಾದ ಕಟ್ಟುಪಾಡುಗಳಿಗೆ ವಿರುದ್ಧವಾದುದು ಎಂಬ ಕಾರಣಕ್ಕೆ ಆ ಕಾರ್ಯಕ್ರಮದಲ್ಲಿ ಹಾಡದಂತೆ ಆಪ್ರೀನ್'ಗೆ ಫತ್ವಾ ಹೊರಡಿಸಲಾಗಿದೆ.
ಆದ್ರೆ ಫತ್ವಾಕ್ಕೆ ಹೆದರದ ನಹೀದ್ ಅಫ್ರಿನ್, ತಾನು ಕೊನೆಯುಸಿರಿರುವವರೆಗೆ ಹಾಡು ಹಾಡಿಯೇ ತೀರುತ್ತೇನೆ ಎಂದು ಪಣತೊಟ್ಟಿದ್ದಾಳೆ. ಇನ್ನೊಂದೆಡೆ, ಬೆದರಿಕೆಗಳಿಂದ ಹಿಂಜರಿಯದೆ ಕಾರ್ಯಕ್ರಮಕ್ಕೆ ಹೋಗುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೊನೊವಾಲ್ ಧೈರ್ಯ ಹೇಳಿದ್ದಾರೆ.
- ಶ್ರೀಕಂಠ ಎಚ್.ಡಿ.ಕೋಟೆ, ನ್ಯೂಸ್ ಬ್ಯುರೋ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.