
ನವದೆಹಲಿ(ನ.06): ಪನಾಮಾ ಪೇಪರ್ಸ್ ರೀತಿ ಮತ್ತೊಂದು ಹಗರಣವನ್ನು ಪ್ಯಾರಡೈಸ್ ಪೇಪರ್ಸ್ ಹೆಸರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಬಯಲು ಮಾಡಿದ್ದು ಇದರಲ್ಲಿ ಭಾರತದ 714 ಮಂದಿ ಕಾಳಧನಿಕರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಈ ಪಟ್ಟಿಯಲ್ಲಿ ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರ ಹೆಸರು ಇದೆ ಎಂದು ಹೇಳಲಾಗಿದೆ. ಜಯಂತ್ ಸಿನ್ಹ ಅವರು ಅವರು 2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮುನ್ನ ಜಯಂತ್ ಸಿನ್ಹಾ ಅವರು, ಒಮಿಡ್ಯಾರ್ ನೆಟ್‌ವರ್ಕ್ ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಒಮಿ ಡ್ಯಾಯರ್ ಅಮೆರಿಕ ಡಿ.ಲೈಟ್ ಡಿಸೈನ್ ಕಂಪನಿಯಲ್ಲಿ ಹೂಡಿಕೆ ಮಾಡಿತ್ತು. ಈ ವಿಷಯವನ್ನು ಜಯಂತ್ 2014ರ ಚುನಾವಣೆಯ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.
ಕಾಳಧನಿಕರ ವಿರುದ್ಧ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಸಂಘಟನೆ (ಐಸಿಐಜೆ) ಸೋಮವಾರ ಮತ್ತಷ್ಟು ಜಾಗತಿಕ ಕಾಳಧನಿಕರ ಪಟ್ಟಿಬಿಡುಗಡೆ ಮಾಡಿದೆ. ಭಾನುವಾರ ತಡರಾತ್ರಿ ಬಿಡುಗಡೆ ಮಾಡಲಾದ ಈ ಪಟ್ಟಿಯಲ್ಲಿ ಭಾನುವಾರ ತಡರಾತ್ರಿ ಪ್ಯಾರಾಡೈಸ್ ತನಿಖಾ ವರದಿಯಲ್ಲಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು ಹೆಸರು ಉಲ್ಲೇಖವಾಗಿದೆ. ಅವರು 2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮುನ್ನ ಜಯಂತ್ ಸಿನ್ಹಾ ಅವರು, ಒಮಿಡ್ಯಾರ್ ನೆಟ್‌ವರ್ಕ್ ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಒಮಿಡ್ಯಾರ್ ಕಂಪನಿಯು ಕೆರಿಬಿಯನ್ ಸಮುದ್ರದ ಕೇಮನ್ ದ್ವೀಪ ಪ್ರದೇಶದ ಅಂಗ ಸಂಸ್ಥೆಯಾದ ಅಮೆರಿಕದ ಡಿ.ಲೈಟ್ ಡಿಸೈನ್ ಎಂಬ ಕಂಪನಿಯಲ್ಲಿ ಬಂಡವಾಳ ಹೂಡಿಕೆ ಮಾಡಿತ್ತು. ಜಯಂತ್ ಸಿನ್ಹಾ ಅವರು ಈ ಕಂಪನಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಹೊರತಾಗಿಯೂ,ಅವರು ಚುನಾವಣೆ ಸಂದರ್ಭದಲ್ಲಿ ಈ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಅಲ್ಲದೆ, ಚುನಾಯಿತ ಪ್ರತಿನಿಧಿಯಾದ ಬಳಿಕವೂ ಈ ಬಗ್ಗೆ ಪ್ರಧಾನಿ ಕಚೇರಿಗಾಗಲಿ ಅಥವಾ ಲೋಕಸಭಾ ಕಾರ್ಯದರ್ಶಿಗಳಿಗೆ ಸಲ್ಲಿಕೆ ಮಾಡಿಲ್ಲ ಎಂಬುದು ದೃಢಪಟ್ಟಿದೆ.
2006ರಲ್ಲಿ ಕ್ಯಾಲಿಫೋರ್ನಿಯಾ, ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಡಿ.ಲೈಟ್ ಡಿಸೈನ್ ಇಂಕ್ ಕಂಪನಿ ಪ್ರಾರಂಭವಾಗಿತ್ತು. ಅಲ್ಲದೆ, ಇದೇ ಹೆಸರಿನಲ್ಲಿ ಕೇಮನ್ ದ್ವೀಪದಲ್ಲೂ ಈ ಕಂಪನಿ ತನ್ನ ವಹಿವಾಟನ್ನು ಆರಂಭಿಸಿತ್ತು. ಡಿ.ಲೈಟ್ ಡಿಸೈನ್ ಕಂಪನಿಯಲ್ಲಿ ಬಂಡವಾಳ ಹೂಡಿದ ಒಮಿಡ್ಯಾರ್ ಕಂಪನಿಗೆ 2009ರ ಸೆಪ್ಟೆಂಬರ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಆರಂಭಿಸಿದ ಸಿನ್ಹಾ ಅವರು, 2013ರ ಡಿಸೆಂಬರ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಈ ನಡುವೆ 2012ರ ಡಿ.31ರಂದು ಕೇಮನ್ ದ್ವೀಪಗಳಲ್ಲಿರುವ ತನ್ನ ಅಂಗಸಂಸ್ಥೆಗಳಿಂದ ನೆದರ್‌ಲ್ಯಾಂಡ್ ಸೇರಿದಂತೆ ಇತರ ರಾಷ್ಟ್ರಗಳಿಂದ ಡಿ.ಲೈಟ್ ಡಿಸೈನ್ ಸುಮಾರು 20 ಕೋಟಿ ರು. ಸಾಲ ಪಡೆದಿತ್ತು. ಈ ವೇಳೆ ಸಿನ್ಹಾ ಅವರು ಡಿ.ಲೈಟ್ ಡಿಸೈನ್ ನಿರ್ದೇಶಕರಾಗಿದ್ದರು. ಈ ಪಟ್ಟಿಯಲ್ಲಿ 714 ಭಾರತೀಯರೂ ಇದ್ದಾರೆ. ಜೊತೆಗೆ ಹಲವು ಕಂಪನಿಗಳು ಇವೆ. ಇವರೆಲ್ಲರ ಹೆಸರನ್ನು ಸರಣಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.