ಯುದ್ಧ ನಡೆದರೆ ಭಾರತದಲ್ಲಿ ಚೀನಾ ಕಂಪನಿಗಳ ಆಸ್ತಿ ಜಪ್ತಿ..?

By Suvarna Web DeskFirst Published Jan 23, 2018, 8:08 AM IST
Highlights

ಶತ್ರು ಆಸ್ತಿ ಕಾಯ್ದೆಯ ತಿದ್ದುಪಡಿ ಬಳಿಕ ಮೋದಿ ಸರ್ಕಾರ ವಿವಿಧ ದೇಶಗಳ ಪೌರತ್ವ ಪಡೆದುಕೊಂಡ 9,400ಕ್ಕೂ ಹೆಚ್ಚು ಜನರ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದು, ಚೀನಾ ಆತಂಕಕ್ಕೆ ಕಾರಣವಾಗಿದೆ. ಕಾರಣ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಚೀನಾದ ಹೂಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ನವದೆಹಲಿ: ಶತ್ರು ಆಸ್ತಿ ಕಾಯ್ದೆಯ ತಿದ್ದುಪಡಿ ಬಳಿಕ ಮೋದಿ ಸರ್ಕಾರ ವಿವಿಧ ದೇಶಗಳ ಪೌರತ್ವ ಪಡೆದುಕೊಂಡ 9,400ಕ್ಕೂ ಹೆಚ್ಚು ಜನರ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದು, ಚೀನಾ ಆತಂಕಕ್ಕೆ ಕಾರಣವಾಗಿದೆ. ಕಾರಣ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಚೀನಾದ ಹೂಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಒಂದು ವೇಳೆ ಭಾರತ ಮತ್ತು ಚೀನಾ ಮಧ್ಯೆ ಸೇನಾ ಸಂಘರ್ಷ ಏರ್ಪಟ್ಟರೆ, ಭಾರತದಲ್ಲಿನ ತಮ್ಮ ಕಂಪನಿಗಳ ಆಸ್ತಿಯನ್ನು ಭಾರತ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಆತಂಕ ಚೀನಾ ಕಂಪನಿಗಳನ್ನು ಆವರಿಸಿದೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನವೊಂದರಲ್ಲಿ ಬರೆಯಲಾಗಿದೆ.

click me!