ಸಯೀದ್ ನಿಷೇಧ - ವಿಶ್ವಸಂಸ್ಥೆ ಪರಿಶೀಲನೆಗೆ ಅವಕಾಶವಿಲ್ಲ : ಪಾಕ್

By Suvarna Web DeskFirst Published Jan 23, 2018, 7:59 AM IST
Highlights

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಪರಿವೀಕ್ಷಣಾ ತಂಡ ಗುರುವಾರ ಮತ್ತು ಶುಕ್ರವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಆದರೆ ಈ ಸಂದರ್ಭ ಮುಂಬೈ ಉಗ್ರ ದಾಳಿ ರೂವಾರಿ ಹಫೀಜ್ ಸಯೀದ್ ಅಥವಾ ಆತನ ಸಂಸ್ಥೆಯೊಂದಿಗೆ ನೇರ ಸಂಪರ್ಕಕ್ಕೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲ.

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಪರಿವೀಕ್ಷಣಾ ತಂಡ ಗುರುವಾರ ಮತ್ತು ಶುಕ್ರವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಆದರೆ ಈ ಸಂದರ್ಭ ಮುಂಬೈ ಉಗ್ರ ದಾಳಿ ರೂವಾರಿ ಹಫೀಜ್ ಸಯೀದ್ ಅಥವಾ ಆತನ ಸಂಸ್ಥೆಯೊಂದಿಗೆ ನೇರ ಸಂಪರ್ಕಕ್ಕೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲ.

ಇದು ಉಗ್ರ ಸಂಘಟನೆಗಳ ಮೇಲೆ ಪಾಕಿಸ್ತಾನ ಹೇರಿರುವ ನಿರ್ಬಂಧದ ಕುರಿತು ಸಾಕಷ್ಟು ಅನುಮಾನ ಮೂಡಲು ಕಾರಣವಾಗಿದೆ. ಸಯೀದ್ ಮತ್ತು ಆತನ ಸಂಘಟನೆ ಜಮಾತ್-ಉದ್-ದಾವಾ (ಜೆಯುಡಿ) ವಿರುದ್ಧ 2008 ರಲ್ಲಿ ವಿಶ್ವಸಂಸ್ಥೆ ನಿಷೇಧ ಹೇರಿದೆ.

click me!