
ಅಹ್ಮದಾಬಾದ್: ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘1+1=11’ ಮಂತ್ರ ಪಠಿಸಿದ್ದಾರೆ.
ಚುನಾವಣಾ ಪ್ರಚಾರದ ಕೊನೆಯ ದಿವಸ ಮಾತನಾಡಿದ ಮೋದಿ, ‘ಗುಜರಾತ್ ಸರ್ಕಾರ ಹಾಗೂ ಭಾರತ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದರೆ 1+1=2 ಆಗುವುದಿಲ್ಲ ಬದಲಾಗಿ, ‘1+1=11’ ಆಗಲಿದೆ. ಅಂದರೆ ಈಗಾಗಲೇ ಅಭಿವೃದ್ಧಿಗೊಂಡಿರುವ ಗುಜರಾತ್ ಇನ್ನೊಂದು ಎತ್ತರಕ್ಕೆ ತಲುಪಲಿದೆ’ ಎಂದು ಹೇಳಿದರು.
‘ನಾನು ಗುಜರಾತ್‌ನಲ್ಲಿ ಈ ಚುನಾವಣಾ ಪ್ರಚಾರದಲ್ಲಿ ಸಂಚರಿಸುವ ವೇಳೆ 40 ವರ್ಷದ ಸಾರ್ವಜನಿಕ ಜೀವನದಲ್ಲಿ ಸಿಕ್ಕ ಪ್ರೀತಿಗಿಂತ ಈಗ ಹೆಚ್ಚು ಪ್ರೀತಿ ಸಿಕ್ಕಿದೆ. ಇದು ನನಗೆ ಭಾರತವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಬಲ ನೀಡುತ್ತದೆ. ನಾನು ನನ್ನ ಜೀವನವನ್ನೇ ಗುಜರಾತ್ ಹಾಗೂ ಭಾರತಕ್ಕೆ ಮುಡಿಪಿಟ್ಟಿರುವೆ. ಜನರು ಡಿ.14ರಂದು ಭಾರಿ ಪ್ರಮಾಣದಲ್ಲಿ ಮತದಾನ ಮಾಡಬೇಕು’ ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.