ವೈರಲ್ ಆಯ್ತು ’ಮೋದಿ ಚೋರ್’ ಪೋಸ್ಟರ್ !

By Web DeskFirst Published Oct 11, 2018, 12:18 PM IST
Highlights

ಮೋದಿ ಚೋರ್ ಎಂದು ಯುವಕರಿಬ್ಬರು ಪ್ಲಕಾರ್ಡ್ ಹಿಡಿದಿರುವ ಫೋಟೋ ವೈರಲ್ |  ಏನಿದರ ಅಸಲಿಯತ್ತು? ಇಲ್ಲಿದೆ  ಮಾಹಿತಿ. 

ನವದೆಹಲಿ (ಅ. 11): ಇಬ್ಬರು ಯುವಕರು ‘ಪ್ರಧಾನಿ ನರೇಂದ್ರ ಮೋದಿ ಚೋರ್ (ಕಳ್ಳ)’ ಎಂದು ಬರೆದಿರುವ ಪೋಸ್ಟರ್ ಹಿಡಿದು ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಬಿಜೆಪಿ ಬಗಾವ್ ದೇಶ್ ಬಚಾವ್’(ಬಿಜೆಪಿ ತೊಲಗಿಸಿ, ದೇಶ ಉಳಿಸಿ) ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಸದ್ಯ ಈ ಫೋಟೋ 10,000 ಬಾರಿ ಶೇರ್ ಆಗಿದೆ.

ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಇದು ವೈರಲ್ ಆಗಿದೆ. ಆದರೆ ನಿಜಕ್ಕೂ ಇಬ್ಬರು ಯುವಕರು ನರೇಂದ್ರ ಮೋದಿ ಕಳ್ಳ ಎಂದು ಬರೆದಿರುವ ಫಲಕ ಹಿಡಿದಿದ್ದರೇ ಎಂದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.

ಏಕೆಂದರೆ ಇದು ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ. ಇಬ್ಬರು ಯುವಕರು ಹಿಡಿದಿರುವ ಪೋಸ್ಟರ್ ಮೇಲೆ ‘ಮೋದಿ ಕಳ್ಳ’ ಎಂದು ಬರೆದಿಲ್ಲ. ವಾಸ್ತವವಾಗಿ 2012 ರಲ್ಲಿ ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೋಸ್ಟರ್ ಹಿಡಿದು ನಿಂತು ಪ್ರತಿಭಟಿಸುತ್ತಿದ್ದ ಯುವಕರ ಫೋಟೋ ಅದು.

ಮೂಲ ಫೋಟೋದಲ್ಲಿ ಯುವಕರು ಹಿಡಿದುಕೊಂಡಿದ್ದ ಫಲಕದಲ್ಲಿ ‘ಶಿ ವನ್, ಶಿ ಈಸ್ ಸರ್ವೈವರ್ ಆ್ಯನ್ ಇನ್‌ಸ್ಪಿರೇಶನ್’ ಎಂದು ಬರೆಯಲಾ ಗಿತ್ತು. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಇನ್ನಷ್ಟು ಪರಿಶೀಲಿಸಿದಾಗ
ಈ ಫೋಟೋವನ್ನು 2013 ಸೆ.13 ರಂದು ನಿರ್ಭಯಾ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕ್ಲಿಕ್ಕಿಸಲಾಗಿದೆ ಎಂಬುದು ಪತ್ತೆಯಾಗಿದೆ. 

-ವೈರಲ್ ಚೆಕ್ 

click me!