
ಕಾರವಾರ, ಅ,.11: ಹಂಪಿಯ ವಿಜಯ ವಿಠ್ಠಲ ದೇಗುಲದ ಸನ್ನಿಧಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ರಥವನ್ನು ಈಗ ಕಾರವಾರದಲ್ಲಿ ಕಾಣಬಹುದು. ಇದು ಅಂತಿಂಥ ರಥವಲ್ಲ. ಚಿನ್ನದಲ್ಲಿ ಮಾಡಿದ ಚಿತ್ತಾಕರ್ಷಕ ರಥ.
ಹೌದು.. ಇಲ್ಲಿನ ಕಡವಾಡದ ಅಕ್ಕಸಾಲಿಗ ಮಿಲಿಂದ ಅಣ್ವೇಕರ್ ಪ್ರತಿವರ್ಷವೂ ಒಂದಿಲ್ಲೊಂದು ಕಲಾಕೃತಿ ಸೃಷ್ಟಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈ ಬಾರಿ .36 ಸಾವಿರ ಮೌಲ್ಯದ 12 ಗ್ರಾಂ ಬಂಗಾರದಿಂದ 1 ಇಂಚು ಎತ್ತರದ ಹಂಪಿ ರಥವನ್ನು ತಯಾರಿಸಿದ್ದಾರೆ.
ಮುಂಭಾಗದಲ್ಲಿ ರಥದ ಒಳಗೆ ಆಸೀನನಾದ ವಿರೂಪಾಕ್ಷ, ಸುತ್ತಲೂ ಕಂಬಗಳು, ರಥಕ್ಕೆ ಚಾವಣಿ, 4 ಚಕ್ರದ ರಥವನ್ನು ಎಳೆಯುತ್ತಿರುವ 2 ಆನೆಗಳನ್ನು ಕಾಣಬಹುದು. ರಥದಲ್ಲಿನ ಕಂಬ, ಚಾವಣಿ, ಆನೆಗಳ ಮೇಲೆ ಇರುವ ಸೂಕ್ಷ್ಮ ಕೆತ್ತನೆಗಳು ಚಿತ್ತಾಕರ್ಷಕವಾಗಿದೆ. ಬಿಡುವಿನ ವೇಳೆ ರಥ ತಯಾರಿಕೆ ಮಾಡುತ್ತಿದ್ದು, 1 ತಿಂಗಳಲ್ಲಿ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.