2018ರ ಚುನಾವಣೆ ಗೆಲ್ಲಲು ಮೋದಿ, ಶಾ ಸಮ್ಮುಖದಲ್ಲಿ ರಣತಂತ್ರ: ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗುತ್ತೆ?

Published : Mar 31, 2017, 02:46 AM ISTUpdated : Apr 11, 2018, 01:00 PM IST
2018ರ ಚುನಾವಣೆ ಗೆಲ್ಲಲು ಮೋದಿ, ಶಾ ಸಮ್ಮುಖದಲ್ಲಿ ರಣತಂತ್ರ: ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗುತ್ತೆ?

ಸಾರಾಂಶ

ಪಂಚರಾಜ್ಯ ಚುನಾವಣೆ ಬಳಿಕ  ಬಿಜೆಪಿ ಕಣ್ಣು ರಾಜ್ಯದ ಮೇಲೆ ಬಿದ್ದಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದ ಬಳಿಕ ಅಧಿಕಾರಕ್ಕೆ ಏರಲು ಕೇಸರಿ ಬ್ರಿಗೇಡ್​ ಈಗಲೇ ತಯಾರಿ ನಡೆಸಿದೆ. ಹೀಗಾಗಿ 2018ರ ಅಸೆಂಬ್ಲಿ ಎಲೆಕ್ಷನ್ ಗೆಲ್ಲಲು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು ರಣತಂತ್ರ ರಚಿಸಲಿದ್ದಾರೆ.

ಬೆಂಗಳೂರು(ಮಾ.31): ಪಂಚರಾಜ್ಯ ಚುನಾವಣೆ ಬಳಿಕ  ಬಿಜೆಪಿ ಕಣ್ಣು ರಾಜ್ಯದ ಮೇಲೆ ಬಿದ್ದಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದ ಬಳಿಕ ಅಧಿಕಾರಕ್ಕೆ ಏರಲು ಕೇಸರಿ ಬ್ರಿಗೇಡ್​ ಈಗಲೇ ತಯಾರಿ ನಡೆಸಿದೆ. ಹೀಗಾಗಿ 2018ರ ಅಸೆಂಬ್ಲಿ ಎಲೆಕ್ಷನ್ ಗೆಲ್ಲಲು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು ರಣತಂತ್ರ ರಚಿಸಲಿದ್ದಾರೆ.

ಸಂಸದರ ಜೊತೆ ಮೋದಿ ಮತ್ತು ಅಮಿತ್ ಶಾ ಸಂವಾದ  

ಇಂದು ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಪ್ರಧಾನಿ ಅಧಿಕೃತ ನಿವಾಸ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಬಿಜೆಪಿ ಸಂಸದರ ಸಭೆ ನಡೆಯಲಿದೆ. ಕರ್ನಾಟಕ ಬಿಜೆಪಿ ಸಂಸದರು ಹಾಗೂ  ಜಾರ್ಖಂಡ್, ಒಡಿಶಾ, ತಮಿಳುನಾಡು ಮತ್ತು ತೆಲಂಗಾಣ ಸಂಸದರನ್ನ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಉಪಹಾರದೊಂದಿಗೆ ಸಂಸದರ ಜೊತೆ ಸಂವಾದ ನಡೆಸಲಿದ್ದಾರೆ.

ಸಭೆಗೆ ಹಾಜರಾಗುತ್ತಿಲ್ಲ ರಾಜ್ಯದ ಮೂವರು ಸಂಸದರು

ಇಂದಿನ ಬಿಜೆಪಿ ಸಂಸದರ ಉಪಹಾರ ಕೂಟದಲ್ಲಿ ರಾಜ್ಯದ ಮೂವರು ಸಂಸದರು ಭಾಗವಹಿಸುತ್ತಿಲ್ಲ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಪ್ರಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಶ್ರೀರಾಮುಲು ಅವರು ಮೋದಿ-ಶಾ  ಮೀಟಿಂಗ್​ನಲ್ಲಿ ಭಾಗವಹಿಸುತ್ತಿಲ್ಲ.

ಮಹದಾಯಿ ನದಿ ನೀರು, 2018ರ ಚುನಾವಣೆ ಚರ್ಚೆ: ಸಂಸದರಿಗೆ ಎಂಎಲ್​ಎ ಟಿಕೆಟ್ ನಿರಾಕರಣೆ ಸೂಚನೆ?

ಕಳೆದ ಹತ್ತು ದಿನಗಳಿಂದ ಪ್ರಧಾನಿ ಮೋದಿ ಬಹುತೇಕ ರಾಜ್ಯಗಳ ಬಿಜೆಪಿ ಸಂಸದರೊಂದಿಗೆ ಚರ್ಚೆ ನಡೆಸಿ ವಾಸ್ತವತೆ ಪಡೆಯುವ ಜೊತೆಗೆ 2018ರ ಚುನಾವಣೆ ಸಂಬಂಧ ಅಭಿಪ್ರಾಯ ಕೇಳುತ್ತಿದ್ದಾರೆ. ಜತೆಗೆ 2019 ರ ಲೋಕಸಭೆ ತಯಾರಿ ಬಗ್ಗೆಯೂ ಕೆಲ ಟಿಪ್ಸ್ ಕೂಡ ನೀಡುತ್ತಿದ್ದಾರೆ . ಇಂದಿನ ಸಭೆಯಲ್ಲಿ 2018ರ ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಸಂಸದರಿಗೆ ಮೋದಿ ಸ್ಪಷ್ಟವಾಗಿ ಇಲ್ಲ ಅಂತ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಪ್ರಧಾನಿ ಎದುರು ಬಹಿರಂಗವಾಗಿ ಸಂಸದರು ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸುತ್ತಾರಾ ಎನ್ನುವ ಕುತೂಹಲವಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ