
ನವದೆಹಲಿ(ಮಾ.31): ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಬುಧವಾರದಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇದರಂತೆ 2017ರ ಏಪ್ರಿಲ್ 1 ರಿಂದ ಬಿಎಸ್ III ವಾಹನಗಳ ಮಾರಾಟ ಹಾಗೂ ನೋಂದಣಿ ರದ್ದಾಗಲಿದೆ. ಕೋರ್ಟ್ ಈ ಆದೇಶದಿಂದ ಬೆಚ್ಚಿ ಬಿದ್ದಿರುವ ಹೀರೋ, HMSI, ಬಜಾಜ್, ಸುಜುಕಿ ಕಂಪೆನಿಗಳು ದಾಸ್ತಾನಿರುವ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಲು ಭಾರಿ ಆಫರ್ ನೀಡಿವೆ. ಇವರ ಈ ಭರ್ಜರಿ ಆಫರ್'ನಿಂದ ಶೋ ರೂಂಗಳಲ್ಲೇ ಟ್ರಾಫಿಕ್ ಜಾಮ್ ಆಗಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ಸ್ ಮ್ಯಾನುಫ್ಯಾಕ್ಚರ್ಸ್ (SIAM) ಪ್ರಕಾರ ಭಾರತದಲ್ಲಿ 8.2 ಲಕ್ಷ ಬಿ.ಎಸ್-III ಮಾದರಿಯ ವಾಹನಗಳ ದಾಸ್ತಾನು ಇದೆ. ಅವುಗಳಲ್ಲಿ 6 ಲಕ್ಷಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 12 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕಂಪೆನಿಗಳಿಗೂ ಭಾರೀ ನಷ್ಟವಾಗಲಿದೆ. ಇದರಿಂದ ಕಂಗೆಟ್ಟಿರುವ ಕಂಪೆನಿಗಳು ಬೇರೆ ವಿಧಿ ಇಲ್ಲದೆ ಗ್ರಾಹಕರಿಗೆ ಭಾರೀ ಕಡಿಮೆ ದರದಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಹೀರೋ, HMSI, ಬಜಾಜ್, ಸುಜುಕಿಯ ಬಿಎಸ್ III ಮಾದರಿಯ ದ್ವಿಚಕ್ರ ವಾಹನವೊಂದರ ಮೇಲೆ ಸುಮಾರು 22,000 ರೂಪಾಯಿಯಷ್ಟು ರಿಯಾಯಿತಿ ನೀಡಿವೆ. ಅತ್ತ ಸಾಧ್ಯವಾದಷ್ಟು ಬೇಗ ಈ ದಾಸ್ತಾನನ್ನು ಖಾಲಿ ಮಾಡಲು ಕಂಪೆನಿಗಳು ಹರ ಸಾಹಸ ಪಡುತ್ತಿದ್ದರೆ ಇತ್ತ ಗ್ರಾಹಕರು ಸಿಕ್ಕಿದ್ದೇ ಅವಕಾಶ ಎಂಬಂತೆ ವಾಹನಗಳನ್ನು ಖರೀದಿಸಲು ಶೋ ರೂಂಗಳಿಗೆ ಮುಗಿ ಬಿದ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.