ಈ ದೇಶದ ಹೆಸರು ಇಂಡಿಯಾವೇ ಹೊರತು ಹಿಂಡಿಯಾ ಅಲ್ಲ ಎಂದ ಸ್ಟಾಲಿನ್| ಹಿಂದಿ ದಿವಸ್ ದಿನದಂದು ಉತ್ತರ, ದಕ್ಷಿಣ ನಡುವೆ ಭಾಷಾ ವಾಕ್ಸಮರ| ಹಿಂದಿ ರಾಷ್ಟ್ರಭಾಷೆಯಾಗಬೇಕು ಎಂದು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ| ಗೃಹ ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್| ಕೇಂದ್ರ ಸರ್ಕಾರ ಒಂದು ವೇಳೆ ಹಿಂದಿ ಹೇರಿಕೆಗೆ ಮುಂದಾದರೆ ಉಗ್ರ ಹೋರಾಟ ಎಂದು ಎಚ್ಚರಿಸಿದ ಸ್ಟಾಲಿನ್|
ಚೆನ್ನೈ(ಸೆ.14): ಹಿಂದಿ ಭಾಷೆ ದೇಶದ ರಾಷ್ಟ್ರ ಭಾಷೆಯಾಗಬೇಕು ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ.
ಹಿಂದಿ ದಿವಸ್ ಅಂಗವಾಗಿ ಟ್ವೀಟ್ ಮಾಡಿದ್ದ ಅಮಿತ್ ಶಾ, ಭಾರತ ಬಹುಭಾಷೆಗಳ ತವರೂರಾಗಿದ್ದರೂ, ದೇಶವನ್ನು ಬೆಸೆಯುವ ನಿಟ್ಟಿನಲ್ಲಿ ಹಿಂದಿ ರಾಷ್ಟ್ರ ಭಾಷೆಯನ್ನಾಗಿ ಘೋಷಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
undefined
ಅಮಿತ್ ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸ್ಟಾಲಿನ್, ಭಾರತ ಇಂಡಿಯಾವೇ ಹೊರತು ಹಿಂಡಿಯಾ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಶಾ ಹೇಳಿಕೆ ದೇಶದಲ್ಲಿ ಮತ್ತೊಂದು ಭಾಷಾ ಯುದ್ಧಕ್ಕೆ ಅನುವು ಮಾಡಿಕೊಡಲಿದೆ ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ಒಂದು ವೇಳೆ ಹಿಂದಿ ಹೇರಿಕೆಗೆ ಮುಂದಾದರೆ ಉಗ್ರ ಹೋರಾಟಕ್ಕೆ ತಮಿಳುನಾಡು ಸಜ್ಜಾಗಲಿದೆ ಎಂದು ಎಂ.ಕೆ. ಸ್ಟಾಲಿನ್ ನೇರ ಎಚ್ಚರಿಕೆ ನೀಡಿದ್ದಾರೆ.