ಮಿಜೋರಂ ಕೆಳಮನೆಯಲ್ಲಿ ಮಹಿಳೆಯರೇ ಇಲ್ಲ!

By Web DeskFirst Published Dec 14, 2018, 10:04 AM IST
Highlights

ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದ ಎಲ್ಲಾ 15 ಮಹಿಳಾ ಅಭ್ಯರ್ಥಿಗಳೂ ಸೋತಿದ್ದಾರೆ. ಹೀಗಾಗಿ ಮಿಜೋರಂ ವಿಧಾನಸಭೆ, ಮಹಿಳೆಯರ ರಹಿತವಾಗಿರಲಿದೆ.

ಐಜ್ವಾಲ್‌[ಡಿ.14]: ಇತ್ತೀಚಿನ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದ ಎಲ್ಲಾ 15 ಮಹಿಳಾ ಅಭ್ಯರ್ಥಿಗಳೂ ಸೋತಿದ್ದಾರೆ. ಹೀಗಾಗಿ ಈ ಬಾರಿಯ ಮಿಜೋರಂ ವಿಧಾನಸಭೆ, ಮಹಿಳೆಯರ ರಹಿತವಾಗಿರಲಿದೆ.

ಕಳೆದ ಬಾರಿಯೂ ರಾಜ್ಯ ವಿಧಾನಸಭೆಗೆ ಮಹಿಳೆಯರು ಆಯ್ಕೆಯಾಗಿರಲಿಲ್ಲ. ಮಿಜೋ ಸಮಾಜದಲ್ಲಿರುವ ಪುರುಷಪ್ರಧಾನ ವ್ಯವಸ್ಥೆಯೇ ಈ ಬಾರಿಯೂ ಯಾವುದೇ ಮಹಿಳಾ ಸದಸ್ಯರು ಆಯ್ಕೆಯಾಗದೇ ಇರುವುದಕ್ಕೆ ಕಾರಣ ಎನ್ನಲಾಗಿದೆ. 40 ಸದಸ್ಯಬಲದ ವಿಧಾನಸಭೆಯಲ್ಲಿ 26 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಮಿಜೋರಾಂ ನ್ಯಾಷನಲ್‌ ಫ್ರಾಂಟ್‌ ಯಾವೊಬ್ಬ ಮಹಿಳಾ ಅಭ್ಯರ್ಥಿಯನ್ನೂ ಕಣಕ್ಕಿಳಿಸಿರಲಿಲ್ಲ.

ಬಿಜೆಪಿಯಿಂದ - ಕಾಂಗ್ರೆಸ್‌ ಎರಡೂ ಪಕ್ಷಗಳೂ ತಲಾ ಓರ್ವ ಮಹಿಳಾ ಅಭ್ಯರ್ಥಿಯನ್ನು ಪ್ರೋತ್ಸಾಹಿಸಿದ್ದರು. ಜೊರಾಮ್ತಾರ್‌ ಎಂಬ ಧಾರ್ಮಿಕ ಮೂಲದ ಪಕ್ಷವೊಂದು ಐದು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿತ್ತು.

ಮಿಜೋರಾಂನಲ್ಲಿ ಕನಿಷ್ಠ ಮತಗಳ ಅಂತರ 3, ಗರಿಷ್ಠ ಅಂತರ 2720

ಮಂಗಳವಾರ ಪ್ರಕಟಗೊಂಡ ಮಿಜೋರಂ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಅತ್ಯಂತ ಕಡಿಮೆ ಅಂತರದ ಜಯ ಕೇವಲ 3 ಮತಗಳಿಂದ ಸಾಧ್ಯವಾಗಿದ್ದರೆ, ಗರಿಷ್ಠ ಮತಗಳ ಅಂತರದ ಜಯ 2720 ಮತಗಳದ್ದು. ಮಿಜೋರಾಂ ನ್ಯಾಷನಲ್‌ ಫ್ರಂಟ್‌ನ ಲಾಲ್‌ಚಾಂದಮಾ ರಾಲ್ಟೆಕೇವಲ 3 ಮತಗಳ ಕನಿಷ್ಠ ಅಂತರದಿಂದ ಕಾಂಗ್ರೆಸ್‌ನ ಆರ್‌ ಎಲ್‌ ಪಯಾನ್‌ಮಾವಿಯಾರ ವಿರುದ್ಧ ಜಯ ಸಾಧಿಸಿದ್ದಾರೆ.

ಈ ಸಂದರ್ಭ ಕಾಂಗ್ರೆಸ್‌ ಅಭ್ಯರ್ಥಿ ಮನವಿಯಂತೆ ಮರು ಮತ ಎಣಿಕೆ ನಡೆಸಲಾಯ್ತು. ಆಗಲೂ ಕೇವಲ 3 ಮತಗಳ ಅಂತರ ಮಾತ್ರ ಕಂಡುಬಂದಿತ್ತು. ಇನ್ನು ಎಂಎನ್‌ಎಫ್‌ ನ ಲಾಲ್‌ರುಥ್‌ಕಿಮಾ 2720 ಮತಗಳ ಗರಿಷ್ಠ ಅಂತರದೊಂದಿಗೆ ಐಜ್ವಾಲ್‌ ಪಶ್ಚಿಮ-2 ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಲಾಲ್ಮಾಸಾವ್ಮಾ ಅವರನ್ನು ಸೋಲಿಸಿದರು.

 

click me!