
ನವದೆಹಲಿ[ಡಿ.14]: 2019ರ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಮುಂದಿನ ವರ್ಷದ ಜನವರಿ 11-12ರಂದು ಎರಡು ದಿನಗಳ ರಾಷ್ಟ್ರೀಯ ಮಂಡಳಿ ಸಭೆ ಸೇರಿದಂತೆ ರಾಷ್ಟ್ರಾದಾದ್ಯಂತ ಪಕ್ಷದ ವಿವಿಧ ಘಟಕಗಳ ಜೊತೆ ಬಿಜೆಪಿ ಸರಣಿ ಸಭೆ ನಡೆಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಗುರುವಾರ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಅವರು, ‘ರಾಷ್ಟ್ರಾದ್ಯಂತ ಬಿಜೆಪಿ ವಿವಿಧ ಸಭೆಗಳನ್ನು ಹಮ್ಮಿಕೊಳ್ಳಲಿದೆ. ಅವುಗಳಲ್ಲಿ ಜ.19-20ರಂದು ನಾಗ್ಪುರದಲ್ಲಿ ನಿಗದಿಯಾಗಿರುವ ಪರಿಶಿಷ್ಟಜಾತಿ ಮೋರ್ಚಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ,’ ಎಂದು ಹೇಳಿದ್ದಾರೆ
ಅಲ್ಲದೆ, ಫೆ.2-3ರಂದು ಭುವನೇಶ್ವರದಲ್ಲಿ ಪರಿಶಿಷ್ಟಪಂಗಡ ಮೋರ್ಚಾ, ಫೆ.15-16ರಂದು ಪಟನಾದಲ್ಲಿ ಇತರೆ ಹಿಂದುಳಿದ ಮೋರ್ಚಾ ಸೇರಿದಂತೆ ಇತರ ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಯಾದವ್ ಅವರು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ