ರಾಜ್ಯದಲ್ಲಿ AIMS ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಇಬ್ಬರು ಪ್ರಭಾವಿ ನಾಯಕರ ಪೈಪೋಟಿ; ಗೊಂದಲದಲ್ಲಿ ಸಿಎಂ

By Suvarna Web DeskFirst Published Sep 20, 2017, 4:59 PM IST
Highlights

ರಾಜ್ಯದಲ್ಲಿ AIMS ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ರಾಜ್ಯದ ಇಬ್ಬರು ಪ್ರಭಾವಿ ಸಚಿವರ ಮಧ್ಯೆ  ಭಾರೀ ಪೈಪೋಟಿ ಶುರುವಾಗಿದೆ.

ಬೆಂಗಳೂರು (ಸೆ.20): ರಾಜ್ಯದಲ್ಲಿ AIMS ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ರಾಜ್ಯದ ಇಬ್ಬರು ಪ್ರಭಾವಿ ಸಚಿವರ ಮಧ್ಯೆ  ಭಾರೀ ಪೈಪೋಟಿ ಶುರುವಾಗಿದೆ.

ಕಲಬುರಗಿಗೆ ಆಸ್ಪತ್ರೆ ನೀಡಲು ಡಾ.ಶರಣ್ ಪ್ರಕಾಶ್ ಪಾಟೀಲ್ ಒಂದು ಕಡೆ ಒತ್ತಾಯ ಮಾಡುತ್ತಿದ್ದರೆ ಇನ್ನೊಂದು ಕಡೆ ರಾಯಚೂರಿಗೆ AIMS ಮಾದರಿಯ ಸೂಪರ್ ಸ್ಪೆಷಾಲಿಟಿ ತರಲು ತನ್ವೀರ್ ಸೇಠ್​ ಲಾಬಿ ನಡೆಸುತ್ತಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮೇಲೆ ಡಾ. ಪಾಟೀಲ್ ಒತ್ತಡ ಹೇರಿದ್ದಾರೆ. ಕಲಬುರಗಿಗೆ ಆಸ್ಪತ್ರೆ ಪಡೆಯಲು ಶರಣ ಪ್ರಕಾಶ್ ಪಾಟೀಲ್ ಗೆ ಮಲ್ಲಿಕಾರ್ಜುನ ಖರ್ಗೆ ಬೆಂಬಲವಿದೆ. ಜೊತೆಗೆ ಸಿದ್ದರಾಮಯ್ಯ ಪ್ರಭಾವ ಬಳಸಿಕೊಂಡು ಹೋರಾಟ ನಡೆಸುತ್ತಿದ್ದಾರೆ.

ಇಬ್ಬರು ಪ್ರಭಾವಿ ನಾಯಕರು ಶತಾಯಗತಾಯ AIMS ಮಾದರಿಯ ಸೂಪರ್ ಸ್ಪೆಷಲಾಟಿ ಆಸ್ಪತ್ರೆ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.  ಸಚಿವರಿಬ್ಬರ ಪೈಪೋಟಿ ಕಂಡು ಸಿಎಂ ಸಿದ್ದರಾಮಯ್ಯ ಗೊಂದಲಕ್ಕೆ ಸಿಲುಕಿದ್ದಾರೆ. ಕಳೆದ ವರ್ಷದ ಬಜೆಟ್ ನಲ್ಲಿ  AIMS ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಲಾಗಿತ್ತು.

click me!