ಕದ್ದ ಚಿನ್ನ  ಮನೆಗೆ ಮರಳಿಸಿದ ‘ಭಲೇ ಕಳ್ಳರು’!

By Suvarna Web DeskFirst Published Sep 20, 2017, 4:18 PM IST
Highlights

ಮನೆಯೊಂದರಿಂದ ಕಳವಾದ ಚಿನ್ನಾಭರಣವನ್ನು ಅಪರಿಚಿತರು ಮರಳಿ ಮನೆಯಂಗಳಕ್ಕೆ ಎಸೆದು ಹೋಗಿದ್ದಲ್ಲದೆ, ಚೀಟಿಯಲ್ಲಿ ಬುದ್ಧಿಮಾತು ಹೇಳಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ. ಶನಿವಾರ (ಸೆ.16) ಹಾಡಹಗಲೇ ಮಂಗಳೂರಿನ ಅಡುಮರೋಳಿ ಸಮೀಪದ ಶೇಖರ್ ಕುಂದರ್ ಅವರ ಮನೆಗೆ ನುಗ್ಗಿದ ಕಳ್ಳರು 92 ಪವನ್ ಚಿನ್ನ ಮತ್ತು ₹13 ಸಾವಿರ ನಗದು ಕಳವು ಮಾಡಿದ್ದರು. ಅದೇ ದಿನ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಲಾಗಿತ್ತು.

ಮಂಗಳೂರು: ಮನೆಯೊಂದರಿಂದ ಕಳವಾದ ಚಿನ್ನಾಭರಣವನ್ನು ಅಪರಿಚಿತರು ಮರಳಿ ಮನೆಯಂಗಳಕ್ಕೆ ಎಸೆದು ಹೋಗಿದ್ದಲ್ಲದೆ, ಚೀಟಿಯಲ್ಲಿ ಬುದ್ಧಿಮಾತು ಹೇಳಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.

ಶನಿವಾರ (ಸೆ.16) ಹಾಡಹಗಲೇ ಮಂಗಳೂರಿನ ಅಡುಮರೋಳಿ ಸಮೀಪದ ಶೇಖರ್ ಕುಂದರ್ ಅವರ ಮನೆಗೆ ನುಗ್ಗಿದ ಕಳ್ಳರು 92 ಪವನ್ ಚಿನ್ನ ಮತ್ತು ₹13 ಸಾವಿರ ನಗದು ಕಳವು ಮಾಡಿದ್ದರು. ಅದೇ ದಿನ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಲಾಗಿತ್ತು.

ಸೋಮವಾರ ಮಧ್ಯಾಹ್ನ ವೇಳೆ ಮನೆ ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ಗಂಟೊಂದನ್ನು ಮನೆಯಂಗಳಕ್ಕೆ ಬಿಸಾಡಿ ಹೋಗಿದ್ದರು. ಗಂಟನ್ನು ತೆರೆದು ನೋಡಿದಾಗ ಚಿನ್ನ ಸಿಕ್ಕಿದೆ. ಆದರೆ ಹಣ ಸಿಕ್ಕಿಲ್ಲ. ಇದರೊಂದಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ಕಳ್ಳರು ಚಿನ್ನಾಭರಣ ದೋಚಿಕೊಂಡು ಹೋಗುತ್ತಿದ್ದಾಗ ನಾವು ನೋಡಿದೆವು. ಅವರನ್ನು ಹಿಂಬಾಲಿಸಿ ಹಿಡಿದಾಗ ಹಲ್ಲೆ ನಡೆಸಿದರು. ಒಂದು ಗಂಟನ್ನು ವಶಕ್ಕೆ ಪಡೆದೇವು ಎಂದು ಬರೆಯಲಾಗಿದೆ.

ಆದರೆ ಪೊಲೀಸರು ನಮ್ಮನ್ನೇ ಕಳ್ಳರೆಂದು ಪರಿಗಣಿಸುವ ಭಯದಿಂದ ನಾವು ಮುಂದೆ ಬರುತ್ತಿಲ್ಲ. ಇಷ್ಟೊಂದು ಚಿನ್ನ ಮನೆಯಲ್ಲಿ ಇಟ್ಟಿದ್ದೇಕೆ? ಬ್ಯಾಂಕ್‌ನಲ್ಲಿ ಇಡಬಾರದೇ ಎಂದು ಸಲಹೆ ನೀಡಿದ್ದಾರೆ.

click me!