
ಕಾರವಾರ, [ಅ.31]: ಇತ್ತೀಚೆಗೆ ಕೊಡಗು ಸಂತ್ರಸ್ತರಿಗೆ ಬಿಸ್ಕತ್ ಎಸೆದು ವಿವಾದವನ್ನ ಸಚಿವ ಎಚ್.ಡಿ. ರೇವಣ್ಣ ಮೈಮೇಲೆ ಎಳೆದುಕೊಂಡಿದ್ದರು.
ಇದರ ಬೆನ್ನಲ್ಲೇ ಸಚಿವ ಆರ್.ವ್ಹಿ ದೇಶಪಾಂಡೆ, ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಎಸೆದು ದರ್ಪ ಮೆರೆದಿದ್ದಾರೆ.
ಪ್ರಾಣಿಗಳಿಗೆ ಎಸೆಯೋ ರೀತಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಅವಮಾನಿಸಿದ ಸಚಿವ ರೇವಣ್ಣ!
ಹಳಿಯಾಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಕ್ರೀಡಾ ಪಟುಗಳಿಗೆ ಸಾಮಗ್ರಿಗಳನ್ನು ವಿತರಿಸುವ ವೇಳೆ, ಕ್ರೀಡಾ ಪಟುಗಳು ವೇದಿಕೆಗೆ ಬರಲು ಕೊಂಚ ತಡವಾಗಿದೆ.
ಇದರಿಂದ ಕೆರಳಿದ ಸಚಿವರು ಕ್ರೀಡಾ ಪಟುಗಳು ಕುಳಿತಿದ್ದ ಸ್ಥಳಕ್ಕೆ ಕ್ರೀಡಾ ಸಾಮಗ್ರಿಗಳನ್ನು ಎಸೆದಿದ್ದಾರೆ. ಸಚಿವರ ಈ ವರ್ತನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳು ಹಾಗೂ ಕ್ರೀಡಾ ಸಂಘಗಳಿಗೆ ಈ ಮೂಲಕ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.