ಗೋವುಗಳಲ್ಲಿ ಎಚ್ಐವಿ ತಡೆಯಬಲ್ಲ ರೋಗ ನಿರೋಧಕ ಶಕ್ತಿ

By Suvarna Web DeskFirst Published Jul 23, 2017, 12:24 AM IST
Highlights

. ಆರೋಗ್ಯಕರ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ತಟಸ್ಥಗೊಳಿಸುವ ಎಚ್‌ಐವಿಗೆ ಸೂಕ್ತ ಔಷಧವನ್ನು ಕಂಡು ಹಿಡಿಯುವ ಪ್ರಯತ್ನ ವಿಫಲವಾಗಿತ್ತು. ಆದರೆ ಗೋವುಗಳು ವಾರಗಳ ಅಂತರದಲ್ಲೇ ಎಚ್‌ಐವಿಗೆ ತಡೆಯೊಡ್ಡ ಬಲ್ಲ ರೋಗನಿರೋಧಕ ಶಕ್ತಿ ಉತ್ಪಾದಿಸಬಲ್ಲವು ಎಂದು ವರದಿ ತಿಳಿಸಿದೆ.

ವಾಷಿಂಗ್ಟನ್(ಜು.23): ಗೋವುಗಳಲ್ಲಿ ಇರುವ ಪ್ರತಿರಕ್ಷಣಾ ವ್ಯವಸ್ಥೆ ವಾರಗಳ ಅಂತರದಲ್ಲೇ ಎಚ್‌ಐವಿಗೆ ತಡೆಯೊಡ್ಡ ಬಲ್ಲ ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಬಲ್ಲವು. ಈ ಪ್ರಕ್ರಿಯೆ ನಡೆಯಲು ಮಾನವನ ದೇಹದಲ್ಲಿ ವರ್ಷಗಟ್ಟಲೆ ಸಮಯ ಹಿಡಿಯುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಹೀಗಾಗಿ ಭವಿಷ್ಯದಲ್ಲಿ ಮಾರಕ ರೋಗ ಏಡ್ಸ್‌ಗೆ ಪರಿಣಾಮಕಾರಿಯಾದ ಔಷಧಿ ಕಂಡು ಹಿಡಿಯುವ ಸಾಧ್ಯತೆ ಕಂಡುಬಂದಿದೆ.

‘ನೇಚರ್’ ಜರ್ನಲ್‌ನಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಈ ಸಂಗತಿಯನ್ನು ವಿವರಿಸಲಾಗಿದೆ. ಗೋವುಗಳು ತಮ್ಮ ಸಂಕೀರ್ಣ ಮತ್ತು ಬ್ಯಾಕ್ಟೀರಿಯಾಗಳಿಂದ ತುಂಬಿರುವ ಜೀರ್ಣಕ್ರಿಯೆ ವ್ಯವಸ್ಥೆಯಿಂದಾಗಿ ತೀವ್ರ ರೀತಿಯ ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆರೋಗ್ಯಕರ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ತಟಸ್ಥಗೊಳಿಸುವ ಎಚ್‌ಐವಿಗೆ ಸೂಕ್ತ ಔಷಧವನ್ನು ಕಂಡು ಹಿಡಿಯುವ ಪ್ರಯತ್ನ ವಿಫಲವಾಗಿತ್ತು. ಆದರೆ ಗೋವುಗಳು ವಾರಗಳ ಅಂತರದಲ್ಲೇ ಎಚ್‌ಐವಿಗೆ ತಡೆಯೊಡ್ಡ ಬಲ್ಲ ರೋಗನಿರೋಧಕ ಶಕ್ತಿ ಉತ್ಪಾದಿಸಬಲ್ಲವು ಎಂದು ವರದಿ ತಿಳಿಸಿದೆ.

click me!