ಮತ್ತೆ ನಡೆಯುತ್ತಾ ಚುನಾವಣೆ..?

By Web DeskFirst Published Nov 14, 2018, 10:53 AM IST
Highlights

ರಾಜಕೀಯದಲ್ಲಾದ ಹಲವು ರೀತಿಯ ಬೆಳವಣಿಗೆಗಳ ನಡುವೆ ಸಂಸತ್ ವಿಸರ್ಜನೆ ಮಾಡಿ ಮತ್ತೆ ಚುನಾವಣೆ ನಡೆಸುವುದಕ್ಕೆ ಇದೀಗ ಶ್ರೀ ಲಂಕಾ ಸುಪ್ರೀಂಕೋರ್ಟ್ ತಡೆ ನೀಡಿದೆ. 

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ವಿವಾದಾತ್ಮಕ ಸಂಸತ್ತು ವಿಸರ್ಜನೆ ಆದೇಶವನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ. 

ಸಿರಿಸೇನಾ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಸಂಸತ್ತು ವಿಸರ್ಜನೆ ಆದೇಶಕ್ಕೆ ತಡೆ ಹೇರಿದ್ದಲ್ಲದೆ, ಜನವರಿ 5ರ ಮತದಾನಕ್ಕಾಗಿ ನಡೆಯುತ್ತಿದ್ದ ಸಿದ್ಧತೆಯನ್ನು ಸ್ಥಗಿತಗೊಳಿಸುವಂತೆ ಯೂ ಸೂಚಿಸಿತು. 

ಅ.26ರಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಸಿರಿಸೇನಾ ಪದಚ್ಯುತಗೊಳಿಸಿದ್ದರು. ಆ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ನಿಯೋಜನೆಗೊಳಿಸಿ, ಬಹುಮತ ಸಾಬೀತಿಗೆ ಸೂಚಿಸಿದ್ದರು. ಬಹುಮತ ಸಾಬೀತು ಕಷ್ಟ ಎಂದು ಅರಿವಾಗುತ್ತಲೇ ಸಂಸತ್ತು ವಿಸರ್ಜನೆಗೊಳಿಸಿ, ಚುನಾವಣೆ ಘೋಷಣೆ ಮಾಡಿದರು.

click me!