ಸಿರ್ಸಾ ಆಶ್ರಮಕ್ಕೆ ಪ್ರವೇಶಿಸಿದ ಸೇನೆ

Published : Aug 26, 2017, 12:19 PM ISTUpdated : Apr 11, 2018, 12:45 PM IST
ಸಿರ್ಸಾ ಆಶ್ರಮಕ್ಕೆ ಪ್ರವೇಶಿಸಿದ ಸೇನೆ

ಸಾರಾಂಶ

ಜೈಲು ಪಾಲಾಗಿರುವ ರಾಮ್ ರಹೀಂಗೆ ಒಂದರ ಬಳಿಕ ಮತ್ತೊಂದರಂತೆ ಶಾಕಿಂಗ್ ಸುದ್ದಿಗಳು ಸಿಗುತ್ತಿವೆ. ಸದ್ಯ ಬಾಬಾ ರಾಮ್ ರಹೀಂ ಆಶ್ರಮ, ಸೇನೆಯ ಭದ್ರ ಕೋಟೆಯಲ್ಲಿ ಸಿಲುಕಿದೆ. ಹರ್ಯಾಣದ ಸಿರ್ಸಾ ಆಶ್ರಮಕ್ಕೆ ಸೇನೆ ಪ್ರವೇಶಿಸಿದೆ. ಆಶ್ರಮದಲ್ಲಿ ಜಮಾಯಿಸಿರುವ ರಾಮ್ ರಹೀಂ ಬೆಂಬಲಿಗರನ್ನು ಹೊರ ಹೋಗುವಂತೆ ಸೇನೆ ಸೂಚಿಸಿದೆ.

ಹರ್ಯಾಣ(ಆ.26): ಜೈಲು ಪಾಲಾಗಿರುವ ರಾಮ್ ರಹೀಂಗೆ ಒಂದರ ಬಳಿಕ ಮತ್ತೊಂದರಂತೆ ಶಾಕಿಂಗ್ ಸುದ್ದಿಗಳು ಸಿಗುತ್ತಿವೆ. ಸದ್ಯ ಬಾಬಾ ರಾಮ್ ರಹೀಂ ಆಶ್ರಮ, ಸೇನೆಯ ಭದ್ರ ಕೋಟೆಯಲ್ಲಿ ಸಿಲುಕಿದೆ. ಹರ್ಯಾಣದ ಸಿರ್ಸಾ ಆಶ್ರಮಕ್ಕೆ ಸೇನೆ ಪ್ರವೇಶಿಸಿದೆ. ಆಶ್ರಮದಲ್ಲಿ ಜಮಾಯಿಸಿರುವ ರಾಮ್ ರಹೀಂ ಬೆಂಬಲಿಗರನ್ನು ಹೊರ ಹೋಗುವಂತೆ ಸೇನೆ ಸೂಚಿಸಿದೆ.

ಹರ್ಯಾಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇದೀಗ 6 ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಸದ್ಯ ಡೇರಾ ಸಚ್ಚಾ ಸೌದಾ ಪಂಗಡದ ಆಶ್ರಮಗಳಿಗೆ ಪ್ರವೇಶಿಸಿ ಅಲ್ಲಿ ಜಮಾಯಿಸಿರುವ ಭಕ್ತರನ್ನು ಹೊರ ಕಳುಹಿಸಿ ಬೀಗ ಜಡಿಯುವ ಕಾರ್ಯ ಆರಂಭವಾಗಿದೆ. ಈಗಾಗಲೇ 36 ಕಡೆಗಳಲ್ಲಿ ಬೀಗ ಜಡಿಯಲಾಗಿದೆ.

ಆಶ್ರಮದಲ್ಲಿರುವ ಭಕ್ತರು ಹೊರಗಿರುವ ಜನರಿಗೆ ಹಿಂಸಾಚಾರದಲ್ಲಿ ತೊಡಗಿರಲು ಪ್ರೇರೇಪಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಆಶ್ರಮಗಳಿಗೆ ಬೀಗ ಜಡಿಯುವ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

NEET: 'ಪರೀಕ್ಷಾ ಪೇ ಚರ್ಚಾ' ಮಾಡೋ ಮೋದಿಯವರೇ ನೀಟ್ ಬಗ್ಗೆ ಯಾವಾಗ? ಆರೆಸ್ಸೆಸ್ ಬಿಜೆಪಿ ವಿರುದ್ಧ ಖರ್ಗೆ ಗಂಭೀರ ಆರೋಪ
Thalapathy Vijay ಸಿಎಂ ಆಗಿದ್ದಕ್ಕೆ ನಂಗೇನು ಸಮಸ್ಯೆ ಇಲ್ಲ; ಅಷ್ಟು ಕೆಳಮಟ್ಟದವನಲ್ಲ: Actor Rajinikanth