ಹರ್ಯಾಣ ಹಿಂಸಾಚಾರ: ಡಿಸಿಪಿ ವಜಾ ಮಾಡಿ ಕೈ ತೊಳೆದುಕೊಂಡ ಸರ್ಕಾರ!

Published : Aug 26, 2017, 10:48 AM ISTUpdated : Apr 11, 2018, 01:11 PM IST
ಹರ್ಯಾಣ ಹಿಂಸಾಚಾರ: ಡಿಸಿಪಿ ವಜಾ ಮಾಡಿ ಕೈ ತೊಳೆದುಕೊಂಡ ಸರ್ಕಾರ!

ಸಾರಾಂಶ

ಕೋರ್ಟ್​ ಬಾಬಾ ರಾಮ್ ರಹಿಮ್ ಸಿಂಗ್ ದೋಷಿ ಎಂದು ಅತ್ತ ತೀರ್ಪು ನೀಡುತ್ತಲೇ ಇತ್ತ ಬಾಬಾ ಬೆಂಬಲಿಗರ ಗೂಡಾಗಿರಿ ಶುರುವಾಗಿದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಹರಿಯಾಣದ ಎಲ್​'ಐಸಿ ಕಚೇರಿಗೆ ಬೆಂಕಿ  ಇಟ್ಟರೆ ಐಟಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ಗೂಂಡಾಗಿರಿಯಿಂದ ಹರಿಯಾಣ, ಪಂಜಾಬ್, ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ಇದನ್ನು ಕಂಡ ಸರ್ಕಾರ ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದಂತೆ ಡಿಸಿಪಿಯನ್ನು ವಜಾಗೊಳಿಸಿ ತನ್ನ ಕೈ ತೊಳೆದುಕೊಂಡಿದೆ.

ಚಂಡೀಗಢ (ಆ.26): ಕೋರ್ಟ್​ ಬಾಬಾ ರಾಮ್ ರಹಿಮ್ ಸಿಂಗ್ ದೋಷಿ ಎಂದು ಅತ್ತ ತೀರ್ಪು ನೀಡುತ್ತಲೇ ಇತ್ತ ಬಾಬಾ ಬೆಂಬಲಿಗರ ಗೂಂಡಾಗಿರಿ ಶುರುವಾಗಿದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಹರ್ಯಾಣದ ಎಲ್​'ಐಸಿ ಕಚೇರಿಗೆ ಬೆಂಕಿ  ಇಟ್ಟರೆ ಐಟಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ಗೂಂಡಾಗಿರಿಯಿಂದ ಹರ್ಯಾಣ, ಪಂಜಾಬ್, ದೆಹಲಿ ಅಕ್ಷರಶಃ ನಲುಗಿ ಹೋಗಿದೆ. ಇದನ್ನು ಕಂಡ ಸರ್ಕಾರ ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವಂತೆ ಡಿಸಿಪಿಯನ್ನು ವಜಾಗೊಳಿಸಿ ತನ್ನ ಕೈ ತೊಳೆದುಕೊಂಡಿದೆ.

ಬಾಬಾ ರಾಮ್ ರಹಿಮ್ ಸಿಂಗ್ ಬೆಂಬಲಿಗ ಗೂಂಡಾಗಿರಿಗೆ ಸುಮಾರು 32 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಹರ್ಯಾಣ ಸರ್ಕಾರ ಭದ್ರತಾ ವೈಫಲ್ಯಕ್ಕೆ ಪಂಚಕುಲಾ ಡಿಸಿಪಿಯನ್ನು ವಜಾಗೊಳಿಸಿದ್ದಾರೆ.

ಇತ್ತ ಬಾಬಾ ರಹೀಂಗೆ ಶಿಕ್ಷೆ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್​​ ಸಿಂಗ್'​​​​ಗೆ ಭಾರೀ ಭದ್ರತೆ ನೀಡಲು ಹರಿಯಾಣ ಸರ್ಕಾರಕ್ಕೆ, ಕೇಂದ್ರ ಸರ್ಕಾರ ಸೂಚಿಸಿದೆ. ಈಗಾಗಲೇ ಮುನ್ನೆಚ್ಚರಿಗೆ ಕ್ರಮವಾಗಿ ಸಿಬಿಐ ವಿಶೇಷ ಜಡ್ಜ್​​ ನಿವಾಸಕ್ಕೆ ಅರೆಸೇನಾ ಪಡೆ ಹಾಗೂ ಪೊಲೀಸರ ಭದ್ರತೆ ಕಲ್ಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ