ಎಚ್ಚರ...! ಜಿಎಸ್'ಟಿ ಹೆಸರಲ್ಲಿ ಗ್ರಾಹಕರಿಂದ ಹಣ ಸುಲಿಗೆ: ರಿಯಾಲಿಟಿ ಚೆಕ್'ನಲ್ಲಿ ಬಯಲಾಯ್ತು ಸತ್ಯ!

By Suvarna Web DeskFirst Published Jul 3, 2017, 8:28 AM IST
Highlights

ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಇಡೀ ದೇಶದಾದ್ಯಂತ  ಜಾರಿಗೆ ಬಂದಿದೆ. ಆದರೆ, ಈ ವಿನೂತನ ತೆರಿಗೆಯನ್ನು ಅಳವಡಿಸಿಕೊಳ್ಳುವಲ್ಲಿ ವ್ಯಾಪಾರಿ ವಲಯದಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಈ ಮಧ್ಯೆ ಕೆಲ ವ್ಯಾಪಾರಿಗಳು ಜಿಎಸ್'ಟಿ ತೆರಿಗೆ ನೆಪದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗಿಳಿದಿದ್ದಾರೆ. ಅದು ಹೇಗೆ ಅಂತೀರಾ ಈ ವರದಿ ನೋಡಿ.

ಬೆಂಗಳೂರು(ಜು.03): ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಇಡೀ ದೇಶದಾದ್ಯಂತ  ಜಾರಿಗೆ ಬಂದಿದೆ. ಆದರೆ, ಈ ವಿನೂತನ ತೆರಿಗೆಯನ್ನು ಅಳವಡಿಸಿಕೊಳ್ಳುವಲ್ಲಿ ವ್ಯಾಪಾರಿ ವಲಯದಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಈ ಮಧ್ಯೆ ಕೆಲ ವ್ಯಾಪಾರಿಗಳು ಜಿಎಸ್'ಟಿ ತೆರಿಗೆ ನೆಪದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗಿಳಿದಿದ್ದಾರೆ. ಅದು ಹೇಗೆ ಅಂತೀರಾ ಈ ವರದಿ ನೋಡಿ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ಜಿಎಸ್‌ಟಿ, ಆರ್ಥಿಕ ಸುಧಾರಣೆಯ ಕ್ರಮ ಎನ್ನಲಾಗುತ್ತಿದೆ. ಆದರೆ ಜಿಎಸ್‌'ಟಿ ಹೆಸರಲ್ಲಿ ಕೆಲ ವ್ಯಾಪಾರಿಗಳು ಹಗಲು ದರೋಡೆಗೆ ಮುಂದಾಗಿದ್ದಾರೆ . ಜಿಎಸ್ಟಿ ಹೆಸರು ಹೇಳಿ ಜನರಿಂದ ಸುಲಿಗೆ ಮಾಡುತ್ತಿದ್ದಾರೆ.

ಜಿಎಸ್​ಟಿ ಹೆಸರಿನಲ್ಲಿ ಗ್ರಾಹಕರ ಸುಲಿಗೆ: ಸುವರ್ಣ ನ್ಯೂಸ್  ರಿಯಾಲಿಟಿ ಚೆಕ್‌ನಲ್ಲಿ ಬಯಲು

ಈ ಹಿಂದೆ ಇದ್ದ  ಸ್ಥಳೀಯ ತೆರಿಗೆ, ರಾಜ್ಯ ತೆರಿಗೆ, ಕೇಂದ್ರ ತೆರಿಗೆಳೆಲ್ಲ ಸೇರಿ ಜಿಎಸ್'ಟಿಯಲ್ಲಿಯೇ ವಿಲೀನವಾಗಬೇಕು. ಆದರೆ ಕೆಲ ವ್ಯಾಪಾರಿಗಳು ಈ ಹಿಂದಿನ ತೆರಿಗೆ ಜೊತೆಗೆ ಜಿಎಸ್‌'ಟಿ ಹೆಸರಿನಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಸುವರ್ಣ ನ್ಯೂಸ್  ನಡೆಸಿದ  ರಿಯಾಲಿಟಿ ಚೆಕ್'ನಲ್ಲಿ ಇದು ಬಯಲಾಗಿದೆ. ಇದಕ್ಕೆ  ಉತ್ತಮ ಉದಾಹರಣೆ ಎಂದರೆ 10 ರೂಪಾಯಿ ಒಂದ್ ಕಪ್ ಟೀಗೆ  ಹೊಟೇಲ್‌ ಮಾಲೀಕರು  ಇದೀಗ 12 ರೂಪಾಯಿ ಪಡೆಯುತ್ತಿದ್ದಾರೆ.

ಜಿಎಸ್ ಟಿ ಬರುವುದಿಕ್ಕಿಂತ ಮುಂಚೆ ಒಂದು ಕಪ್ ಟೀ ಬೆಲೆ 10 ರೂಪಾಯಿ ಇತ್ತು. ಆದ್ರೆ, ಜಿಎಸ್ ಟಿ ಬಂದ ನಂತ್ರ ಕೆಲ ಹೋಟೆಲ್ ಗಳಲ್ಲಿ 11 ಅಥವಾ12 ರೂಪಾಯಿ ವಸೂಲಿ ಮಾಡುತ್ತಿವೆ. ಈ ಹಿಂದೆ ಇದ್ದ10 ರೂಪಾಯಿ ಟೀಯಲ್ಲಿಯೇ ಎಲ್ಲ ತೆರಿಗೆ ಸೇರಿತ್ತು. ಅದೇ ರೀತಿ ಜಿಎಸ್ ಟಿ ಕೂಡ 10 ರೂಪಾಯಿಯಲ್ಲಿ ವಿಲೀನವಾಗಬೇಕಿತ್ತು. ಆದ್ರೆ, ಕೆಲ ಹೋಟೆಲ್ ಗಳಲ್ಲಿ 10 ಮೂಲ ಬೆಲೆ ಮಾಡಿಕೊಂಡು, ಅದಕ್ಕೆ ಹೆಚ್ಚುವರಿ  ಶೇ. 12 ರಷ್ಟು ಜಿಎಸ್ ಟಿ ತೆರಿಗೆ ವಿಧಿಸಿ ಗ್ರಾಹಕರಿಂದ 12 ರೂಪಾಯಿ ವಸೂಲಿ ಮಾಡುತ್ತಿವೆ. ಇದು ಗ್ರಾಹಕರಿಗೆ ಗೊತ್ತಿಲ್ಲದೆ ಮೋಸ ನಡೆಯುತ್ತಿದೆ. ಈ ಬಗ್ಗೆ ಗ್ರಾಹಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜಿಎಸ್'ಟಿ ಇಡೀ ದೇಶಕ್ಕೆ ಹೊಸ ತೆರಿಗೆ ಪದ್ದತಿ ಆಗಿರುವುದರಿಂದ ಇದನ್ನು ಅರ್ಥ ಮಾಡಿಕೊಳ್ಳಲು ಗ್ರಾಹಕರಿಗೆ ಇನ್ನು ಸಾಕಷ್ಟು ಸಮಯಾವಕಾಶ ಬೇಕಾಗಬಹುದು. ಗ್ರಾಹಕರ ಈ ಮನೋ ಭಾವವನ್ನು ಬಳಸಿಕೊಂಡ ವ್ಯಾಪಾರಿ ವಲಯ ಜಿಎಸ್ ಟಿ ಯನ್ನು ಮನ ಬಂದಂತೆ ಗ್ರಾಹಕರ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ಸರಕಿನ ಮೂಲ ಬೆಲೆಗೆ ಜಿಎಸ್ ಟಿ ವಿಧಿಸಬೇಕೇ ವಿನಃ ಈಗಾಗಲೇ ಜಾರಿಯಿಂದ ಬೆಲೆಯ ಮೇಲೆ ಜಿಎಸ್ ಟಿ ವಿಧಿಸುವುದು ತಪ್ಪಾಗುತ್ತಿದೆ.ಈ ರೀತಿ ಯಾರಾದರೂ, ತೆರಿಗೆ ವಿಧಿಸಿದರೆ ಅದನ್ನು ಪ್ರಶ್ನೆ ಮಾಡುವ ಮನೋ ಭಾವವನ್ನು ಗ್ರಾಹಕರು ಬಳಸಿಕೊಳ್ಳಬೇಕಾಗುತ್ತದೆ. ಇದಲ್ಲದೆ, ಕೆಲ ಎಸಿ ರೆಸ್ಟೋರೆಂಟ್, ಹೋಟೆಲ್'ಗಳಲ್ಲಿ ಜಿ ಎಸ್ ಟಿ ತೆರಿಗೆ ಜತೆ ಶೇ. 3 ರಷ್ಟು ಸರ್ ಚಾರ್ಜ್ ಕೂಡ ವಿಧಿಸಲಾಗುತ್ತಿದೆ. ಇದು ಕೂಡ ಗ್ರಾಹಕರಿಗೆ ಮೋಸ ಮಾಡುವಂತಹದು. ಒಂದು ದೇಶ ಒಂದು ತೆರಿಗೆ ಅಂದ್ಮೇಲೆ ಎಲ್ಲ ತೆರಿಗೆಗಳು ಜಿ.ಎಸ್'ಟಿಯಲ್ಲಿಯೇ ವಿಲೀನವಾಗಬೇಕು. ಈ ಬಗ್ಗೆ ಗ್ರಾಹಕರು ಹೆಚ್ಚಾರಿಗೆ ವಹಿಸಬೇಕಿದೆ.

ಇನ್ನು ವ್ಯಾಪಾರಿ ವಲಯದಲ್ಲಿ ಜಿಎಸ್'ಟಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದೆ. ಈ ಬಗ್ಗೆ ತೆರಿಗೆ ಇಲಾಖೆ ಇಲಾಖೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಬೇಕಿದೆ. ಇದು ಆದಷ್ಟು ಬೇಗ ಆಗದಿದ್ದಲ್ಲಿ ಜಿಎಸ್ ಟಿ ಗೊಂದಲ ಮುಂದುವರಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಎಸ್'ಟಿ ಕುರಿತು ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಎಂದಿದ್ದಾರೆ. ಆದರೆ, ಈ ನೂತನ ತೆರಿಗೆಯಿಂದ ವ್ಯಾಪಾರಿ ವಲಯವಷ್ಟೇ ಅಲ್ಲದೆ ಗ್ರಾಹಕರಲ್ಲಿಯೂ ಸಾಕಷ್ಟು ಗೊಂದಲ ಮೂಡಿದೆ. ಮುಂದಿನ  ದಿನಗಳಲ್ಲ ಜಿಎಸ್'ಟಿ ಯಾವ ರೀತಿ ಅಳವಡಿಕೆ ಆಗುತ್ತೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

click me!