ಇಮ್ರಾನ್ ದೋಸ್ತಿ ಸ್ವೀಕರಿಸಿ: ಪ್ರಧಾನಿಗೆ ಮುಫ್ತಿ ಸಲಹೆ!

By Web DeskFirst Published Jul 28, 2018, 8:02 PM IST
Highlights

ಇಮ್ರಾನ್ ಖಾನ್ ಸ್ನೇಹ ಸ್ವೀಕರಿಸಲು ಮುಫ್ತಿ ಸಲಹೆ

ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ

ಕಣಿಯೆಲ್ಲಿ ಶಾಂತಿ ನೆಲೆಸಲು ಮಾತುಕತೆ ಅಗತ್ಯ

ಪಾಕ್ ನಾಯಕನ ದೋಸ್ತಿ ಸ್ವೀಕರಿಸುತ್ತಾರಾ ಮೋದಿ?

ಶ್ರೀನಗರ(ಜು.28): ಜಮ್ಮು ಕಾಶ್ಮೀರದಲ್ಲಿನ ರಕ್ತಪಾತವನ್ನು ತಡೆಯಲು ಪಾಕಿಸ್ತಾನದ ಸಂಭಾವ್ಯ ಪ್ರಧಾನಿ, ಇಮ್ರಾನ್‌ ಖಾನ್‌ ನೀಡಿರುವ ಸ್ನೇಹದ ಕೊಡುಗೆಯನ್ನು ಸ್ವೀಕರಿಸುವಂತೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ.

ಇಮ್ರಾನ್‌ ಖಾನ್‌ ಪಾಕ್‌ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಮಾಡಿದ ಮೊದಲ ಸಾರ್ವಜನಿಕ ಭಾಷಣದಲ್ಲಿ,  ಪಾಕಿಸ್ತಾನ  ಭಾರತದೊಂದಿಗಿನ ಸಂಬಂಧಗಳನ್ನು ಸುಧಾರಿಸಲು ಸಿದ್ಧವಿದೆ ಎಂದು ಹೇಳಿದ್ದರು. ಕಾಶ್ಮೀರವೂ ಸೇರಿದಂತೆ ಎಲ್ಲ ಸಮಸ್ಯೆಗಳ ಇತ್ಯರ್ಥಕ್ಕೆ ಉಭಯ ದೇಶಗಳ ನಾಯಕರು ಮಾತುಕತೆ ನಡೆಸುವ ಅಗತ್ಯವಿದೆ ಎಂದು ಇಮ್ರಾನ್ ಹೇಳಿದ್ದರು. 

ಇಮ್ರಾನ್ ನೀಡಿರುವ ಸ್ನೇಹದ ಕೊಡುಗೆಯನ್ನು ಅದೇ ಸಮರ್ಪಣಾ ಭಾವದಿಂದ ಸ್ವೀಕರಿಸುವಂತೆ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಪಾಕಿಸ್ತಾನದ ನಾಯಕರೊಬ್ಬರು ಇದೇ ಮೊದಲ ಬಾರಿಗೆ ಭಾರತದ ಜೊತೆಗೆ ಸ್ನೇಹಕ್ಕೆ ಮುಂದಾಗಿದ್ದು, ಭಾರತ ಕೂಡ ಈ ಆಹ್ವಾನವನ್ನು ಸ್ವೀಕರಿಸಬೇಕು ಎಂದು ಮುಪ್ತಿ ಅಭಿಪ್ರಾಯಪಟ್ಟಿದ್ದಾರೆ.

click me!