
ನವದೆಹಲಿ[ಸೆ.28]: ಪಾಕಿಸ್ತಾನದ ಬಂಧನದಲ್ಲಿರುವ ಭಾರತದ ಕುಲಭೂಷಣ್ ಜಾಧವ್ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್ ಸಾಳ್ವೆ ಅವರು ಕೇಳಿದ್ದ 1 ರು. ಗೌರವ ಸಂಭಾವನೆಯನ್ನು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು ಪೂರೈಸಿದ್ದಾರೆ.
ಟ್ವಿಟರ್‌ನಲ್ಲಿ ದಿ.ಸುಷ್ಮಾ ಸ್ವರಾಜ್, ನಿಮಗೊಂದು ಮಾಹಿತಿ
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಪರ ವಾದಿಸಿ ನ್ಯಾಯ ಒದಗಿಸಿದ್ದ ಸಾಳ್ವೆ ಅವರು ಇದಕ್ಕೆ ಗೌರವಾರ್ಥವಾಗಿ ಕೇವಲ 1 ರು. ಸಂಭಾವನೆ ಪಡೆಯುವುದಾಗಿ ಹೇಳಿದ್ದರು. ಇದಕ್ಕೆ ಅಂದು ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅಭಿನಂದನೆಯನ್ನೂ ಸಲ್ಲಿಸಿದ್ದರು. ಆದರೆ ಈ 1 ರುಪಾಯಿಯನ್ನು ಅವರಿಗೆ ಕೊಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ಅಂತಿಮವಾಗಿ 2019ರ ಆ.6ರಂದು ಸಂಜೆ ಸಾಳ್ವೆ ಅವರಿಗೆ ಕರೆ ಮಾಡಿದ್ದ ಸುಷ್ಮಾ, ನಾಳೆ ಬಂದು 1 ರುಪಾಯಿ ಪಡೆದುಕೊಂಡು ಹೋಗಿ ಎಂದಿದ್ದರು. ಈ ಕರೆ ಮಾಡಿದ 2 ಗಂಟೆಯಲ್ಲೇ ಸುಷ್ಮಾ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾಳ್ವೆ ಅವರ ಮನೆಗೆ ತೆರಳಿದ ಸುಷ್ಮಾರ ಪುತ್ರಿ ಬಾನ್ಸುರಿ, 1 ರುಪಾಯಿ ನಾಣ್ಯ ಹಸ್ತಾಂತರಿಸುವ ಮೂಲಕ ತಮ್ಮ ತಾಯಿಯ ವಾಗ್ದಾನ ಪೂರೈಸಿದರು.
ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.