ವಿಶ್ವಸಂಸ್ಥೆ ಭಾಷಣ ಮುನ್ನ ಸಾಲ್ವಡಾರ್‌ ಪ್ರೆಸಿಡೆಂಟ್ ಸೆಲ್ಫೀ ವೈರಲ್!

Published : Sep 28, 2019, 08:31 AM ISTUpdated : Sep 28, 2019, 07:00 PM IST
ವಿಶ್ವಸಂಸ್ಥೆ ಭಾಷಣ ಮುನ್ನ ಸಾಲ್ವಡಾರ್‌ ಪ್ರೆಸಿಡೆಂಟ್ ಸೆಲ್ಫೀ ವೈರಲ್!

ಸಾರಾಂಶ

ವಿಶ್ವಸಂಸ್ಥೆ ಭಾಷಣ ಮುನ್ನ ಸೆಲ್ಫಿ ತೆಗೆದುಕೊಂಡ ಎಲ್‌ ಸಾಲ್ವಡಾರ್‌ನ ಅಧ್ಯಕ್ಷ |  ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎಲ್‌ ಸಾಲ್ವಡಾರ್‌ ಪ್ರಧಾನಿ ನಯೀಬ್‌ ಬುಕೆಲೆ ಅವರಿಗೆ ಚೊಚ್ಚಲ ಬಾರಿ ಭಾಷಣ

ನ್ಯೂಯಾರ್ಕ್[ಸೆ.28]: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವುದು ಎಲ್ಲಾ ದೇಶಗಳ ಗಣ್ಯರಿಗೂ ಹೆಮ್ಮೆಯ ವಿಷಯ. ಆದರೆ ಎಲ್‌ ಸಾಲ್ವಡಾರ್‌ ದೇಶದ ಅಧ್ಯಕ್ಷ ಮಾತ್ರ ಭಾಷಣಕ್ಕೆ ಮೊದಲು ವೇದಿಕೆಯಲ್ಲೇ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಗುರುವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎಲ್‌ ಸಾಲ್ವಡಾರ್‌ ಅಧ್ಯಕ್ಷ ನಯೀಬ್‌ ಬುಕೆಲೆ ಅವರಿಗೆ ಚೊಚ್ಚಲ ಬಾರಿಗೆ ಭಾಷಣಕ್ಕೆ ಅವಕಾಶ ಕಲ್ಪಿಸಿತ್ತು. ಈ ವೇಳೆ ವೇದಿಕೆಗೆ ಬಂದ ನಯೀಬ್‌, ಭಾಷಣಕ್ಕೆ ಮೊದಲು ಅಲ್ಲೇ ಸೆಲ್ಫಿ ತೆಗೆದುಕೊಂಡರು. ಇದು ಸಭೆಯಲ್ಲಿ ಹಾಜರಿದ್ದವರಲ್ಲಿ ಅಚ್ಚರಿಗೆ ಕಾರಣವಾಯಿತು.

ಬಳಿಕ ಈ ಫೋಟೋ ಅನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿರುವ ನಯೀಬ್‌, ‘ನಾವು ಇಲ್ಲಿ ಮಾಡುವ ಉದ್ದದ ಭಾಷಣಕ್ಕಿಂತಲೂ ನಾವು ತೆಗೆದುಕೊಂಡ ಸೆಲ್ಫಿಗಳನ್ನೇ ಜನರು ಹೆಚ್ಚು ನೋಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕುವ ಕೆಲ ಚಿತ್ರಗಳು ಭಾಷಣಕ್ಕಿಂತಲೂ ಪ್ರಭಾವಿಯಾಗಿರುತ್ತವೆ. ವಿಶ್ವನಾಯಕರು ಭಾಗವಹಿಸುವ ಇಂತಹ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕವೂ ನಡೆಸಬಹುದು’ ಎಂದು ನಯೀಬ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ