
ತ್ರಿಶೂರ್:(ಏ.10): ನಿನ್ನಿಂದಾಗಲ್ಲ ಬಿಡು..ಇದು ಭಾರತದ ನಾರಿ ತನ್ನ ಜೀವನದ ಪ್ರತಿ ಹಂತದಲ್ಲೂ ಕೇಳಸಿಕೊಂಡು ಅರಗಿಸಿಕೊಳ್ಳುವ ಶಬ್ಧ. ಪುರುಷ ಜಗತ್ತಿನಿಂದ ಮಹಿಳೆ ಇದನ್ನು ಬಿಟ್ಟು ಬೇರೆ ಏನನ್ನೂ ಪಡೆದಿಲ್ಲ, ನಿರೀಕ್ಷಿಸಿಯೂ ಇಲ್ಲ.
ಆದರೆ ನನ್ನಿಂದಾಗದ್ದು ಯಾವುದೂ ಇಲ್ಲ ಎಂಬುದನ್ನು ಆಕೆ ಸಾಧನೆಯ ಮೂಲಕವೇ, ತನ್ನ ಇರುವಿಕೆಯ ಮೂಲಕವೇ ಪ್ರತೀ ಯುಗದಲ್ಲೂ ಹೇಳುತ್ತಲೇ ಇದ್ದಾಳೆ.
ಪರೀಕ್ಷೆಗೆ ತಡವಾದ ಕಾರಣಕ್ಕೆ ಶಾಲೆಗೆ ಕುದುರೆ ಏರಿ ಬಂದಿದ್ದ ಬಾಲಕಿಯ ಹೆಸರು ಇದೀಗ ಭಾರತದ ನಾಲಿಗೆ ಮೇಲೆ ಹರಿದಾಡುತ್ತಿದೆ.
ಅದರಲ್ಲೂ ಆನಂದ್ ಶರ್ಮಾ ಈಕೆಯ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ ಮೇಲಂತೂ, ಯುವ ಭಾರತದಲ್ಲಿ ಈಕೆಯದ್ದೇ ಮಾತು.
ಕೇರಳದ ತ್ರಿಶೂರ್ ಜಿಲ್ಲೆಯ ಕೃಷ್ಣಾ ಪರೀಕ್ಷೆಗೆ ಕುದುರೆ ಏರಿ ಬಂದು ಹೊಸ ಟ್ರೆಂಡ್ವೊಂದನ್ನು ಸೃಷ್ಟಿ ಮಾಡಿದ್ದಾರೆ. ಕೃಷ್ಣಾ ಕುದುರೆ ಓಡಿಸುತ್ತಿರುವ ವಿಡಿಯೋ ವೈರಲ್ ಆದ ಮೇಲೆ ಮಾಧ್ಯಮಗಳು ಈಕೆಯ ಸಂದರ್ಶನ ಮಾಡಿವೆ.
10ನೇ ತರಗತಿಯ ಕೊನೆಯ ಪರೀಕ್ಷೆಯಾದ್ದರಿಂದ ಆ ದಿನ ತನ್ನ ಜೀವನದ ವಿಶೇಷ ದಿನವಾಗಿತ್ತು. ಇದೇ ಕಾರಣಕ್ಕೆ ಶಾಲೆಗೆ ಕುದುರೆ ಏರಿ ಹೋಗಿದ್ದಾಗಿ ಕೃಷ್ಣಾ ತಿಳಿಸಿದ್ದಾಳೆ.
ಈ ಹಿಂದೆಯೂ ಹಲವು ಬಾರಿ ಕೃಷ್ಣಾ ಶಾಲೆಗೆ ಕುದುರೆ ಮೇಲೆಯೇ ಬಂದಿದ್ದಾಳಂತೆ. ವಿಶೇಷ ದಿನಗಳಂದು ತಾನು ಶಾಲೆಗೆ ಕುದುರೆ ಮೇಲೆ ಬರುವುದಾಗಿ ಕೃಷ್ಣಾ ಹೇಳಿದ್ದಾಳೆ.
7ನೇ ತರಗತಿಯಲ್ಲಿದ್ದಾಗಲೇ ಕೃಷ್ಣಾ ಕುದುರೆ ಸವಾರಿ ಕಲಿಯಲು ಪ್ರಾರಂಭಿಸಿದ್ದಳು. ಕುದುರೆ ಸವಾರಿ ಕುರಿತು ಆಸಕ್ತಿವಹಿಸಲು ಕಾರಣವನ್ನೂ ಹೇಳಿರುವ ಕೃಷ್ಣಾ, ಗೆಳೆಯನೊಬ್ಬ ಕುದುರೆ ಸವಾರಿ ಎಲ್ಲಾ ಮಹಿಳೆಯರಿಗಲ್ಲ, ಅದೇನಿದ್ದರೂ ಪುರುಷರು ಮಾಡುವ ಕೆಲಸ ಎಂದು ಹೇಳಿದ್ದ. ಅಲ್ಲದೇ ಕೇವಲ ಝಾನ್ಸಿ ಲಕ್ಷ್ಮೀಭಾಯೀ ಅಂತವರು ಮಾತ್ರ ಕುದುರೆ ಓಡಿಸಲಬ್ಬಲ್ಲರು ಎಂದು ಕಿಚಾಯಿಸಿದ್ದನಂತೆ.
ಇದನ್ನೇ ಸವಾಲಾಗಿ ತೆಗೆದುಕೊಂಡ ಕೃಷ್ಣಾ, ಸಾಮಾನ್ಯ ನಾರಿಯೂ ಕುದುರೆ ಓಡಿಬಲ್ಲಳು ಎಂದು ಸಾಬೀತುಪಡಿಸಲು ಕುದುರೆಯ ಲಗಾಮು ಹಿಡಿದಿದ್ದು.
ನವಭಾರತದಲ್ಲಿ ಮಹಿಳೆ ಪುರಷನಿಗೆ ಸಮನಾಗಿ ನಿಲ್ಲಬಲ್ಲಳು. ದೇಶ ನಿರ್ಮಾಣ ಕಾರ್ಯದಲ್ಲಿ ಪುರಷನಷ್ಟೇ ಕೊಡುಗೆ ನೀಡಬಲ್ಲಳು ಎಂಬ ಸತ್ಯವನ್ನು ಕುದುರೆ ಸವರಿ ಮೂಲಕ ಅರಿಕೆ ಮಾಡಿಕೊಟ್ಟ ಕೃಷ್ಣಾಳದ್ದು ನಿಜಕ್ಕೂ ಆದರ್ಶ ವ್ಯಕ್ತಿತ್ವ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.