ಸುವರ್ಣನ್ಯೂಸ್- ಕನ್ನಡಪ್ರಭದ ಇಬ್ಬರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

By Suvarna Web DeskFirst Published Nov 29, 2017, 11:15 AM IST
Highlights

ಕನ್ನಡಪ್ರಭ’ ಪತ್ರಿಕೆಯ ತುಮಕೂರು ವರದಿಗಾರ ಉಗಮ ಶ್ರೀನಿವಾಸ್ ಹಾಗೂ ‘ಸುವರ್ಣ ನ್ಯೂಸ್’ ಸುದ್ದಿವಾಹಿನಿಯ ಇನ್’ಪುಟ್ ಎಡಿಟರ್ ಎಂ.ಸಿ. ಶೋಭಾ, ಸಿನಿಮಾ ಪತ್ರಕರ್ತ ಕೆ.ಎಂ.ವೀರೇಶ್ ಸೇರಿದಂತೆ ನಲವತ್ತು ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ-2017’ ಪ್ರಕಟವಾಗಿದೆ.

ಬೆಂಗಳೂರು: ಕನ್ನಡಪ್ರಭ’ ಪತ್ರಿಕೆಯ ತುಮಕೂರು ವರದಿಗಾರ ಉಗಮ ಶ್ರೀನಿವಾಸ್ ಹಾಗೂ ‘ಸುವರ್ಣ ನ್ಯೂಸ್’ ಸುದ್ದಿವಾಹಿನಿಯ ಇನ್’ಪುಟ್ ಎಡಿಟರ್ ಎಂ.ಸಿ. ಶೋಭಾ, ಸಿನಿಮಾ ಪತ್ರಕರ್ತ ಕೆ.ಎಂ.ವೀರೇಶ್ ಸೇರಿದಂತೆ ನಲವತ್ತು ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ-2017’ ಪ್ರಕಟವಾಗಿದೆ.

ಒಟ್ಟು ನಲವತ್ತು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದ್ದು ಮುಂದಿನ ವರ್ಷದ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತರು: ಸಂಜೆವಾಣಿ ಪತ್ರಿಕೆಯ ವೈ.ಎಸ್.ಎಲ್. ಸ್ವಾಮಿ, ಪ್ರಜಾವಾಣಿಯ ಶಿವಕುಮಾರ್ ಕಣಸೋಗಿ ಹಾಗೂ ಬಿ.ಎನ್. ಶ್ರೀಧರ್, ವಿಜಯ ಕರ್ನಾಟಕ ಪತ್ರಿಕೆಯ ಸಂಗಮೇಶ ಚೂರಿ, ಅಂತರಂಗ ಸುದ್ದಿ ಪತ್ರಿಕೆಯ ಮಾಳಪ್ಪ ಅಡಸಾರೆ, ಕರ್ನಾಟಕ ಸಂಧ್ಯಾಕಾಲ ಪತ್ರಿಕೆಯ ಡಿ. ಶಿವಲಿಂಗಪ್ಪ, ಈಟಿವಿ ಕನ್ನಡ ಸುದ್ದಿವಾಹಿನಿಯ ಚೆನ್ನಬಸವಣ್ಣ, ಟಿವಿ9 ಸುದ್ದಿವಾಹಿನಿಯ ಬಸವರಾಜ ದೊಡ್ಡಮನಿ, ರಾಯಚೂರು ವಾಣಿ ಪತ್ರಿಕೆಯ ಶಿವಪ್ಪ ಮಡಿವಾಳ, ಜನಕೂಗು ಪತ್ರಿಕೆಯ ದತ್ತು ಸರ್ಕಿಲ್, ಲೋಕದರ್ಶನ ಪತ್ರಿಕೆಯ ಸಾದಿಕ್ ಅಲಿ, ಈಶಾನ್ಯ ಟೈಮ್ಸ್‌ನ ಸಿ. ಮಂಜುನಾಥ್, ಸಂಜೆ ದರ್ಶನ ಪತ್ರಿಕೆಯ ಮಹೇಶ ಅಂಗಡಿ, ಛಾಯಾಚಿತ್ರಗ್ರಾಹಕ ರಾಮು ವಗ್ಗಿ, ದಿ ಹಿಂದು ಪತ್ರಿಕೆಯ ವಿಜಯಕುಮಾರ್ ಪಾಟೀಲ್ ಹಾಗೂ ಬಾಗೇಶ್ರಿ, ಇಂಡಿಯನ್ ಎಕ್ಸ್‌ಪ್ರೆಸ್ ಬಾಲಕೃಷ್ಣ ರಾಮಚಂದ್ರ ವಿಭೂತೆ, ಸಂಜೆದರ್ಪಣದ ಗಣಪತಿ ಗಂಗೊಳ್ಳಿ, ಸಮಯ ನ್ಯೂಸ್ ರವಿ ಬಿದನೂರು, ಸುದ್ದಿಗಿಡುಗ ಪತ್ರಿಕೆಯ ಷ. ಮಂಜುನಾಥ, ಉದಯ ಟಿವಿಯ ಎಚ್.ಎನ್. ಮಲ್ಲೇಶ್, ಈ ಮುಂಜಾನೆ ಪತ್ರಿಕೆಯ ಮಹಮದ್ ಯೂನುಸ್, ಪ್ರಿಯ ಪತ್ರಿಕೆಯ ಕೋ.ನ. ಮಂಜುನಾಥ್, ಹಿರಿಯ ಪತ್ರಕರ್ತ ಕೆ.ಆರ್. ಮಂಜುನಾಥ್, ಜಯಕಿರಣ ಪತ್ರಿಕೆಯ ಬಾಳ ಜಗನ್ನಾಥ ಶೆಟ್ಟಿ, ಸುದ್ದಿ ಬಿಡುಗಡೆ ಪತ್ರಿಕೆಯ ಡಾ.ಯು.ಪಿ. ಶಿವಾನಂದ, ವಿಜಯವಾಣಿ ಪತ್ರಿಕೆಯ ರಮೇಶ ಕುಟ್ಟಪ್ಪ ಹಾಗೂ ಶಿವಣ್ಣ, ಛಾಯಾಗ್ರಾಹಕ ಬಸವಣ್ಣ, ಆಂದೋಲನ ಪತ್ರಿಕೆಯ ಗೋವಿಂದ, ದೂರದರ್ಶನದ ವಸಂತಕುಮಾರ್, ಹಿರಿಯ ಪತ್ರಕರ್ತ ಡಿ. ಎಸ್. ಶಿವರುದ್ರಪ್ಪ, ಜಯಮಿತ್ರದ ಜಯ ಕುಮಾರ್, ಎಕನಾಮಿಕ್ ಟೈಮ್ಸ್‌ನ ಸೌಮ್ಯ ಅಜಿ, ಛಾಯಾಗ್ರಾಹಕ ಸ್ಟಾಲಿನ್ ಪಿಂಟೊ, ಈನಾಡು ಪತ್ರಿಕೆಯ ಆದಿನಾರಾಯಣ, ಸುದ್ದಿ ಟಿವಿಯ ಮುಮ್ತಾಜ್ ಆಲೀಂ, ವಾಲ್ಮೀಕಿ ರೈಟ್ಸ್ ಆಫ್ ಇಂಡಿಯಾದ ಟಿ. ಅಶ್ವತ್ಥರಾಮಯ್ಯ ಸೇರಿ ನಲವತ್ತು ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ

 

click me!