ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಬಿಡಿಎ ಕೆಲಸವಲ್ಲ: ರಾಜೀವ್ ಚಂದ್ರಶೇಖರ್

Published : Nov 29, 2017, 10:34 AM ISTUpdated : Apr 11, 2018, 12:41 PM IST
ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಬಿಡಿಎ ಕೆಲಸವಲ್ಲ: ರಾಜೀವ್ ಚಂದ್ರಶೇಖರ್

ಸಾರಾಂಶ

ನಗರದ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅಭಿವೃದ್ಧಿಪೃಡಿಸುವುದು ಬಿಡಿಎ ಕೆಲಸವಲ್ಲ. ನಗರ ಯೋಜನಾ ಸಮಿತಿಯ ಕೆಲಸ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರು: ನಗರದ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಅಭಿವೃದ್ಧಿಪೃಡಿಸುವುದು ಬಿಡಿಎ ಕೆಲಸವಲ್ಲ. ನಗರ ಯೋಜನಾ ಸಮಿತಿಯ ಕೆಲಸ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ರೂಪಿಸುವ ಮಾಸ್ಟರ್ ಪ್ಲ್ಯಾನ್ ಅನೇಕ ‘ಉಪಾಯ’ಗಳನ್ನು ಹೊಂದಿರುತ್ತದೆ. ಆದರೆ, ಅದರ ಮುಖ್ಯ ಉದ್ದೇಶ ಚುನಾವಣೆ ಸಮಯದಲ್ಲಿ ‘ಕೊಡುಗೆ’ಗಳನ್ನು ವಾಪಸ್ ಪಡೆಯುವ ಸಂಬಂಧ ಬಿಲ್ಡರ್‌ಗಳಿಗೆ ಭೂಬಳಕೆ ಬದಲಾವಣೆ ಮಾಡುವುದೇ

ಆಗಿರುತ್ತದೆ.  ನಾಗರಿಕರ ಗಮನವನ್ನು ಕೇವಲ ಕಾಗದದ ಮೇಲೆಯೇ ಉಳಿಯುವಂಥ ‘ಉಪಾಯ’ಗಳ ಕಡೆಗೆ ಹರಿಸಿ ಬಿಲ್ಡರ್‌ಗಳು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಈ ಮಾಸ್ಟರ್ ಪ್ಲ್ಯಾನ್ ಬಳಕೆಯಾಗುವ ಆತಂಕ ನನ್ನನ್ನು ಕಾಡುತ್ತಿದೆ ಎಂದು ಅವರು ಟ್ವೀಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಯ ಮೊದಲು ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮಾಸ್ಟರ್ ಪ್ಲ್ಯಾನ್‌ನ ಮೂಲಕ ಭೂ ಬಳಕೆ ನಿಯಮಗಳನ್ನು ಬದಲಾಯಿಸಲು ಮುಂದಾದರೆ ಬೆಂಗಳೂರಿನ ಜನರು ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಿಸಬಾರದು ಎಂದು ರಾಜೀವ್ ತೀಕ್ಷ್ಣವಾಗಿ ಹೇಳಿದ್ದಾರೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!