’ಮೀ ಟೂ’ ಅಭಿಯಾನದಲ್ಲಿ ಅಮಿತ್ ಶಾ ಎಂಟ್ರಿ

By Web DeskFirst Published Oct 14, 2018, 8:30 AM IST
Highlights

ಮೀ ಟೂ’ ಅಕ್ಬರ್‌ ವಿರುದ್ಧದ ಆರೋಪ ಪರಿಶೀಲನೆ: ಅಮಿತ್‌ ಶಾ |  ಇಂದು ಅಕ್ಬರ್‌ ದೆಹಲಿಗೆ: ಬಿಜೆಪಿ ನಾಯಕರ ಭೇಟಿ ಸಂಭವ 

ನವದೆಹಲಿ (ಅ. 14): ಪತ್ರಕರ್ತರಾಗಿದ್ದಾಗ ಹಲವು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆಪಾದನೆಗೆ ಗುರಿಯಾಗಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್‌ ರಾಜೀನಾಮೆಗೆ ಒತ್ತಡ ಹೆಚ್ಚಿರುವಾಗಲೇ, ಅಕ್ಬರ್‌ ವಿರುದ್ಧದ ಆರೋಪಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಅಕ್ಬರ್‌ ವಿರುದ್ಧದ ಆರೋಪಗಳು ನಿಜವೋ ಸುಳ್ಳೋ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಬರೆಯಲಾಗಿರುವ ಮಾಹಿತಿ ಹಾಗೂ ಅದನ್ನು ಬರೆದವರ ಸತ್ಯಾಸತ್ಯತೆಯನ್ನೂ ನಾವು ಗಮನಿಸಬೇಕಾಗಿದೆ. ನನ್ನ ಹೆಸರು ಬಳಸಿ ನೀವು ಕೂಡ ಏನು ಬೇಕಾದರೂ ಬರೆಯಬಹುದು. ಆದಾಗ್ಯೂ ಆ ಬಗ್ಗೆ ಪರಿಶೀಲಿಸುತ್ತೇವೆ ಎಂದರು.

ಈ ನಡುವೆ, ವಿದೇಶ ಪ್ರವಾಸ ಮುಗಿಸಿ ಅಕ್ಬರ್‌ ಅವರು ಭಾನುವಾರ ದೆಹಲಿಗೆ ಮರಳಲಿದ್ದಾರೆ. ಅವರು ಪಕ್ಷದ ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆರೋಪಗಳ ಕುರಿತಂತೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

‘ಮೀ ಟೂ’ ಅಭಿಯಾನದಡಿ ಹಲವಾರು ಮಹಿಳಾ ಪತ್ರಕರ್ತರು ಅಕ್ಬರ್‌ ಅವರ ಕಾಮಚೇಷ್ಟೆಕುರಿತಂತೆ ಆರೋಪಗಳನ್ನು ಮಾಡಿದ್ದರು.

click me!